More

    1.41 ಕೋಟಿ ಮೌಲ್ಯದ ನಗದು, ವಸ್ತುಗಳ ವಶ

    ದಾವಣಗೆರೆ: ಲೋಕಸಭಾ ಚುನಾವಣೆ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಡಿ ಜಿಲ್ಲೆಯಲ್ಲಿ ಇದುವರೆಗೆ 1,41,91,569 ಮೌಲ್ಯದ ನಗದು, ವಿವಿಧ ವಸ್ತು ಹಾಗೂ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ತಿಳಿಸಿದ್ದಾರೆ.
      ಜಿಲ್ಲೆಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಅನುಷ್ಠಾನಕ್ಕೆ ಹದ್ದಿನ ಕಣ್ಣಿಡಲಾಗಿದೆ. 21 ಫೈಯಿಂಗ್ ಸ್ಕ್ವಾಡ್‌ಗಳು, 32 ಚೆಕ್‌ಪೋಸ್ಟ್‌ಗಳಲ್ಲಿ 24*7 ಮಾದರಿ ದಿನದ ಮೂರು ಪಾಳಿಯಲ್ಲಿ ಚುನಾವಣಾ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೇ 9 ಅಬಕಾರಿ ಜಾಗೃತ ದಳದವರು ಕಾರ್ಯನಿರ್ವಹಿಸುತ್ತಿದ್ದು, ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಸ್ತು ನಡೆಸಲಾಗುತ್ತಿದೆ.
      ವಶಪಡಿಸಿಕೊಂಡ ನಗದು ಮೌಲ್ಯದಲ್ಲಿ ಎಫ್.ಎಸ್.ಟಿ.ಯಿಂದ 75,62,100 ರೂ. ವಶಕ್ಕೆ ಪಡೆದು ಪರಿಶೀಲನೆಗೆ ಆದಾಯ ತೆರಿಗೆ ಇಲಾಖೆಗೆ ಒಪ್ಪಿಸಲಾಗಿದೆ. ಚೆಕ್‌ಪೋಸ್ಟ್‌ಗಳಲ್ಲಿ ದಾಖಲೆ ಇಲ್ಲದೇ ನಗದು ಕೊಂಡೊಯ್ಯುತ್ತಿದ್ದ 51,86,023 ರೂ.ವಶಕ್ಕೆ ಪಡೆಯಲಾಗಿದ್ದು, ಇದರಲ್ಲಿ ದಾಖಲೆ ನೀಡಲಾದ 15,65,780 ರೂ.ಮರಳಿಸಲಾಗಿದೆ. ಉಳಿದ 36,20,243 ರೂ.ಗಳನ್ನು ಖಜಾನೆಯಲ್ಲಿರಿಸಲಾಗಿದೆ.
      ಇದೇ ಅವಧಿಯಲ್ಲಿ ಒಟ್ಟು 2,90,466 ರೂ.ಮೌಲ್ಯದ 673.61 ಲೀಟರ್ ಮದ್ಯ ಹಾಗೂ 10,52,980 ರೂ.ಮೌಲ್ಯದ ವಿವಿಧ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ 4630 ಕೆ.ಜಿ.ಅಕ್ಕಿ, 17 ಮೊಬೈಲ್, 400 ಟವರ್ ಫ್ಯಾನ್, 56.36 ಗ್ರಾಂ ಚಿನ್ನ, 579 ಸ್ಯಾರಿ, 51 ಕುಪ್ಪಸ, 300 ಜೀನ್ಸ್ ಪ್ಯಾಂಟ್ಗಳು ಸೇರಿವೆ.
      ಅಬಕಾರಿ ಕಾಯಿದೆ ಉಲ್ಲಂಘನೆಯಡಿ ಎಫ್.ಎಸ್.ಟಿ.ಯಿಂದ 2, ಪೊಲೀಸರಿಂದ 175 ಮತ್ತು ಇತರೆ ಕಾಯಿದೆಯಡಿ 1 ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts