ಅಹಮದಾಬಾದ್: ಮೊದಲ ಪಂದ್ಯದಲ್ಲಿ ಗೆಲುವಿನ ಬಳಿಕ ಸತತ ಎರಡು ಪಂದ್ಯಗಳಲ್ಲಿ ಮುಗ್ಗರಿಸಿರುವ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್&17ರಲ್ಲಿ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುರುವಾರ ಆತಿಥೇಯ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಶುಭಮಾನ್ ಗಿಲ್ ಬಳಗ ಸತತ 2ನೇ ಗೆಲುವಿನ ನಿರೀೆಯಲ್ಲಿದ್ದು, ಶಿಖರ್ ಧವನ್ ಬಳಗ ಜಯದ ಹಳಿಗೇರುವ ಹಂಬಲದಲ್ಲಿದೆ.
ಗುಜರಾತ್ ಟೈಟಾನ್ಸ್ ತಂಡ ಆಡಿರುವ ಮೂರು ಪಂದ್ಯಗಳಲ್ಲಿ 2 ಗೆಲುವು, 1 ಸೋಲಿನೊಂದಿಗೆ 4 ಅಂಕಕಲೆಹಾಕಿದ್ದು, ಇತ್ತ ಪಂಜಾಬ್ ಕಿಂಗ್ಸ್ ತಂಡ 1 ಗೆಲುವು, 2 ಸೋಲಿನೊಂದಿಗೆ 2 ಅಂಕ ಕಲೆಹಾಕಿದೆ. ಸನ್ರೈಸರ್ಸ್ ವಿರುದ್ಧ ಹಿಂದಿನ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಗುಜರಾತ್ ಟೈಟಾನ್ಸ್ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದು, ಮತ್ತೊಂದು ಜಯದ ನಿರೀೆಯಲ್ಲಿದೆ. ಪಂಜಾಬ್ ಕಿಂಗ್ಸ್ ತಂಡ ಹಿಂದಿನ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಸೋಲುಂಡಿದೆ. ತವರಿನಾಚೆಗೆ ಆಡಿರುವ 2 ಪಂದ್ಯಗಳಲ್ಲಿ ಪಂಜಾಬ್ ತಂಡ ಮುಗ್ಗರಿಸಿರುವುದು ಹಿನ್ನಡೆ ಎನಿಸಿದೆ.
ಟೈಟಾನ್ಸ್ ಸಂಟಿತ ಪ್ರದರ್ಶನ: ತವರಿನ ಅಂಗಳದಲ್ಲಿ ಸಂಟಿತ ಪ್ರದರ್ಶನ ಮೂಲಕ ಗುಜರಾತ್ ಟೈಟಾನ್ಸ್ ಯಶಸ್ಸುಗಳಿಸಿದೆ. ಶುಭಮಾನ್ ಗಿಲ್ ಟೂರ್ನಿಯಲ್ಲಿ ನಿರೀತ ರನ್ಗಳಿಸುವಲ್ಲಿ ವಿಲರಾದರು ತಂಡವನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ. ನೆಚ್ಚಿನ ಅಂಗಣದಲ್ಲಿ ಾಮ್ರ್ಗೆ ಮರಳುವ ನಿರೀೆ ಇದೆ. ಸಾಯಿ ಸುದರ್ಶನ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದ್ದಾರೆ. ಕಳೆದ ಪಂದ್ಯದಲ್ಲಿ ಡೇವಿಡ್ ಮಿಲ್ಲರ್ ಸಹ ಅಬ್ಬರಿಸಿದ್ದು ಬ್ಯಾಟಿಂಗ್ ಕ್ರಮಾಂಕಕ್ಕೆ ಬಲ ನೀಡಿದೆ. ವಿಜಯ್ ಶಂಕರ್ ವೈಲ್ಯ ತಂಡಕ್ಕೆ ಪ್ರಮುಖ ಹಿನ್ನಡೆಯಾಗಿದೆ. ಅನುಭವಿ ಮೋಹಿತ್ ಶರ್ಮ ಬೌಲಿಂಗ್ ವಿಭಾಗವನ್ನು ಸಮರ್ಥವಾಗಿ ಮುನ್ನಡೆಸಿದ್ದು, ಸ್ಪಿನ್ನರ್ಗಳಾದ ರಶೀದ್ ಖಾನ್, ನೂರ್ ಅಹ್ಮದ್ ಸಾಥ್ ಬೆಂಬಲ ನೀಡಿದ್ದಾರೆ.
ಮಧ್ಯಮ ಕ್ರಮಾಂಕದ ಚಿಂತೆ: ಶಿಖರ್ ಧವನ್&ಜಾನಿ ಬೇರ್ ಸ್ಟೋ ಒದಗಿಸಿದ ಉತ್ತಮ ಆರಂಭದ ನಡುವೆಯೂ ಮಧ್ಯಮ ಕ್ರಮಾಂಕದ ಬ್ಯಾಟರ್ಗಳ ವೈಲ್ಯದಿಂದಾಗಿ ಹಿಂದಿನ ಪಂದ್ಯದಲ್ಲಿ ಸೋಲುಂಡಿತು. ಗಾಯಾಳು ಲಿಯಾಮ್ ಲಿವಿಂಗ್ ಸ್ಟೋನ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಆಲ್ರೌಂಡರ್ ಸ್ಯಾಮ್ ಕರನ್ ಬ್ಯಾಟಿಂಗ್ನಲ್ಲಿ ಮಿಂಚಿದರೂ, ಬೌಲಿಂಗ್ನಲ್ಲಿ ವಿಕೆಟ್ ಪಡೆಯುವಲ್ಲಿ ವಿಲರಾಗಿದ್ದಾರೆ. ಸ್ಲಾಗ್ ಓವರ್ಗಳಲ್ಲಿ ಪಂಜಾಬ್ ಬೌಲರ್ಗಳು ದುಬಾರಿ ಎನಿಸಿದ್ದಾರೆ.
ಮುಖಾಮುಖಿ: 3
ಗುಜರಾತ್: 2
ಪಂಜಾಬ್: 1
ಆರಂಭ: 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ