More

    ಗೃಹಜ್ಯೋತಿ ಯೋಜನೆ; ಒಂದು RR‌ ನಂಬರ್​ಗೆ ಮಾತ್ರ ಉಚಿತ ವಿದ್ಯುತ್​: ಕೆ.ಜೆ. ಜಾರ್ಜ್​

    ಬೆಂಗಳೂರು: ರಾಜ್ಯ ಕಾಂಗ್ರೆಸ್​ ಸರ್ಕಾರ ವಿಧಾನಸಭೆ ಚುನಾವಣೆ ವೇಳೆ ಘೋಷಿಸಿದ್ದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿಯನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜೂನ್​ 1ರಂದು ಜಾರಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಾರಿ ಮಾಡಿದೆ.

    ಗೃಜ್ಯೋತಿ ಯೋಜನೆ ಕುರಿತು ಸಾರ್ವಜನಿಕ ವಲಯಗಳಲ್ಲಿ ಹಲವು ಅನುಮಾನಗಳಿದ್ದು ಈ ಕುರಿತಾಗಿ ಇಂಧನ ಸಚಿವ ಕೆ.ಜೆ. ಜಾರ್ಜ್​ ಸ್ಪಷ್ಟೀಕರಣವನ್ನು ನೀಡಿದ್ದಾರೆ.

    ನಾವು ಉಚಿತವಾಗಿ ನೀಡುತ್ತಿರುವುದು ಒಂದು RR‌ ನಂಬರ್​ಗೆ ಮಾತ್ರ. ಒಂದೇ ಮನೆಯಲ್ಲಿ ಎರಡು, ಮೂರು RR ನಂಬರ್ ಇಟ್ಟುಕೊಳ್ಳಬಹುದು,ನಾವು ಬೇಡ ಎನ್ನಲ್ಲ. ಆದರೆ 200 ಯುನಿಟ್ ಗಿಂತ ಹೆಚ್ಚಾದರೆ ಅವರಿಗೆ ಉಚಿತವಾಗಿ ಸಿಗಲ್ಲ ಎಂದು ಹೇಳಿದ್ಧಾರೆ.

    ಯಾವ ಬಾಡಿಗೆದಾರರೂ ವಿದ್ಯುತ್ ಬಿಲ್ ಕಟ್ಟಬೇಕಿಲ್ಲ. ನಾವು ಆರ್​​ಆರ್ ಸಂಖ್ಯೆ ಆಧಾರದ ಮೇಲೆ ಯುನಿಟ್​​ ಪರಿಗಣಿಸುತ್ತೇವೆ. ಬಾಡಿಗೆದಾರರನ್ನು ಪ್ರತ್ಯೇಕವಾಗಿ ಗುರುತಿಸುವ ಪ್ರಶ್ನೆಯೇ ಬರುವುದಿಲ್ಲ. ಮಾಲೀಕರಿರಲಿ, ಬಾಡಿಗೆದಾರಿರಲಿ ಆರ್ ಆರ್ ಸಂಖ್ಯೆ ಆಧಾರದ ಮೀಟರ್​​ ರೀಡ್​ ಮಾಡಲಾಗುತ್ತದೆ ಎಂದು ತಿಳಿಸಿದ್ಧಾರೆ.

    KJ George (1)

    ಇದನ್ನೂ ಓದಿ: NIRF ರ್‍ಯಾಂಕಿಂಗ್‌| ದೇಶದ ಅತ್ಯುತ್ತಮ ವಿಶ್ವವಿದ್ಯಾಲಯ ವಿಭಾಗದಲ್ಲಿ ಐಐಎಸ್​ಸಿ ನಂ.1

    200 ಯುನಿಟ್​​ ಒಳಗೆ ವಿದ್ಯುತ್​ ಬಳಸಿದ್ದರೆ ಉಚಿತ ನೀಡುತ್ತೇವೆ. ಇದ್ದಲ್ಲದೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಬಳಸಿದಾಗ ಹೆಚ್ಚುವರಿ ಬಿಲ್ ಪಾವತಿಸಬೇಕಾಗುತ್ತೆ. ಅಂದರೆ ವಾರ್ಷಿಕ ಸರಾಸರಿ 10%ಗಿಂತ ಹೆಚ್ಚು ಬಳಸಿದರೆ ಮಾತ್ರ ಬಿಲ್ ಪಾವತಿಸಬೇಕು.

    ಉದಾಹರಣೆಗೆ ಆರ್.ಆರ್ ಮೀಟರ್​ನ ವಾರ್ಷಿಕ ಸರಾಸರಿ ಬಳಕೆಯು 100 ಯೂನಿಟ್‌ ಇದ್ದರೆ (ಮಾಸಿಕ ವಿದ್ಯುತ್ ಬಳಕೆಯನ್ನು ಒಟ್ಟು ಲೆಕ್ಕ ಹಾಕಿ 12 ರಿಂದ ಭಾಗಿಸುವ ಮೂಲಕ ಇದನ್ನು ಪಡೆಯಲಾಗಿದೆ). ಒಟ್ಟು ಸರಾಸರಿ ಬಳಕೆಯ ಮೇಲೆ ಹೆಚ್ಚುವರಿ ಶೇ 10 ರಷ್ಟನ್ನು ಒದಗಿಸಲಾಗುತ್ತದೆ. ಇದರೊಂದಿಗೆ, ಶೇ 110 ಯೂನಿಟ್ ವರೆಗೆ ವಿದ್ಯುತ್ ಬಳಸಿದರೆ ಬಿಲ್ ಪಾವತಿಸಬೇಕಿಲ್ಲ.

    ಮಾಲೀಕ ಹಾಗೂ ಬಾಡಿಗೆದಾರ ಎಂಬ ವ್ಯತ್ಯಾಸ ಇರಲ್ಲ ಯಾರಿಗೆ ಉಚಿತವಾಗಿ ಕೊಡ್ತೇವೆ ಎಂದು ಗೊತ್ತಾಗಬೇಕಲ್ಲ, ಅದಕ್ಕೆ ಅರ್ಜಿ ಕರೆದಿದ್ದೇವೆ. ಎರಡು ಕೋಟಿ ಐದಿನೈದು ಲಕ್ಷ ಆರ್. ಆರ್ ನಂಬರ್ ಇದ್ದಾವೆ ಗೃಹಜ್ಯೋತಿ ಯೋಜನೆಗೆ ಸುಮಾರು 13 ಸಾವಿರ ಕೋಟಿ ವೆಚ್ಚ ಆಗಲಿದೆ ಎಂದು ತಿಳಿಸಿದ್ದಾರೆ.

    ಹಿಂದೆ ಇದ್ದ ಸರ್ಕಾರ ದರ ಹೆಚ್ಚು ಮಾಡಿದ್ದು ಅದು ಬಿಜೆಪಿ ಕಾಲದ್ದು. ನಾವು ಹಳೇ ಬಾಕಿ ಕೇಳ್ತಾ ಇದ್ದೇವೆ ಹೊಸದಾಗಿ ಹೆಚ್ಚು ಮಾಡಿದ್ದನ್ನು ಸರ್ಕಾರವೇ ಭರಿಸಲಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್​ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts