More

    ಮೊಟ್ಟ ಮೊದಲ ಬಾರಿಗೆ ಜಗತ್ತಿನೆದುರು ಮಗಳ ಮುಖ ಬಹಿರಂಗಪಡಿಸಿದ ಕಿಮ್​ ಜಾಂಗ್​ ಉನ್​!

    ಸಿಯೋಲ್​: ಇದೇ ಮೊದಲ ಬಾರಿಗೆ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್​ ಜಾಂಗ್​ ಉನ್​ ತನ್ನ ಮಗಳ ಮುಖವನ್ನು ಜಗತ್ತಿನ ಎದುರು ಬಹಿರಂಗಪಡಿಸಿದ್ದಾನೆ. ಪರಮಾಣು ಶಸ್ತ್ರಸಜ್ಜಿತ ದೇಶದ ಅತಿದೊಡ್ಡ ಬ್ಯಾಲಿಸ್ಟಿಕ್ ಕ್ಷಿಪಣಿಯ ಉಡಾವಣೆಯ ಹಿಂದಿನ ದಿನ ಮಗಳ ಕೈ ಹಿಡಿದು ಕ್ಷಿಪಣಿಯನ್ನು ಪರಿಶೀಲಿಸುತ್ತಿರುವ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಉತ್ತರ ಕೊರಿಯಾ ಶುಕ್ರವಾರ ಹ್ವಾಸಾಂಗ್-17 ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸಿದೆ ಎಂದು ರಾಜ್ಯ ಸುದ್ದಿ ಸಂಸ್ಥೆ KCNA ಶನಿವಾರ ವರದಿ ಮಾಡಿದೆ. ಅತಿದೊಡ್ಡ ಅಚ್ಚರಿ ಏನೆಂದರೆ, ಕ್ಷಿಪಣಿ ಪರೀಕ್ಷೆ ಸಮಯದಲ್ಲಿ ಕಿಮ್ ಜಾಂಗ್​ ಅವರ ಮಗಳ ಉಪಸ್ಥಿತಿ ಇತ್ತು. ಈ ಹಿಂದೆ ಒಮ್ಮೆಯು ಸಾರ್ವಜನಿಕವಾಗಿ ಮಗಳ ಮುಖವನ್ನು ಕಿಮ್​ ಪರಿಚಯಿಸಿರಲಿಲ್ಲ.

    ಕೆಎನ್​ಸಿಎ ಕಿಮ್​ ಮಗಳ ಹೆಸರನ್ನು ಉಲ್ಲೇಖಿಸಿಲ್ಲ. ಬಿಳಿ ಪಫಿ ಕೋಟ್‌ನಲ್ಲಿ ತಮ್ಮ ತಂದೆಯೊಂದಿಗೆ ಕೈ ಹಿಡಿದುಕೊಂಡು ಬೃಹತ್ ಕ್ಷಿಪಣಿಯನ್ನು ನೋಡುತ್ತಿರುವ ಫೋಟೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಿಮ್​ ಅವರ ಮಗಳನ್ನು ನೋಡುತ್ತಿರುವುದಾಗಿ ಯುಎಸ್​ ಮೂಲದ ಸ್ಟಿಮ್ಸನ್​ ಕೇಂದ್ರದ ಉತ್ತರ ಕೊರಿಯಾ ತಜ್ಞ ಮೈಕೆಲ್​ ಮ್ಯಾಡೆನ್​ ತಿಳಿಸಿದ್ದಾರೆ. ನಿಜಕ್ಕೂ ಇದು ಹೆಚ್ಚು ಮಹತ್ವದ್ದಾಗಿದೆ ಮತ್ತು ಕಿಮ್ ಅವರ ಕಡೆಯಿಂದ ಒಂದು ನಿರ್ದಿಷ್ಟ ಮಟ್ಟದ ಸೌಕರ್ಯವನ್ನು ಇದು ಪ್ರತಿನಿಧಿಸುತ್ತದೆ ಎಂದು ಮೈಕೆಲ್​ ಹೇಳಿದ್ದಾರೆ.

    ಕಿಮ್‌ಗೆ ಮೂವರು ಮಕ್ಕಳು. ಅವರಲ್ಲಿ ಇಬ್ಬರು ಹೆಣ್ಣು ಮತ್ತು ಓರ್ವ ಗಂಡು ಎಂದು ತಜ್ಞರು ಹೇಳಿದ್ದಾರೆ. 2013ರಲ್ಲಿ ನಿವೃತ್ತ ಅಮೆರಿಕನ್ ಬಾಸ್ಕೆಟ್‌ಬಾಲ್ ತಾರೆ ಡೆನ್ನಿಸ್ ರಾಡ್‌ಮನ್, ಕಿಮ್‌ಗೆ ಜು ಏ ಎಂಬ ಮಗಳು ಇದ್ದಾಳೆ ಎಂದು ಹೇಳಿದರು. ಆ ವರ್ಷ ಉತ್ತರ ಕೊರಿಯಾ ಪ್ರವಾಸದ ನಂತರ, ರಾಡ್‌ಮನ್ ಅವರು ದಿ ಗಾರ್ಡಿಯನ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಕಿಮ್ ಮತ್ತು ಅವರ ಕುಟುಂಬದೊಂದಿಗೆ ಸಮಯ ಕಳೆದಿದ್ದಾಗಿ ಹಾಗೂ ಮಗುವನ್ನು ಹಿಡಿದುಕೊಂಡಿದ್ದಾಗಿ ಹೇಳಿದರು.

    ಸದ್ಯ ಕಿಮ್​ ಮಗಳಿಗೆ ಸುಮಾರು 12-13 ವರ್ಷ ವಯಸ್ಸಾಗಿರುತ್ತದೆ ಎಂದು ಅಂದಾಜಿಸಲಾಗಿದೆ. ಸುಮಾರು ನಾಲ್ಕರಿಂದ ಐದು ವರ್ಷಗಳಲ್ಲಿ ಅವರು ವಿಶ್ವವಿದ್ಯಾನಿಲಯಕ್ಕೆ ಹಾಜರಾಗಲು ಅಥವಾ ಮಿಲಿಟರಿ ಸೇವೆಗೆ ಹೋಗಲು ತಯಾರಿ ನಡೆಸುತ್ತಿದ್ದಾರೆ ಎಂದು ಮೈಕೆಲ್​ ಮ್ಯಾಡೆನ್ ಹೇಳಿದ್ದಾರೆ.

    ವಿದ್ಯಾವಂತಳಾಗಿರುವ ಕಿಮ್​ ಮಗಳು ನಾಯಕತ್ವ ಸ್ವೀಕರಿಸಲು ತರಬೇತಿ ಪಡೆಯುತ್ತಾಳೆ ಎಂದು ಹೇಳಲಾಗಿದೆ. ಕೇಂದ್ರ ನಾಯಕನ ಸ್ಥಾನ ಪಡೆದುಕೊಳ್ಳಲು ತಯಾರಿ ನಡೆಸುತ್ತಿರಬಹುದು ಅಥವಾ ಅವಳು ತನ್ನ ಆಂಟಿಯಂತೆ ಸಲಹೆಗಾರ್ತಿಯಾಗಬಹುದು ಎಂದು ಅಂದಾಜಿಸಲಾಗಿದೆ. (ಏಜೆನ್ಸೀಸ್​)

    ಸಿನಿಮಾದಲ್ಲಿ ನಟಿಸುವುದಾದರೆ… ನಟಿ ಕಾಜಲ್​ಗೆ ಪತಿ ಗೌತಮ್​ ವಿಧಿಸಿದ ಕಠಿಣ ಷರತ್ತು ಹೀಗಿದೆ…

    ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಕ್ರೀಡಾಂಗಣಗಳ ಕೊರತೆ: ದೇಶದಲ್ಲಿ ಶೇ.33 ಶಾಲೆಗಳಿಗಿಲ್ಲ ಮೈದಾನ; ಪಂಜಾಬ್​ನಲ್ಲಿ ಹೆಚ್ಚು, ಮೇಘಾಲಯ ಕಡಿಮೆ

    ಹಸಿವಿನಿಂದ ನರಳುತ್ತಿದ್ದ ವೃದ್ಧೆ ಪಾಲಿಗೆ ಹೀರೋ ಆದ ನ್ಯಾಯಾಧೀಶೆ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts