More

    ಗಾಯದ ಸಮಸ್ಯೆ; ಐಪಿಎಲ್​, WTC ಫಿನಾಲೆಯಿಂದ ಹೊರಗುಳಿದ ಕೆ.ಎಲ್​. ರಾಹುಲ್​

    ಮುಂಬೈ: ಸೋಮವಾರ ಲಖನೌ ಸೂಪರ್​ಜೈಂಟ್ಸ್​ ಹಾಗೂ ರಾಯಲ್​ ಚಾಲೆಂಜರ್ಸ್​​ ಪಂದ್ಯದ ವೇಳೆ ಫೀಲ್ಡಿಂಗ್​ ಸಮಯದಲ್ಲಿ ಕಾಲಿನ ಗಾಯಕ್ಕೆ ತುತ್ತಾಗಿದ್ದ ಬ್ಯಾಟರ್​ ಕೆ.ಎಲ್​. ರಾಹುಲ್ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.

    ​ಹಾಲಿ ಐಪಿಎಲ್​ ಹಾಗೂ ಮುಂಬರುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಿಂದ ಹೊರಗುಳಿಯುವುದಾಗಿ ರಾಹುಲ್​ ಘೋಷಿಸಿದ್ದಾರೆ.

    ಕಠಿಣವಾದ ಕರೆ

    ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಕ್ರಿಕೆಟಿಗ ನಾನು ನನ್ನ ವೈದ್ಯಕೀಯ ತಂಡದೊಂದಿಗೆ ಚರ್ಚಿಸಿದ ನಂತರ ಕಾಲಿನ ಶಸ್ತ್ರಚಕಿತ್ಸೆಗೆ ಒಳಗಾಗಬೇಕಿದೆ. ನನ್ನ ಗಮನ ಏನಿದರೂ ಪುನರ್​ವಸತಿ ಹಾಗು ಚೇತರಿಕೆಯ ಮೇಲೆ ಗಮನ ಇರುತ್ತದೆ. ಇದು ಬಹಲ ಕಠಿಣವಾದ ಕರೆಯಾಗಿದ್ದು ಪೂರ್ಣಪ್ರಮಾಣವಾಗಿ ಚೇತರಿಸಿಕೊಳ್ಳುವವರೆಗೂ ಇದು ಸರಿ ಎನ್ನಸಿದೆ.

    ತಂಡದ ನಾಯಕನಾಗಿ ನಾನು ಈ ಸಮಯದಲ್ಲಿ ಅಲ್ಲಿರದಿರುವುದು ತುಂಬಾ ನೋವಾಗಿದೆ. ಆದರೆ, ತಂಡದ ಸದಸ್ಯರು ತಮ್ಮ ಉತ್ತಮ ಪ್ರದರ್ಶನದ ಮೂಲಕ ಪುಟಿದೇಳುತ್ತಾರೆ ಎಂಬ ವಿಶ್ವಾಸ ನನಗಿದೆ. ನಾನು ನಿಮ್ಮೆಲ್ಲರ ಜೊತೆ ಸೇರಿ ಅವರನ್ನು ಹುರಿದುಂಬಿಸುತ್ತೇನೆ ಮತ್ತು ಪ್ರತಿ ಪಂದ್ಯವನ್ನು ವೀಕ್ಷಿಸುತ್ತೇನೆ ಎಂದು ಲಕ್ನೋ ಸೂಪರ್​ಜೈಂಟ್ಸ್​ ತಂಡವನ್ನು ಉಲ್ಲೇಖಿಸಿದ್ದಾರೆ.

    KL Rahul

    ಇದನ್ನೂ ಓದಿ: ಬಿರುಬೇಸಿಗೆಯಲ್ಲೂ ತಂಪೆರೆದ ಮಳೆರಾಯ; ರಾಷ್ಟ್ರ ರಾಜಧಾನಿ ಸಖತ್​… ಕೂಲ್​

    ಮೊದಲ ಆದ್ಯತೆ

    ಮುಂದಿನ ತಿಂಗಳು ಓವಲ್​ನಲ್ಲಿ ನಡೆಯುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​(WTC) ಫಿನಾಲೆಯಲ್ಲಿ ನಾನು ಆಡುವುದಿಲ್ಲ. ಆದರೆ, ನೀಲಿ ಬಣ್ಣದ ಜೆರ್ಸಿ ತೊಡಲು ಮತ್ತು ದೇಶವನ್ನು ಪ್ರತಿನಿಧಿಸಲು ಸದಾ ಸಿದ್ದನಿರುತ್ತೇನೆ. ಈ ವಿಚಾರವಾಗಿ ನಾನು ನನ್ನ ಗಮನ ಹಾಗೂ ಮೊದಲ ಆದ್ಯತೆ ನೀಡುತ್ತೇನೆ.

    ನಾನು ನನ್ನ ಅಭಿಮಾನಿ, ಬಿಸಿಸಿಐ, ಲಕ್ನೋ ಸೂಪರ್​ಜೈಂಟ್ಸ್​ ತಂಡದ ಮ್ಯಾನೇಜ್​ಮೆಂಟ್​ ಹಾಗೂ ಆಟಗಾರರಿಗೆ ಕೃತಜ್ಞತೆ ತಿಳಿಸ ಬಯಸುತ್ತೇನೆ. ಏಕೆಂದರೆ ನನ್ನ ಕಷ್ಟಕಾಲದಲ್ಲಿ ತ್ವರಿತವಾಗಿ ಸ್ಪಂದಿಸಿ ಮತ್ತು ಬೆಂಬಲಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಹೇಳಿದ್ದಾರೆ.

    ನಿಮ್ಮ ಪ್ರೋತ್ಸಾಹ

    ನಿಮ್ಮ ಪ್ರೋತ್ಸಾಹ ಹಾಗೂ ನೀವು ಕಳುಹಿಸಿದ ಸಂದೇಶ ನನಗೆ ಮತ್ತಷ್ಟು ಬಲ ತುಂಬಿದೆ ಮತ್ತು ಹಿಂದೆಂದಿಗಿಂತಲೂ ಶಕ್ತಿಶಾಲಿಯಾಗಿ ಹಿಂತಿರುಗುತ್ತೇನೆ.

    ನಾನು ನನ್ನ ಆರೊಗ್ಯ ಸ್ಥಿತಿಯ ಕುರಿತು ನಿಮ್ಮಗೆ ಮಾಹಿತಿ ನೀಡುತ್ತೇನೆ ಮತ್ತು ಶೀಘ್ರದಲ್ಲೇ ಮೈದಾನಕ್ಕೆ ಮರಳುವ ವಿಶ್ವಾಸವಿದೆ ಎಂದು ಭಾರತದ ಬ್ಯಾಟರ್​ ಕೆ.ಎಲ್​. ರಾಹುಲ್​ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts