More

    ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಕ್ರೀಡಾಂಗಣಗಳ ಕೊರತೆ: ದೇಶದಲ್ಲಿ ಶೇ.33 ಶಾಲೆಗಳಿಗಿಲ್ಲ ಮೈದಾನ; ಪಂಜಾಬ್​ನಲ್ಲಿ ಹೆಚ್ಚು, ಮೇಘಾಲಯ ಕಡಿಮೆ

    | ಆರ್.ತುಳಸಿಕುಮಾರ್ ಬೆಂಗಳೂರು

    ಭಾರತದೆಲ್ಲೆಡೆ ಇರುವ ಶಾಲೆಗಳಲ್ಲಿ ಮಕ್ಕಳಿಗೆ ಆಟದ ಮೈದಾನದ ಸೌಲಭ್ಯ ಇನ್ನೂ ಪೂರ್ಣವಾಗಿ ದೊರೆತಿಲ್ಲ. ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷ ಪೂರೈಸಿದ್ದರೂ, ರಾಷ್ಟ್ರ ಮಟ್ಟದಲ್ಲಿ ಶೇ.33 ಶಾಲೆಗಳಲ್ಲಿ ಪ್ಲೇಗ್ರೌಂಡ್ ಕೊರತೆ ಇದೆ. ಸರ್ಕಾರಿ ಶಾಲೆ ಸೇರಿ ಎಲ್ಲ ಬಗೆಯ ಶಾಲೆಗಳಲ್ಲಿ ಆಟದ ಮೈದಾನ ಹೊಂದುವುದು ಕಡ್ಡಾಯ ಇದ್ದರೂ, ಆ ನಿಯಮ ಪಾಲನೆಯಾಗಿಲ್ಲ. ಅದರಲ್ಲೂ ನಗರ ಪ್ರದೇಶಗಳಲ್ಲಿರುವ ಶಾಲಾ ಮಕ್ಕಳು ಪ್ಲೇಗ್ರೌಂಡ್ ಸೌಲಭ್ಯದಿಂದ ವಂಚಿತರಾಗಿದ್ದಾರೆ.

    ದೇಶದಲ್ಲಿ ಒಟ್ಟು 14.9 ಲಕ್ಷ ಶಾಲೆಗಳಿವೆ. ಈ ಪೈಕಿ 11.5 ಲಕ್ಷ ಶಾಲೆಗಳಲ್ಲಿ ಆಟದ ಮೈದಾನ ಇದೆ. ಉಳಿದ 3.4 ಲಕ್ಷ ಶಾಲೆಗಳಲ್ಲಿ ಮಕ್ಕಳು ಆಟವಾಡಲು ಕ್ರೀಡಾ ಅಂಕಣವೇ ಇಲ್ಲ. ಕರ್ನಾಟಕದಲ್ಲಿ 76,450 ಶಾಲೆಗಳಿದ್ದು, ಈ ಪೈಕಿ 62,138 ಶಾಲೆಗಳಲ್ಲಿ ಮಾತ್ರ ಆಟದ ಮೈದಾನವಿವೆ. ಉಳಿದವು ಬೆಂಗಳೂರು ಸಹಿತ ಮಹಾನಗರ ಹಾಗೂ ಅರಣ್ಯ ಆವರಿಸಿರುವ ಪ್ರದೇಶಗಳಲ್ಲಿ ಇವೆ. ಇಲ್ಲೂ ಕೆಲವನ್ನು ವಿಶೇಷ ಕ್ರಮ ಕೈಗೊಂಡು ಪ್ಲೇಗ್ರೌಂಡ್ ನಿರ್ವಿುಸಲು ಅವಕಾಶ ಇದ್ದರೂ, ಸ್ಥಳೀಯಾಡಳಿತದ ಇಚ್ಛಾಶಕ್ತಿ ಕೊರತೆಯಿಂದ ಮಕ್ಕಳ ಕ್ರೀಡಾ ಚಟುವಟಿಕೆಗೆ ತಡೆಯೊಡ್ಡಲಾಗಿದೆ.

    ದಕ್ಷಿಣ ರಾಜ್ಯಗಳಲ್ಲಿ ಸುಧಾರಣೆ: ಶಿಕ್ಷಣಕ್ಕಾಗಿ ಏಕೀಕೃತ ಜಿಲ್ಲಾ ಮಾಹಿತಿ ಕೋಶ (ಯುಡಿಐಎಸ್​ಇ) ಸಂಗ್ರಹಿಸಿರುವ ಅಂಕಿ-ಆಂಶದಂತೆ ಪಂಜಾಬ್ ರಾಜ್ಯದಲ್ಲಿ ಶೇ.97.5 ಶಾಲೆಗಳಲ್ಲಿ ಆಟದ ಮೈದಾನ ಸೌಲಭ್ಯವಿದೆ. ಈಶಾನ್ಯ ರಾಜ್ಯವಾದ ಮೇಘಾಲಯದಲ್ಲಿ ಶೇ.43.7 ಶಾಲೆಗಳಲ್ಲಿ ಮಾತ್ರ ಪ್ಲೇಗ್ರೌಂಡ್ ಇದೆ. ಈ ರಾಜ್ಯದ ಮುಕ್ಕಾಲು ಭಾಗ ಅರಣ್ಯದಿಂದ ಆವೃತವಾಗಿರುವ ಕಾರಣ ಆಟದ ಮೈದಾನ ಹೊಂದಲು ಸಾಧ್ಯವಾಗಿಲ್ಲ. ಕರ್ನಾಟಕ ಒಳಗೊಂಡ ದಕ್ಷಿಣ ಭಾರತದ ರಾಜ್ಯಗಳಲ್ಲಿ ಸರಾಸರಿ ಶೇ.83 ಶಾಲೆಗಳಲ್ಲಿ ಪ್ಲೇಗ್ರೌಂಡ್ ಹೊಂದಿದ ಹೆಗ್ಗಳಿಕೆ ಪಡೆದಿವೆ.

    ಮಕ್ಕಳ ದೈಹಿಕ ಕ್ಷಮತೆ ಕ್ಷೀಣ: ಶಾಲಾ ಹಂತದಲ್ಲೇ ಮಕ್ಕಳು ದೈಹಿಕ ಕ್ಷಮತೆ ಕಾಯ್ದುಕೊಂಡಲ್ಲಿ ವಯಸ್ಕರಾಗುವ ವೇಳೆಗೆ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಿದೆ. ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮಕ್ಕಳು ಇತರರಿಗಿಂತ ಹೆಚ್ಚು ಆರೋಗ್ಯವಂತರು, ದೇಹದಾರ್ಢ್ಯತೆ ಹೊಂದಿದವರಾಗಿರುತ್ತಾರೆ. ಜತೆಗೆ ಈ ಮಕ್ಕಳಲ್ಲಿ ಏಕಾಗ್ರತೆ, ಓದಿನಲ್ಲಿ ಆಸಕ್ತಿ ಹೆಚ್ಚಿರುತ್ತದೆ. ಇದನ್ನು ಗಮನಿಸಿಯೇ ಪ್ರತಿ ಶಾಲೆಯಲ್ಲಿ ಆಟದ ಮೈದಾನ ಹೊಂದಿರುವುದನ್ನು ಕಡ್ಡಾಯ ಮಾಡಲಾಗಿದೆ. ಪ್ಲೇಗ್ರೌಂಡ್ ಸೌಲಭ್ಯ ಹೊಂದದ ಶಾಲಾ ಮಕ್ಕಳಲ್ಲಿ ದೈಹಿಕ ಕ್ಷಮತೆ ಕೊರತೆ ಉಂಟಾಗಿ ಓದಿನಲ್ಲಿ ಹಿಂದೆ ಬೀಳುವಂತಾಗಿದೆ. ಮುಖ್ಯವಾಗಿ ನಗರ ಪ್ರದೇಶದ ಮಕ್ಕಳು ಆಟೋಟಗಳಲ್ಲಿ ಪಾಲ್ಗೊಳ್ಳದೆ ಮೊಬೈಲ್ ದಾಸರಾಗಿರುವ ಕಾರಣ ಬೊಜ್ಜು ಬೆಳೆಸಿಕೊಂಡು ದೈಹಿಕ ಕ್ಷಮತೆಯ ಕೊರತೆ ಅನುಭವಿಸುತ್ತಿದ್ದಾರೆ ಎಂಬುದನ್ನು ಮಕ್ಕಳ ತಜ್ಞರು ಅನಿಸಿಕೆ ವ್ಯಕ್ತಪಡಿಸಿದ್ದಾರೆ.

    ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಕ್ರೀಡಾಂಗಣಗಳ ಕೊರತೆ: ದೇಶದಲ್ಲಿ ಶೇ.33 ಶಾಲೆಗಳಿಗಿಲ್ಲ ಮೈದಾನ; ಪಂಜಾಬ್​ನಲ್ಲಿ ಹೆಚ್ಚು, ಮೇಘಾಲಯ ಕಡಿಮೆ

    ನಿರ್ವಹಣೆಗೆ ಸಂಪನ್ಮೂಲದ ಕೊರತೆ

    | ಶಿವಾನಂದ ಹಿರೇಮಠ ಗದಗ

    ರಾಜ್ಯದಲ್ಲಿನ ತಾಲೂಕು ಕ್ರೀಡಾಂಗಣಗಳ ನಿರ್ವಹಣೆಗೆ ಅನá-ದಾನದ ಅಭಾವ ಎದá-ರಾಗಿದ್ದು, ಸ್ಥಳೀಯವಾಗಿ ಆರ್ಥಿಕ ಸಂಪನ್ಮೂಲ ಸೃಷ್ಟಿಸá-ವ ಯೋಜನೆಯೂ ಕೈಗೂಡಿಲ್ಲ. ಕೋವಿಡ್ ನಂತರ ಹಣಕಾಸು ಇಲಾಖೆಯ ಮಿತವ್ಯಯ ನೀತಿಯಿಂದ ಕ್ರೀಡಾಂಗಣಗಳನ್ನು ನಿರ್ವಹಿಸುವುದು ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ನಿರ್ದೇಶಕರಿಗೆ ತಲೆನೋವಾಗಿದೆ.

    ರಾಜ್ಯದಲ್ಲಿ 121 ತಾಲೂಕು ಕ್ರೀಡಾಂಗಣಗಳಿವೆ. ಪ್ರತಿ ಕ್ರೀಡಾಂಗಣದಲ್ಲಿ ಗುತ್ತಿಗೆ ಆಧಾರದಲ್ಲಿ ಕೋಚ್, ಸ್ವೀಪರ್, ಜಿಮ್ ತರಬೇತುದಾರ ಹಾಗೂ ಪ್ರಭಾರಿ ತಾಲೂಕು ಅಧಿಕಾರಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಈ ಸಿಬ್ಬಂದಿಯ ಗೌರವಧನ ಹಾಗೂ ಕ್ರೀಡಾಂಗಣಗಳ ನಿರ್ವಹಣೆಗೆ ವರ್ಷಕ್ಕೆ ಅಂದಾಜು 20 ಕೋಟಿ ರೂ. ಅಗತ್ಯವಿದೆ. ಬೆಂಗಳೂರು ಸ್ಟೇಡಿಯಂಗಳಿಗೆ 50 ಕೋಟಿಗೂ ಹೆಚ್ಚು ಅನá-ದಾನ ಬೇಕಾಗುತ್ತದೆ. ಆದರೆ, ಕೋವಿಡ್ ನೆಪದಿಂದ 2020-21, 2021-22ನೇ ಅರ್ಥಿಕ ವರ್ಷದಲ್ಲಿ ಅನುದಾನ ಬಿಡುಗಡೆಯೇ ಆಗಿಲ್ಲ.

    ಪ್ರಸಕ್ತ ಬಜೆಟ್​ನಲ್ಲಿ 121 ಕ್ರೀಡಾಂಗಣಗಳಿಗೆ 15 ರೂ. ಕೋಟಿ ಹಂಚಿಕೆ ಮಾಡಲಾಗಿತ್ತು. ಮೊದಲ ಮತ್ತು ಎರಡನೇ ಕಂತಿನಲ್ಲಿ 3.5 ಕೋಟಿ ರೂ. ಅನುದಾನವನ್ನು ಹಂಚಿಕೆ ಮಾಡಿ ಬಿಡುಗಡೆ ಮಾಡಲಾಗಿದೆ. ಎರಡನೇ ಕಂತಿನ ಅನುದಾನ 3.5 ಕೋಟಿ ರೂ. ನ.14ರಂದು ಬಿಡುಗಡೆ ಆಗಿದೆ. ಈ ಹಣ ಸಿಬ್ಬಂದಿಗೆ ಗೌರವಧನ ನೀಡಲೂ ಸಾಲುತ್ತಿಲ್ಲ. ಉಳಿದ ಕೆಲಸಗಳನ್ನು ಹೇಗೆ ನಿರ್ವಹಿಸá-ವುದು ಎಂದು ಅಧಿಕಾರಿಗಳು ಅಳಲು ತೋಡಿಕೊಳ್ಳುತ್ತಾರೆ. ನವೆಂಬರ್ ತಿಂಗಳಿನಲ್ಲಿ ತುಮಕೂರು ಜಿಲ್ಲೆಗೆ 8.15 ಲಕ್ಷ ರೂ, ರಾಮನಗರ-7.1 ಲಕ್ಷ, ಚಿಕ್ಕಮಗಳೂರು-7.41 ಲಕ್ಷ, ಕೊಡಗು-8.42 ಲಕ್ಷ, ಗದಗ ಜಿಲ್ಲೆಗೆ 4.23 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಇದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಿದೆ!

    ಇನ್ನೊಂದೆಡೆ ಸ್ಥಳೀಯವಾಗಿಯೇ ಸಂಪನ್ಮೂಲ ಸೃಷ್ಟಿಗೆ ರಾಜ್ಯ ಸರ್ಕಾರ ಪೇ ಆಂಡ್ ಪ್ಲೇ ಯೋಜನೆ ಜಾರಿಗೊಳಿಸಿದೆ. ಇದು ಬೆಂಗಳೂರಿನಲ್ಲಿ ಯಶಸ್ಸು ಕಂಡಿದೆ. ಅಲ್ಲಿ ಪ್ರೊ ಕಬ್ಬಡ್ಡಿ, ಪ್ರೊ ವಾಲಿಬಾಲ್, ಫುಟ್​ಬಾಲ್ ಇತ್ಯಾದಿ ಆಯೋಜಿಸಿ ವಾರ್ಷಿಕ 3-5 ಕೋಟಿ ರೂ. ಆದಾಯ ನಿರೀಕ್ಷಿಸಬಹುದಾಗಿದೆ. ಆದರೆ, ತಾಲೂಕು ಮಟ್ಟದಲ್ಲಿ ಅಂಥ ವಾತಾವರಣ ಸೃಷ್ಟಿಯಾಗಿಲ್ಲ.

    ರಾಜ್ಯದಲ್ಲಿ 35 ಕ್ರೀಡಾಂಗಣದಲ್ಲಿ ಈಜá-ಕೊಳವಿದ್ದರೂ ಕೋವಿಡ್ ನಂತರ ಮುಚ್ಚಿವೆ. ವಿದ್ಯುತ್ ಬಿಲ್, ಸ್ವಚ್ಛತೆ, ನಿರ್ವಹಣೆಗೆೆ, ಸ್ಟೇಷನರಿ ಖರೀದಿ ಮತ್ತು ಅಭಿವೃದ್ಧಿಗೆ ಹೆಚ್ಚುವರಿ ಅನುದಾನ ಅಗತ್ಯವಿದೆ.

    | ರಮೇಶ್ ಜಂಟಿ ನಿರ್ದೇಶಕ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ, ಬೆಂಗಳೂರು

    ಪರಿಹಾರವೇನು?: ತಾಲೂಕು ಮಟ್ಟದ ಕ್ರೀಡಾಂಗಣಗಳಲ್ಲಿ ವರ್ಷಪೂರ್ತಿ ಕ್ರೀಡಾ ಚಟುವಟಿಕೆಗಳು ಜರುಗುವುದಿಲ್ಲ. ಹಾಗಾಗಿ ಅಲ್ಲಿ ವಾಣಿಜ್ಯ ಚಟುವಟಿಕೆೆಗಳಿಗೆ ಉತ್ತೇಜನ ನೀಡಬಹá-ದಾಗಿದೆ. ಕ್ರೀಡಾ ಚಟುವಟಿಕೆಗೆ ಮೊದಲು ಆದ್ಯತೆ ನೀಡಿ, ಉಳಿದ ದಿನಗಳಲ್ಲಿ ಮದುವೆ, ಕೃಷಿ ಮೇಳ, ಉದ್ಯೋಗಮೇಳ ಇನ್ನಿತರ ಚಟುವಟಿಕೆಗಳಿಗೆ ಒದಗಿಸಿದರೆ, ಬರುವ ಹಣವನ್ನು ಕ್ರೀಡಾಂಗಣ ನಿರ್ವಹಣೆಗಾಗಿಯೇ ಮೀಸಲಿಡಬಹá-ದು ಎಂಬá-ದು ಕ್ರೀಡಾಸಕ್ತರ ವಾದ. ಆದರೆ, ಬೆಂಗಳೂರಿನ ಕೋರಮಂಗಲ ಕ್ರೀಡಾಂಗಣವನ್ನು ಮಾತ್ರ ವಾಣಿಜ್ಯ ಚಟುವಟಿಕೆ ಬಳಕೆಸಲು ಸರ್ಕಾರ ಅನುಮತಿ ನೀಡಿದೆ.

    ‘ಡಾ.ಬ್ರೋ’ಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಕನ್ನಡಿಗರ ಆಗ್ರಹ; ಏನಂತಾರೆ ‘ನಮಸ್ಕಾರ ದೇವರು’?

    ಮತ್ತೆ ಬರುತ್ತೆ ಆರ್ಕುಟ್​?; ರಿಪ್​ ಟ್ವಿಟರ್​ ಟ್ರೆಂಡಿಂಗ್​ ಬೆನ್ನಿಗೇ ಗರಿಗೆದರಿದ ನಿರೀಕ್ಷೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts