More

    ಹೆಸರು ಬದಲಾಯಿಸಲು ಮುಂದಾದ ಕಿಂಗ್ಸ್ ಇಲೆವೆನ್ ಪಂಜಾಜ್ ತಂಡದ ಕಾಲೆಳೆದ ಅಭಿಮಾನಿಗಳು

    ನವದೆಹಲಿ: ಐಪಿಎಲ್ ಆರಂಭಿಕ ದಿನದಿಂದಲೂ ಲೀಗ್‌ನ ಭಾಗವಾಗಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಮುಂದಿನ ಆವೃತ್ತಿಗೆ ಹೆಸರು ಹಾಗೂ ತಂಡದ ಲಾಂಛನ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದೆ. ಫೆಬ್ರವರಿ 17ರಂದು ತಂಡದ ಹೆಸರು ಬದಲಾವಣೆ ಕುರಿತು ಅಧಿಕೃತವಾಗಿ ಘೋಷಣೆಯಾಗಲಿದೆ ಎನ್ನಲಾಗಿದೆ.

    ಇದನ್ನೂ ಓದಿ: ಆರ್‌ಸಿಬಿ ಬ್ಯಾಟಿಂಗ್ ಸಲಹೆಗಾರರಾಗಿ ಸಂಜಯ್ ಬಂಗಾರ್ ನೇಮಕ,

    ಫೆಬ್ರವರಿ 18 ರಂದು ಚೆನ್ನೈನಲ್ಲಿ 14ನೇ ಐಪಿಎಲ್‌ಗೆ ಆಟಗಾರರ ಹರಾಜು ನಡೆಯಲಿರುವ ಹಿನ್ನೆಲೆಯಲ್ಲಿ ಇದಕ್ಕೂ ಮುನ್ನಾದಿನವೇ ತಂಡದ ಹೆಸರು ಹಾಗೂ ಲಾಂಛನ ಬದಲಾವಣೆ ಕುರಿತು ಘೋಷಣೆಯಾಗುವ ಸಾಧ್ಯತೆಗಳಿವೆ. ಪಂಬಾಬ್ ತಂಡಕ್ಕೆ ಕನ್ನಡಿಗರಾದ ಕೆಎಲ್ ರಾಹುಲ್ ನಾಯಕರಾಗಿದ್ದರೆ, ಅನಿಲ್ ಕುಂಬ್ಳೆ ಕೋಚ್ ಆಗಿದ್ದಾರೆ. ಬಾಲಿವುಡ್ ನಟಿ ಪ್ರೀತಿ ಜಿಂಟಾ ಮಾಲೀಕರಾಗಿರುವ ತಂಡ ಇದುವರೆಗೂ ಟ್ರೋಫಿ ಜಯಿಸಿಲ್ಲ. 2014ರಲ್ಲಿ ಫೈನಲ್ ಪ್ರವೇಶಿಸಿದ್ದೆ ತಂಡದ ಇದುವರೆಗಿನ ಉತ್ತಮ ಸಾಧನೆಯಾಗಿದೆ. ಟ್ವಿಟರ್‌ನಲ್ಲಿ ತಂಡದ ಹೆಸರು ಬದಲಾವಣೆ ಕುರಿತು ಸುದ್ದಿಯಾಗುತ್ತಿದ್ದಂತೆ ಅಭಿಮಾನಿಗಳು ಕಾಲೆಳೆದಿದ್ದಾರೆ. ಆರ್‌ಸಿಬಿ ಬಿ ಟೀಮ್, ರಾಯಲ್ ಚಾಲೆಂಜರ್ಸ್‌ ಪಂಜಾಬ್, ಕಿಸಾನ್ ಇಲೆವೆನ್ ಎಂದು ಹೆಸರು ಬದಲಾಯಿಸಿ ಎಂದು ಅಭಿಮಾನಿಗಳು ಬರೆದಿದ್ದಾರೆ.

    ಇದನ್ನೂ ಓದಿ: ರೈತರ ಹೋರಾಟ ನೋಡಿದ್ರೆ ಹೊಟ್ಟೆ ಉರಿಯುತ್ತೆ! ನನಗೆ ಅಧಿಕಾರ ಇದ್ದಿದ್ದರೆ ಎಲ್ಲವನ್ನೂ ಬರೆದುಕೊಡ್ತಿದ್ದೆ…

    ಆಸ್ಟ್ರೇಲಿಯಾ ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೇನ್ ಮ್ಯಾಕ್ಸ್‌ವೆಲ್‌ನ್ನು 2021ರ ಆವೃತ್ತಿಯಿಂದ ಕೈಬಿಡಲಾಗಿದ್ದು, ರಾಹುಲ್ ಅವರನ್ನೇ ನಾಯಕನಾಗಿ ಮುಂದುವರಿಸಲಾಗಿದೆ. ಯುಎಇಯಲ್ಲಿ ನಡೆದ 13ನೇ ಐಪಿಎಲ್‌ನಲ್ಲಿ ಐವರು ಕನ್ನಡಿಗರು ತಂಡದಲ್ಲಿದ್ದರು. ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ಜೆ.ಸುಚಿತ್, ಕೆ.ಗೌತಮ್ ಆಡಿದ್ದರು. ಈ ಬಾರಿ ಕೆಎಲ್ ರಾಹುಲ್, ಮಯಾಂಕ್ ಹೊರತುಪಡಿಸಿ ಉಳಿದ ಆಟಗಾರರನ್ನು ಬಿಡುಗಡೆ ಮಾಡಲಾಗಿದೆ.

    ಭಾರತ ತಂಡ 2ನೇ ಟೆಸ್ಟ್‌ನಲ್ಲೂ ಸೋತರೆ ನಾಯಕತ್ವಕ್ಕೆ ಕೊಹ್ಲಿ ರಾಜೀನಾಮೆ!?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts