More

    ಸಿನಿಮಾದಲ್ಲಿ ನಟಿಸುವುದಾದರೆ… ನಟಿ ಕಾಜಲ್​ಗೆ ಪತಿ ಗೌತಮ್​ ವಿಧಿಸಿದ ಕಠಿಣ ಷರತ್ತು ಹೀಗಿದೆ…

    ಹೈದರಾಬಾದ್​: ಮದುವೆಯಾಗಿ ಒಂದು ಮಗುವಿನ ತಾಯಿಯಾಗಿರುವ ನಟಿ ಕಾಜಲ್​ ಅಗರವಾಲ್​ ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮೊದಲೇ ಸಹಿ ಹಾಕಿದ್ದ ಇಂಡಿಯನ್​ -2 ಚಿತ್ರದ ಶೂಟಿಂಗ್​ನಲ್ಲಿ ಭಾಗಿಯಾಗಲಿದ್ದಾರೆ.

    ಸ್ಟಾರ್​ ನಿರ್ದೇಶಕ ಶಂಕರ್​ ನಿರ್ದೇಶನದ ಇಂಡಿಯನ್​-2 ಚಿತ್ರದಲ್ಲಿ ಕಾಜಲ್​ ಪಾತ್ರವನ್ನು ತಿಳಿದುಕೊಳ್ಳಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಆದರೆ, ಇಂಡಿಯನ್​-2 ಸಿನಿಮಾ ಬಳಿಕವೂ ಕಾಜಲ್​ಗೆ ಸಾಲು ಸಾಲು ಆಫರ್​ಗಳು ಬರುತ್ತಿವೆ. ಆದರೆ, ಸಿನಿಮಾಗಳಲ್ಲಿ ನಟಿಸುವುದಾದರೆ, ಕಾಜಲ್​ ಪತಿ ಗೌತಮ್​ ಒಂದು ಷರತ್ತನ್ನು ಹಾಕಿದ್ದಾರೆ. ಆ ಷರತ್ತು ಏನೆಂದರೆ, ರೊಮ್ಯಾಂಟಿಕ್​ ಪಾತ್ರಗಳಲ್ಲಿ ನಟಿಸುವಂತಿಲ್ಲ ಮತ್ತು ಅಶ್ಲೀಲ ಹಾಗೂ ಲಿಪ್​ಲಾಕ್​ ದೃಶ್ಯಗಳಲ್ಲಿ ನಟಿಸುವಂತಿಲ್ಲ.

    ಇದರೊಂದಿಗೆ ಗ್ಲಾಮರ್​ ಇಲ್ಲದ ಕಾಜಲ್ ಅವರನ್ನು ನಾಯಕಿಯಾಗಿ ಪ್ರೇಕ್ಷಕರು ಒಪ್ಪಿಕೊಳ್ಳುತ್ತಾರಾ ಎಂಬುದು ಈಗ ಚರ್ಚೆಯ ವಿಷಯವಾಗಿದೆ. ಪತಿ ಹಾಕಿದ ಷರತ್ತುಗಳಿಂದ ಕಾಜಲ್ ಅವರ ಸಿನಿಮಾ ಅವಕಾಶಗಳ ಬಾಗಿಲು ಮುಚ್ಚಿದಂತಾಗಬಹುದು ಅಥವಾ ಮುಂದೆ ಲೇಡಿ ಓರಿಯೆಂಟೆಡ್ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾರೆಯೇ ಎಂದು ಕಾದು ನೋಡಬೇಕಿದೆ. (ಏಜೆನ್ಸೀಸ್​)

    ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಕ್ರೀಡಾಂಗಣಗಳ ಕೊರತೆ: ದೇಶದಲ್ಲಿ ಶೇ.33 ಶಾಲೆಗಳಿಗಿಲ್ಲ ಮೈದಾನ; ಪಂಜಾಬ್​ನಲ್ಲಿ ಹೆಚ್ಚು, ಮೇಘಾಲಯ ಕಡಿಮೆ

    ರಾತ್ರಿ ನಗರವೆಲ್ಲ ಸುತ್ತಾಡಿ ಕಾರಿನ ಒಳಗೆ ಯುವ ಮಾಡೆಲ್​ ಮೇಲೆ ಸಾಮೂಹಿಕ ಅತ್ಯಾಚಾರ: ಸ್ನೇಹಿತೆ ಸೇರಿ ನಾಲ್ವರ ಬಂಧನ

    ಹಸಿವಿನಿಂದ ನರಳುತ್ತಿದ್ದ ವೃದ್ಧೆ ಪಾಲಿಗೆ ಹೀರೋ ಆದ ನ್ಯಾಯಾಧೀಶೆ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts