More

    ಟೆನಿಸ್ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾರತೀಯ ಬುಕ್ಕಿ ಕಿಂಗ್‌ಪಿನ್!

    ಮೆಲ್ಬೋರ್ನ್/ನವದೆಹಲಿ: ಅಂತಾರಾಷ್ಟ್ರೀಯ ಟೆನಿಸ್ ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಭಾರತ ಮೂಲದ ಬುಕ್ಕಿ ರವೀಂದರ್ ದಾಂಡಿವಾಲಾ ಕಿಂಗ್‌ಪಿನ್ ಆಗಿದ್ದಾನೆ. ಪ್ರಕರಣವನ್ನು ಭೇದಿಸಿರುವ ಆಸ್ಟ್ರೇಲಿಯಾದ ಪೊಲೀಸರು ಈ ವಿಷಯವನ್ನು ತಿಳಿಸಿದ್ದಾರೆ. ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ಪ್ರಕರಣಗಳಲ್ಲೂ ಈತನ ಮೇಲೆ ಕಣ್ಣಿಡಲಾಗಿತ್ತು ಎಂದು ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕದ (ಎಸಿಯು) ಮುಖ್ಯಸ್ಥ ಅಜಿತ್ ಸಿಂಗ್ ತಿಳಿಸಿದ್ದಾರೆ.

    ಇದನ್ನೂ ಓದಿ: VIDEO|ಧೋನಿ ಹಾಡಿನ ಟೀಸರ್ ಬಿಡುಗಡೆ ಮಾಡಿದ ಬ್ರಾವೊ

    ಕೆಳ ಶ್ರೇಯಾಂಕಿತ ಟೆನಿಸ್ ಆಟಗಾರರನ್ನು ಮ್ಯಾಚ್ ಫಿಕ್ಸಿಂಗ್‌ಗೆ ಒಪ್ಪಿಸಿದ್ದ ರವೀಂದರ್ ದಾಂಡಿವಾಲಾ 2018ರಲ್ಲಿ ಈಜಿಪ್ಟ್ ಮತ್ತು ಬ್ರೆಜಿಲ್ ಟೆನಿಸ್ ಟೂರ್ನಿಗಳಲ್ಲಿ ಫಿಕ್ಸಿಂಗ್ ಮಾಡಿದ್ದ ಎಂದು ವಿಕ್ಟೋರಿಯಾ ಪೊಲೀಸರು ‘ಸಿಡ್ನಿ ಮಾರ್ನಿಂಗ್ ಹೆರಾಲ್ಡ್’ಗೆ ತಿಳಿಸಿದ್ದಾರೆ. ಮೊಹಾಲಿ ಮೂಲದವನಾದ ರವೀಂದರ್, ಮಧ್ಯಪ್ರಾಚ್ಯದಲ್ಲಿ ನೆಲೆಸಿದ್ದ. ಆತನ ಇಬ್ಬರು ಸಹಚರರು ಮತ್ತು ಭಾರತ ಮೂಲದವರೇ ಆದ ರಾಜೇಶ್ ಕುಮಾರ್ ಮತ್ತು ಹರ್‌ಸಿಮ್ರತ್ ಸಿಂಗ್‌ರನ್ನು ವಿಕ್ಟೋರಿಯಾ ಪೊಲೀಸರು ಈಗಾಗಲೆ ಬಂಧಿಸಿದ್ದು, ಮೆಲ್ಬೋರ್ನ್ ಮೆಜಿಸ್ಟ್ರೇಟ್ ಕೋರ್ಟ್ ಎದುರು ಹಾಜರು ಪಡಿಸಿದ್ದಾರೆ.

    ಇದನ್ನೂ ಓದಿ:  ಇಂಗ್ಲೆಂಡ್ ಕ್ರಿಕೆಟ್ ದಿಗ್ಗಜ ಇಯಾನ್ ಬಾಥಂಗೆ ಡಿಸೆಂಬರ್‌ನಲ್ಲೇ ಕರೊನಾ ಬಂದಿತ್ತು!

    ರವೀಂದರ್ ಈ ಹಿಂದೆ ನೇಪಾಳದಲ್ಲಿ ಏಷ್ಯನ್ ಪ್ರೀಮಿಯರ್ ಲೀಗ್ ಎಂಬ ಅನಧಿಕೃತ ಕ್ರಿಕೆಟ್ ಲೀಗ್ ನಡೆಸಿದ್ದ. ಅಫ್ಘಾನಿಸ್ತಾನ ಕ್ರಿಕೆಟ್ ಲೀಗ್ ಜತೆಗೂ ಈತನಿಗೆ ಸಂಪರ್ಕವಿತ್ತು. ಹರಿಯಾಣದಲ್ಲೂ ಕ್ರಿಕೆಟ್ ಲೀಗ್ ಆಯೋಜಿಸಲು ಪ್ರಯತ್ನಿಸಿದ್ದ. ಆತನ ಭಾರತದಲ್ಲಿರದೆ ವಿದೇಶದಲ್ಲಿ ಕುಳಿತುಕೊಂಡು ಎಲ್ಲವನ್ನೂ ನಿಯಂತ್ರಿಸುತ್ತಿದ್ದ. ಆದರೂ ಬಿಸಿಸಿಐ ಕಳೆದ 3-4 ವರ್ಷಗಳಿಂದ ಆತನ ಮೇಲೆ ಕಣ್ಣಿಟ್ಟಿತ್ತು ಎಂದು ಅಜಿತ್ ಸಿಂಗ್ ತಿಳಿಸಿದ್ದಾರೆ. ಬಿಸಿಸಿಐ ಈ ಹಿಂದೆ ಆತನ ವಿರುದ್ಧ ಪೊಲೀಸರಿಗೆ ದೂರು ಕೂಡ ಸಲ್ಲಿಸಿತ್ತು ಎನ್ನಲಾಗಿದೆ.

    FACT-CHECK| ಮಗುವಿನ ನಿರೀಕ್ಷೆಯಲ್ಲಿರುವರೇ ಕೊಹ್ಲಿ-ಅನುಷ್ಕಾ ದಂಪತಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts