More

    ಗ್ರಾ.ಪಂ ಚುನಾವಣೆಯಲ್ಲಿ ಪತಿ ವಿರುದ್ಧವೇ ಸ್ಪರ್ಧೆಗಿಳಿದ ಪತ್ನಿ: ದಂಪತಿ ಮಾತು ಕೇಳಿದ್ರೆ ಅಚ್ಚರಿ ಖಂಡಿತ!

    ಕೊಡಗು: ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಜೋರಾಗಿದ್ದು, ಕೊಡಗು ಜಿಲ್ಲೆಯಲ್ಲಂತೂ ಪತಿ-ಪತ್ನಿಯ ನಡುವೆಯೇ ನೇರ ಹಣಾಹಣಿ ಏರ್ಪಟ್ಟಿದೆ.

    ಸೋಮವಾರಪೇಟೆ ತಾಲೂಕಿನ ಏಳನೇ ಹೊಸಕೋಟೆ ಗ್ರಾಮ ಪಂಚಾಯಿತಿಯು ಪತಿ-ಪತ್ನಿಯ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದ್ದು, ಚರ್ಚೆಯ ಕೇಂದ್ರ ಬಿಂದುವಾಗಿದೆ. ತೊಂಡೂರು ಗ್ರಾಮದ ನಿವಾಸಿ ಕೆ.ಎನ್​. ಕಿಶೋರ್ ಹಾಗೂ ಪತ್ನಿ ಟಿ.ಎಸ್​. ಶ್ರೀಜಾ ಚುನಾವ ಕಣಕ್ಕೆ ಇಳಿದಿದ್ದು,​ ಕಿಶೋರ್ ಒಂದು ಮತ್ತು ಎರಡನೇ ವಾರ್ಡ್​ನಿಂದ ಸ್ಪರ್ಧಿಸಿದರೆ, ಶ್ರೀಜಾ 2ನೇ ವಾರ್ಡ್‌ನಿಂದ ಪತಿ ವಿರುದ್ದವೇ ಸ್ಪರ್ಧೆಗಿಳಿದಿದ್ದಾರೆ.

    ಇದನ್ನೂ ಓದಿ: ಪತ್ನಿ ಊರಿಗೆ ಹೋದಳೆಂದು ಸ್ನೇಹಿತೆಯನ್ನ ಮನೆಗೆ ಕರೆಸಿಕೊಂಡ ಟೆಕ್ಕಿಗೆ ಕಾದಿತ್ತು ಶಾಕ್​!

    ಸಾಮಾನ್ಯ ಕ್ಷೇತ್ರಕ್ಕೆ ಪಕ್ಷೇತರರಾಗಿ ಇಬ್ಬರ ನಡುವೆ ಹಣಾಹಣಿ ಜೋರಾಗಿದೆ. ವಿಶೇಷವೆಂದರೆ ಇಬ್ಬರು ಒಟ್ಟಿಗೆ ಪ್ರಚಾರ ನಡೆಸುತ್ತಿದ್ದಾರೆ. 2ನೇ ವಾರ್ಡ್​ನಿಂದ ಹಿಂದಕ್ಕೆ ಸರಿಯುವಂತೆ ಬೆಂಬಲಿಗರು ಒತ್ತಾಯ ಮಾಡಿದರೂ ಕಿಶೋರ್ ಕಿವಿಗೊಡದೆ ತಮ್ಮ ಪ್ರಚಾರ ಕಾರ್ಯ ಮುಂದುವರಿಸಿದ್ದಾರೆ.

    ಮಹಿಳಾ ಸ್ವಸಹಾಯ ಸಂಘಗಳ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡುತ್ತಿದ್ದೇನೆ. ಮಹಿಳೆಯರ ಕಷ್ಟಗಳು ಏನೆಂದು ನನಗೆ ತಿಳಿದಿದೆ. ಹೀಗಾಗಿ ನಾನು ಸ್ಪರ್ಧೆ ಮಾಡಿದ್ದೇನೆಂದು ಶ್ರೀಜಾ ಅವರು ಹೇಳಿದರೆ, ನಮ್ಮ ಊರಿನಲ್ಲಿ ಯಾವುದೇ ಯೋಜನೆಗಳು ಜನರಿಗೆ ತಲುಪುತ್ತಿಲ್ಲ. ಯಾವ ಕೆಲಸಗಳೂ ಆಗುತ್ತಿಲ್ಲ. ನಮ್ಮಿಬ್ಬರಲ್ಲಿ ಯಾರೇ ಗೆದ್ದರೂ ಒಟ್ಟಿಗೆ ಕೆಲಸ ಮಾಡುತ್ತೇವೆಂದು ಎಂಬುದು ಕಿಶೋರ್​ ಅವರ ಮಾತಾಗಿದೆ.

    ಪತಿ-ಪತ್ನಿ ನಡುವಿನ ಸ್ಪರ್ಧೆ ಇದೀಗ ಮತದಾರರಲ್ಲಿ ಗೊಂದಲ ಮೂಡಿಸಿರುವ ಜತೆಗೆ ಬಹಳ ಕುತೂಹಲವನ್ನು ಉಂಟುಮಾಡಿದೆ. (ದಿಗ್ವಿಜಯ ನ್ಯೂಸ್​)

    ಇದನ್ನೂ ಓದಿ: ಕರೊನಾ ಲಸಿಕೆ ಪಡೆಯುವುದು ಕಡ್ಡಾಯವಲ್ಲ, ಐಚ್ಛಿಕ: ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟನೆ

    ಜನವರೀಲಿ ರೇಷನ್​ಕಾರ್ಡ್​ಗೆ ಅರ್ಜಿ?

    Web Exclusive | ಅಂಗವಿಕಲರು-ವೃದ್ಧರಿಗಿಲ್ಲ ಮತಹಕ್ಕು; ಗ್ರಾಪಂ ಮತದಾನದಿಂದ ವಂಚಿತರು…

    PHOTOS| ವಿಶ್ವದ ಒಂಟಿ ಮನೆಯ ರಹಸ್ಯ ಕೇಳಿದ್ರೆ ನಿಮಗೆಲ್ಲ ಅಚ್ಚರಿಯಾಗೋದು ಗ್ಯಾರೆಂಟಿ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts