More

    ಕೆ.ಎಲ್​. ರಾಹುಲ್​ಗೆ ಶಸ್ತ್ರಚಿಕಿತ್ಸೆ ಯಶಸ್ವಿ: ಆದಷ್ಟು ಬೇಗ ಮತ್ತೆ ಮೈದಾನಕ್ಕಿಳಿಯಲು ನಿರ್ಧಾರ

    ನವದೆಹಲಿ: ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಕ್ಷೇತ್ರ ರಕ್ಷಣೆಯ ವೇಳೆ ಗಾಯಗೊಂಡಿದ್ದ ಲಖನೌ ಸೂಪರ್​ ಜೇಂಟ್ಸ್​ ತಂಡದ ನಾಯಕ ಕೆ.ಎಲ್​. ರಾಹುಲ್​ಗೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.

    ರಾಹುಲ್​ ಅವರ ಬಲ ತೊಡೆಗೆ ನೋವಾಗಿತ್ತು. ಮಂಗಳವಾರ ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ನೀಡಿರುವ ರಾಹುಲ್​, ವೈದ್ಯಕೀಯ ಸಿಬ್ಬಂದಿ ಮತ್ತು ವೈದ್ಯರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಅಲ್ಲದೆ, ಆದಷ್ಟು ಬೇಗ ಮೈದಾನಕ್ಕೆ ಮರಳುವುದಾಗಿ ರಾಹುಲ್​ ಹೇಳಿದ್ದಾರೆ.

    ಮೇ 1ರಂದು ಲಖನೌದ ಎಕಾನಾ ಸ್ಪೋರ್ಟ್ಸ್ ಸಿಟಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕ್ಷೇತ್ರ ರಕ್ಷಣೆ ಮಾಡುವ ವೇಳೆ ರಾಹುಲ್​ ಅವರ ಬಲ ತೊಡೆಗೆ ನೋವಾಗಿತ್ತು. ಸ್ನಾಯು ಸೆಳೆತವಾಗಿ ತುಂಬಾ ನೋವಿನಿಂದ ಬಳಲಿದರು. ಆರ್​ಸಿಬಿ ವಿರುದ್ಧದ ಪಂದ್ಯವನ್ನು ಸುಲಭವಾಗಿ ಗೆಲ್ಲಬಹುದಾಗಿತ್ತು. ಆದರೆ, ರಾಹುಲ್​ ಗಾಯಗೊಂಡಿದ್ದರಿಂದ ಪಂದ್ಯವನ್ನು ಕೈಚೆಲ್ಲ ಬೇಕಾಯಿತು.

    ಇದನ್ನೂ ಓದಿ: ಯಾರು ಈ ಸೆಹರ್​ ಶಿನ್ವಾರಿ? ಪ್ರಧಾನಿ ಮೋದಿ ವಿರುದ್ಧ ಮಾತನಾಡಿ ಮಂಗಳಾರತಿ ಮಾಡಿಸಿಕೊಂಡ ನಟಿ

    ನೋವಿನ ಕಾರಣ ರಾಹುಲ್​, ಪಂದ್ಯಗಳಿಂಗ ಹೊರಗುಳಿಯಬೇಕಾಯಿತು. ಅಲ್ಲದೆ, ಮುಂದಿನ ತಿಂಗಳು ಓವಲ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಿಂದಲೂ ರಾಹುಲ್​ ಹೊರಗುಳಿದಿದ್ದಾರೆ. ಅವರ ಬದಲಾಗಿ ಇಶಾನ್ ಕಿಶನ್​ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ.

    ಇದೀಗ ಯಶಸ್ವಿ ಶಸ್ತ್ರಚಿಕಿತ್ಸೆಯಿಂದ ಗುಣಮುಖರಾಗುತ್ತಿರುವ ರಾಹುಲ್​, ಮರಳಿ ತಂಡವನ್ನು ಸೇರುವ ಬಯಕೆ ವ್ಯಕ್ತಪಡಿಸಿದ್ದಾರೆ. ಎಲ್ಲರಿಗೂ ನಮಸ್ಕಾರ, ನಾನು ನನ್ನ ಶಸ್ತ್ರಚಿಕಿತ್ಸೆಯನ್ನು ಮುಗಿಸಿದ್ದೇನೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ರಾಹುಲ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ನಾನೀಗ ಚೇತರಿಕೆಯ ಹಾದಿಯಲ್ಲಿದ್ದೇನೆ ಮತ್ತು ಮೈದಾನಕ್ಕೆ ಮರಳಲು ನಿರ್ಧರಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ. (ಏಜೆನ್ಸೀಸ್​)

    ಐಶ್ವರ್ಯಾ ಬಳಿಕ ಪೊಲೀಸ್​ ಠಾಣೆಯ ಮೆಟ್ಟಿಲೇರಿದ ರಜನಿಕಾಂತ್ ಎರಡನೇ ಪುತ್ರಿ ಸೌಂದರ್ಯ​!

    ಪರಪುರುಷನ ಜತೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಲೇಡಿ ಪೊಲೀಸ್: ಪತ್ನಿಯ ಮಾತು ಕೇಳಿ ಪತಿಗೆ ಆಘಾತ ​

    ಬಲೂನ್​ನೊಂದಿಗೆ ಆಟವಾಡುವಾಗ ಬಾವಿಗೆ ಬಿದ್ದು ಮೃತಪಟ್ಟ 3 ವರ್ಷದ ಮಗು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts