More

    ಸುನೀಲ್​ ನಾರಾಯಣ್​ ಆರ್ಭಟಕ್ಕೆ ಬೆದರಿದ ಡೆಲ್ಲಿ: ಕೆಕೆಆರ್​ಗೆ ಬೃಹತ್​ ಗೆಲುವು

    ವಿಶಾಖಪಟ್ಟಣ: ಎಡಗೈ ಆರಂಭಿಕ ಸುನೀಲ್​ ನಾರಾಯಣ್​ (85 ರನ್​, 39 ಎಸೆತ, 7 ಬೌಂಡರಿ, 7 ಸಿಕ್ಸರ್​) ಸ್ಫೋಟಕ ಬ್ಯಾಟಿಂಗ್​ ಹಾಗೂ ಯುವ ಬ್ಯಾಟರ್​ ಅಂಗ ಕ್ರಿಶ್​ ರುವಂಶಿ (54 ರನ್​, 27 ಎಸೆತ, 5 ಬೌಂಡರಿ, 3 ಸಿಕ್ಸರ್​) ಚೊಚ್ಚಲ ಅರ್ಧಶತಕದ ನೆರವಿನಿಂದ ರನ್​ ಮಳೆಹರಿಸಿದ ಕೋಲ್ಕತ ನೈಟ್​ ರೈಡರ್ಸ್​ ತಂಡ ಐಪಿಎಲ್​&17ರ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ 106 ರನ್​ಗಳ ಬೃಹತ್​ ಗೆಲುವು ದಾಖಲಿಸಿದೆ. ಇದರೊಂದಿಗೆ ಹ್ಯಾಟ್ರಿಕ್​ ಜಯ ದಾಖಲಿಸಿದ ಶ್ರೇಯಸ್​ ಅಯ್ಯರ್​ ಪಡೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ರಿಷಭ್​ ಪಂತ್​ ಪಡೆ ತವರಿನಲ್ಲಿ ಸೋತ 3ನೇ ತಂಡ ಎನಿಸಿದೆ.

    ವೈಎಸ್​ಆರ್​ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಇಳಿದ ಕೆಕೆಆರ್​, ಸುನೀಲ್​ ನಾರಾಯಣ್​&ರುವಂಶಿ ಒದಗಿಸಿದ ಭದ್ರ ಅಡಿಪಾಯ ಹಾಗೂ ಸ್ಲಾಗ್​ ಓವರ್​ಗಳಲ್ಲಿ ಆಲ್ರೌಂಡರ್​ ಆಂಡ್ರೆ ರಸೆಲ್​ (41 ರನ್​, 19 ಎಸೆತ, 4 ಬೌಂಡರಿ, 3 ಸಿಕ್ಸರ್​) ಅಬ್ಬರದಿಂದ 7 ವಿಕೆಟ್​ಗೆ 272 ರನ್​ಗಳ ಬೃಹತ್​ ಮೊತ್ತ ಕಲೆಹಾಕಿತು. ಪ್ರತಿಯಾಗಿ 33 ರನ್​ಗಳಿ ಪ್ರಮುಖ ನಾಲ್ವರು ಬ್ಯಾಟರ್​ಗಳ ವಿಕೆಟ್​ ಕಳೆದುಕೊಂಡ ಡೆಲ್ಲಿ ಕ್ಯಾಪಿಟಲ್ಸ್​ ದಾಖಲೆಯ ರನ್​ ಚೇಸಿಂಗ್​ನಲ್ಲಿ ಸಂಕಷ್ಟಕ್ಕೆ ಸಿಲುಕಿತು. ಆಗ ನಾಯಕ ರಿಷಭ್​ ಪಂತ್​ (55 ರನ್​, 25 ಎಸೆತ, 4 ಬೌಂಡರಿ, 5 ಸಿಕ್ಸರ್​) ಹಾಗೂ ಟ್ರಿಸ್ಟಾನ್​ ಸ್ಟಬ್ಸ್​ (54 ರನ್​, 32 ಎಸೆತ, 4 ಬೌಂಡರಿ, 4 ಸಿಕ್ಸರ್​) ತೋರಿದ ಪ್ರ್ರತಿರೋಧ ನಡುವೆಯೂ, ಅಂತಿಮವಾಗಿಡೆಲ್ಲಿ 17.2 ಓವರ್​ಗಳಲ್ಲಿ 166 ರನ್​ಗಳಿಗೆ ಆಲೌಟ್​ ಆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts