More

    ಯಾರು ಈ ಸೆಹರ್​ ಶಿನ್ವಾರಿ? ಪ್ರಧಾನಿ ಮೋದಿ ವಿರುದ್ಧ ಮಾತನಾಡಿ ಮಂಗಳಾರತಿ ಮಾಡಿಸಿಕೊಂಡ ನಟಿ

    ನವದೆಹಲಿ: ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಅವರನ್ನು ಬಂಧಿಸಿರುವ ಬೆನ್ನಲ್ಲೇ ದೇಶಾದ್ಯಂತ ಹಿಂಸಾಚಾರ ಭುಗಿಲೆದ್ದಿದೆ. ಪಾಕ್​ನಲ್ಲಿ ನಿರ್ಮಾಣವಾಗಿರುವ ನಾಗರಿಕ ಯುದ್ಧದಂತಹ ಪರಿಸ್ಥಿತಿ ಹಾಗೂ ಗಲಭೆಗೆ ಪ್ರಧಾನಿ ಮೋದಿ ಅವರನ್ನು ದೂಷಿಸುವ ಮೂಲಕ ಪಾಕಿಸ್ತಾನದ ನಟಿಯೊಬ್ಬಳು ಸುದ್ದಿಯಾಗಿದ್ದಾಳೆ. ಅಲ್ಲದೆ, ಸಾಕಷ್ಟು ಆಕ್ರೋಶಕ್ಕೂ ಗುರಿಯಾಗಿದ್ದಾಳೆ.

    ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಬಂಧನ ಬೆನ್ನಲ್ಲೇ ದೇಶಾದ್ಯಂತ ಭುಗಿಲೆದ್ದಿರುವ ಹಿಂಸಾಚಾರಕ್ಕೆ ಪ್ರಧಾನಿ ಮೋದಿ ಅವರೇ ಕಾರಣ. ನನ್ನ ದೇಶ ಪಾಕಿಸ್ತಾನದಲ್ಲಿ ಈಗ ಉಂಟಾಗಿರುವ ಅವ್ಯವಸ್ಥೆ ಮತ್ತು ಭಯೋತ್ಪಾದನೆಯನ್ನು ಹರಡುತ್ತಿರುವ ಭಾರತದ ಪ್ರಧಾನಿ ಮತ್ತು ಭಾರತೀಯ ಗುಪ್ತಚರ ಸಂಸ್ಥೆ RAW ವಿರುದ್ಧ ನಾನು ದೂರು ದಾಖಲಿಸಬೇಕಾಗಿದೆ, ಯಾರಾದರೂ ದೆಹಲಿ ಪೊಲೀಸರ ವೆಬ್​ಸೈಟ್​ ಲಿಂಕ್​ ಇದ್ದರೆ ಕಳುಹಿಸಿಕೊಡಿ ಎಂದು ಕೇಳಿದ್ದಾಳೆ. ಭಾರತೀಯ ನ್ಯಾಯಾಲಯಗಳು ಸ್ವತಂತ್ರವಾಗಿದ್ದರೆ ಅಲ್ಲಿನ ಸುಪ್ರೀಂ ಕೋರ್ಟ್ ನನಗೆ ನ್ಯಾಯವನ್ನು ನೀಡುತ್ತದೆ ಎಂದು ನನಗೆ ಖಾತ್ರಿಯಿದೆ ಎಂದು ಸೆಹರ್ ಶಿನ್ವಾರಿ ಟ್ವೀಟ್​ನಲ್ಲಿ ಹೇಳಿಕೊಂಡಿದ್ದಾಳೆ.

    ಜಾಲತಾಣದಲ್ಲಿ ಮುಖಭಂಗ

    ನಟಿಯ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ದೆಹಲಿ ಪೊಲೀಸರು ನಮ್ಮ ಕಾರ್ಯವ್ಯಾಪ್ತಿ ಪಾಕಿಸ್ತಾನಕ್ಕೆ ಒಳಪಡುವುದಿಲ್ಲ. ನಿಮ್ಮ ದೇಶದಲ್ಲಿ ಇಂಟರ್​ನೆಟ್​ ಸೌಲಭ್ಯ ಕಡಿತಗೊಂಡಿದ್ದರೂ ನೀವು ಹೇಗೆ ಟ್ವೀಟ್​ ಮಾಡುತ್ತಿದ್ದೀರಾ ಎಂದು ಪ್ರಶ್ನಿಸುವ ಮೂಲಕ ಟಾಂಗ್​ ಕೊಟ್ಟಿದ್ದಾರೆ. ಇದೀಗ ಈ ವಿಚಾರ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದ್ದು, ಯಾರು ಈ ಸೆಹರ್​ ಶಿನ್ವಾರಿ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಆಕೆಯ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ. ಆಕೆಗೆ ಹಿಗ್ಗಾಮುಗ್ಗ ನಿಂದಿಸುತ್ತಿದ್ದ ನೆಟ್ಟಿಗರು ಮಹಾ ಮಂಗಳಾರತಿ ಮಾಡಿದ್ದಾರೆ.

    ಇದನ್ನೂ ಓದಿ: ಪರಪುರುಷನ ಜತೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಲೇಡಿ ಪೊಲೀಸ್: ಪತ್ನಿಯ ಮಾತು ಕೇಳಿ ಪತಿಗೆ ಆಘಾತ ​

    ಯಾರು ಈ ಸೆಹರ್​ ಶಿನ್ವಾರಿ?

    ಅಂದಹಾಗೆ ಸೆಹರ್ ಶಿನ್ವಾರಿ ಹುಟ್ಟಿದ್ದು ಪಾಕಿಸ್ತಾನದ ಹೈದರಾಬಾದ್​ನಲ್ಲಿ. ಖೈಬರ್‌ನಲ್ಲಿ “ಸೈರ್ ಸಾವಾ ಸೈರ್” ಎಂಬ ಹಾಸ್ಯ ಸರಣಿಯೊಂದಿಗೆ 2014 ರಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಿದಳು. 2015 ರಲ್ಲಿ ಕರಾಚಿ ಸ್ಟೇಷನ್​ ಮಾಧ್ಯಮದಲ್ಲಿ ಬೆಳಗಿನ ಕಾರ್ಯಕ್ರಮದ ನಿರೂಪಕಿಯಾಗಿಯು ಕೆಲಸ ಮಾಡಿದ್ದಾಳೆ.

    ಸಾಮಾಜಿಕ ಜಾಲತಾಣದಲ್ಲಿ ತನ್ನ ನಟನೆ ಮತ್ತು ವೈರಲ್ ವಿಡಿಯೋಗಳಿಂದಲೇ ಸೆಹರ್​ ಹೆಸರುವಾಸಿಯಾಗಿದ್ದಾಳೆ. ಟಿಕ್‌ಟಾಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಸೆಹರ್​ ತುಂಬಾ ಸಕ್ರಿಯಳಾಗಿದ್ದಾಳೆ. ಇನ್​ಸ್ಟಾಗ್ರಾಂನಲ್ಲಿ 33,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾಳೆ. ಆಕೆಯ ಟ್ವೀಟ್‌ಗಳು ಈ ಹಿಂದೆ ಮಾಧ್ಯಮಗಳ ಗಮನವನ್ನು ಸೆಳೆದಿದ್ದವು. (ಏಜೆನ್ಸೀಸ್​)

    ಫಲಿತಾಂಶಕ್ಕೂ ಮುನ್ನವೇ ಚಾಮುಂಡೇಶ್ವರಿ ಕ್ಷೇತ್ರದ ಸೋಲೊಪ್ಪಿಕೊಂಡ ಮಾಜಿ ಸಿಎಂ ಸಿದ್ದರಾಮಯ್ಯ!

    ಜಗತ್ತನ್ನೇ ಕಬ್ಜಾ ಮಾಡಿಕೊಂಡ ತಂತ್ರಜ್ಞಾನ!; ಇಂದು ರಾಷ್ಟ್ರೀಯ ತಂತ್ರಜ್ಞಾನ ದಿನ

    ವಾಟ್ಸ್​ಆ್ಯಪ್ ಬಳಕೆದಾರರ ಮೈಕ್ರೋಫೋನ್ ದುರ್ಬಳಕೆ?; ವಾಟ್ಸ್​ಆ್ಯಪ್​ ವಿಶ್ವಾಸಾರ್ಹ ಜಾಲತಾಣವಲ್ಲ ಎಂದ ಮಸ್ಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts