More

    ಮತ್ತೆ ಬರುತ್ತೆ ಆರ್ಕುಟ್​?; ರಿಪ್​ ಟ್ವಿಟರ್​ ಟ್ರೆಂಡಿಂಗ್​ ಬೆನ್ನಿಗೇ ಗರಿಗೆದರಿದ ನಿರೀಕ್ಷೆ..

    ನವದೆಹಲಿ: ಇಪ್ಪತ್ತು ವರ್ಷಗಳ ಹಿಂದೆಯೇ ಸೋಷಿಯಲ್ ಮೀಡಿಯಾ ಆಗಿ ಜನರನ್ನು ತನ್ನತ್ತ ಸೆಳೆದಿದ್ದ, ಸಂಪರ್ಕ ಕಳೆದುಕೊಂಡಿದ್ದ ಸ್ನೇಹಿತರು-ಪ್ರೇಮಿಗಳನ್ನು ಮತ್ತೆ ಬೆಸೆದಿದ್ದ ಆರ್ಕುಟ್ ( Orkut ) ಇದೀಗ ಪುನಃ ಸದ್ದು ಮಾಡುತ್ತಿದ್ದು, ಮತ್ತೆ ಶುರುವಾಗಲಿದೆಯೇ ಎಂಬ ಕುತೂಹಲವೊಂದು ಕೂಡ ಮೂಡಿದೆ.

    ಟ್ವಿಟರ್​ನಲ್ಲಿನ ಅಲ್ಲೋಲ-ಕಲ್ಲೋಲದ ಹಿನ್ನೆಲೆಯಲ್ಲಿ ರಿಪ್​ ಟ್ವಿಟರ್​, ಗುಡ್​ಬೈ ಟ್ವಿಟರ್​ಗಳು ಟ್ರೆಂಡಿಂಗ್ ಆಗುತ್ತಿದ್ದು, ಈ ನಡುವೆ ಜನರು ಬಹುತೇಕ ಮರೆತೇ ಬಿಟ್ಟಿದ್ದಂಥ ಆರ್ಕುಟ್ ಕೂಡ ಟ್ರೆಂಡಿಂಗ್ ಆಗಿರುವುದು ಅಚ್ಚರಿ ಮೂಡಿಸಿದೆ. ಬಹಳಷ್ಟು ಜನರು ಆರ್ಕುಟ್ ಕುರಿತು ಮಾತನಾಡಲಾರಂಭಿಸಿದ್ದು, ಪುನಃ ಆರ್ಕುಟ್ ಶುರುವಾಗಲಿ ಎಂಬ ಆಶಯವನ್ನೂ ವ್ಯಕ್ತಪಡಿಸಿದ್ದಾರೆ.

    ಎಲಾನ್ ಮಸ್ಕ್ ಟ್ವಿಟರ್​ ಮಾಲೀಕತ್ವ ಹೊಂದಿದ ಮೇಲೆ ಅರ್ಧಕ್ಕೂ ಹೆಚ್ಚು ಮಂದಿಯನ್ನು ಕೆಲಸದಿಂದ ತೆಗೆದುಹಾಕಿದ್ದಲ್ಲದೆ, ಹೆಚ್ಚು ಕೆಲಸ ಮಾಡಲು ಆಗದಿದ್ದರೆ ಕೆಲಸವನ್ನೇ ಬಿಡಿ ಎಂದೂ ಹೇಳಿದ್ದಾರೆ. ಮಾತ್ರವಲ್ಲ ಮೂರು ದಿನಗಳ ಟ್ವಿಟರ್​ ಕಚೇರಿಗಳೆಲ್ಲ ಮುಚ್ಚಿರುವುದಾಗಿಯೂ ಹೇಳಿದ್ದಾರೆ. ಈ ಮಧ್ಯೆ ಹಲವರು ಆರ್ಕುಟ್​​ದಿನಗಳನ್ನು ನೆನಪಿಸಿಕೊಂಡಿದ್ದು, ಆರ್ಕುಟ್​ ಮತ್ತೆ ಬರಲಿ ಎಂಬ ಆಸೆಯನ್ನೂ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಎಲಾನ್​ ಮಸ್ಕ್ ಮೇಲೆ ಸಿಟ್ಟಾಗಿದ್ದಾರಾ ಟ್ವಿಟರ್​ ಉದ್ಯೋಗಿಗಳು? ಮೀಟಿಂಗ್​ನಿಂದ ಹೊರ ನಡೆದ ನೌಕರರು…

    2004ರಿಂದ ಆರಂಭಗೊಂಡಿದ್ದ ಆರ್ಕುಟ್​ 2014ರಲ್ಲಿ ಸ್ಥಗಿತಗೊಂಡಿತ್ತು. ಈಗಿನ ಸೋಷಿಯಲ್ ಮೀಡಿಯಾದ ಕಲ್ಪನೆ ಆಗ ಆರ್ಕುಟ್​ ಮೂಲಕವೇ ಜಾರಿಯಲ್ಲಿದ್ದರೂ ಆಗ ಅದಕ್ಕೆ ಕಾಲ ಪಕ್ವವಾಗಿರದ್ದರಿಂದ ಹಿನ್ನಡೆಯಾಗಿತ್ತು ಎಂದು ವಿಶ್ಲೇಷಲಾಗಿತ್ತು. ಈಗ ಆರ್ಕುಟ್ ಮತ್ತೆ ಬಂದರೆ ಜನ ಮುಗಿಬಿದ್ದು ಬಳಸಿದರೂ ಅಚ್ಚರಿ ಏನಿಲ್ಲ ಎನ್ನಲಾಗುತ್ತಿದೆ.

    ಮತ್ತೆ ಬರುತ್ತೆ ಆರ್ಕುಟ್​?; ರಿಪ್​ ಟ್ವಿಟರ್​ ಟ್ರೆಂಡಿಂಗ್​ ಬೆನ್ನಿಗೇ ಗರಿಗೆದರಿದ ನಿರೀಕ್ಷೆ..

    ಒಂದೂವರೆ ವರ್ಷದ ಮಗನನ್ನೇ ಮಾರಿದ ತಾಯಿ; ನಾಲ್ಕೂವರೆ ವರ್ಷ ಹುಡುಕಾಡಿ ಪುತ್ರನನ್ನು ಪತ್ತೆ ಮಾಡಿ ಪಡೆದ ತಂದೆ!

    ಮಧ್ಯರಾತ್ರಿಯಲ್ಲಿ ಕಾಂಪೌಂಡ್ ಹಾರಿ ಸಿಕ್ಕಿಬಿದ್ದ ಲವರ್​; ಪ್ರೇಯಸಿಯ ಪತಿಯ ಕೈಯಿಂದ ಬಚಾವಾಗಲು ಯತ್ನಿಸಿ ಪೊಲೀಸರ ವಶವಾದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts