More

    ಕಿಡ್ನಿ ದಾನಕ್ಕಾಗಿ ವೆಬ್ ಸೈಟ್ ತೆರೆದು ವಂಚನೆ: ಕೆಮರೂನ್ ದೇಶದ ಪ್ರಜೆಯಿಂದ ಕರ್ನಾಟಕದಲ್ಲಿ ಹೈಟೆಕ್ ಮೋಸ

    ಬೆಂಗಳೂರು: ಕಿಡ್ನಿ ದಾನಕ್ಕಾಗಿ ವೆಬ್ ಸೈಟ್ ತೆರೆದು ಕೆಮರೂನ್ ದೇಶದ ಪ್ರಜೆಯೊಬ್ಬ ಕರ್ನಾಟಕಲ್ಲಿ ಹೈಟೆಕ್ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

    ಪ್ರತಿಷ್ಠಿತ ವೈದ್ಯರ ಫೋಟೋ ಅಪ್ಲೋಡ್ ಮಾಡಿ, ನಾರಾಯಣ ಕ್ಲಿನಿಕ್ ಲೋಗೋ ಹಾಕಿ ಕಿಡ್ನಿ ಡೋನರ್​ಗಳಿಗೆ ವಂಚನೆ ಮಾಡುತ್ತಿದ್ದ. Sell your kidney.in ನಲ್ಲಿ ಕಿಡ್ನಿಗಾಗಿ ಜಾಹಿರಾತು ನೀಡಿದ್ದ.

    ಕಿಡ್ನಿ ಕೊಡಲು ಮುಂದಾದವರಿಗೆ ಆರಂಭದಲ್ಲಿ ಎರಡು ಕೋಟಿ‌ ರೂಪಾಯಿ ಮತ್ತು ಮಾರಾಟದ ನಂತರ ಎರಡು ಕೋಟಿ ರೂಪಾಯಿ ಎಂದು ಆಫರ್ ನೀಡಿದ್ದ.

    ನಾಲ್ಕು ಕೋಟಿ ಆಸೆಗೆ ಬಿದ್ದು ವೆಬ್​ಸೈಟ್ ಮೂಲಕ ಸಂಪರ್ಕ ಮಾಡುತ್ತಿದ್ದ ಅಮಾಯಕರು. ವಾಟ್ಸ್​ಆ್ಯಪ್​ ಮೂಲಕ ಅಮಾಯಕರನ್ನು ಆರೋಪಿ ಸಂಪರ್ಕಿಸುತ್ತಿದ್ದ. ರಕ್ತ ಪರೀಕ್ಷೆ ಮಾಡಲು 15 ಸಾವಿರ ಹಣ ಮುಂಗಡ ಪಾವತಿ ಮಾಡಿ ಎಂದು ಹಣ ಹಾಕಿಸಿಕೊಳ್ಳುತ್ತಿದ್ದ. ಮಿಜೋರಾಂನಲ್ಲಿದ್ದ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದ. ಅಲ್ಲಿನ ವ್ಯಕ್ತಿಯೊಬ್ಬ ಶೇ. 20 ಇಟ್ಟು ಕೊಂಡು ಉಳಿದ ಹಣ ಕೆಮರೂನ್​ ಅಕೌಂಟ್​ಗೆ ಹಣ ರವಾನಿಸುತ್ತಿದ್ದ ಮಿಜೋರಾಂ ವ್ಯಕ್ತಿ.

    ಬೆಂಗಳೂರಿನಲ್ಲಿ ಇದ್ದೂಕೊಂಡೆ ವಂಚಿಸುತ್ತಿದ್ದ ಕೆಮರೂನ್ ದೇಶದ ತಾ ಬೆವರ್ಕಾ ಜಾಫ್ ಡಿಕ್ಲಾನ್ ಎಂಬುವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೇರಳದ ಮಹಿಳೆ ಒಬ್ಬರ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಂಧಿತ ಆರೋಪಿಯಿಂದ ಪೆನ್ ಡ್ರೈವ್​. ಎಟಿಎಂ ಕಾರ್ಡ್, ಮೊಬೈಲ್ ವಶಕ್ಕೆ ಪಡೆಯಲಾಗಿದೆ.

    ಫರಾನ ಕಾಲೇಜ್​ನಲ್ಲಿ ಬಿಸಿಎ ಓದುತ್ತಿದ್ದ ಎರಡು ಸೆಮ್ ಫೇಲ್ ಆಗಿ ವೆಬ್ ಡಿಸೈನ್ ಕಲಿತುಕೊಂಡಿದ್ದ ಆರೋಪಿ. ಆರೋಪಿಯಿಂದ ವಸಪಡಿಸಿಕೊಂಡ ಲ್ಯಾಪ್​ಟಾಪ್ ನೋಡಿ ಸಿಸಿಬಿ ಪೊಲೀಸರು ಶಾಕ್‌ ಆಗಿದ್ದಾರೆ.

    ಕೇವಲ ಕಿಡ್ನಿ ಡೋನರ್ ಹೆಸರಲ್ಲಿ ಮಾತ್ರವಲ್ಲದೆ ಹಸುಗಳ ಹೆಸರಲ್ಲೂ ಲಕ್ಷ ಲಕ್ಷ ಹಣ ವಂಚಿಸಿದ್ದಾನೆ. ಹೋಪ್ ಡೈರಿ ಫಾರ್ಮ್ ಲಿ. (hope diary for melts.com) ವೆಬ್ ಕ್ರಿಯೇಟ್ ಮಾಡಿದ್ದ. ಗಿರ್, ಎಚ್ಎಫ್ ಸೇರಿ ಹಲವು ತಳಿ ಹಸುಗಳ ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ಪ್ರಚಾರ ಮಾಡುತ್ತಿದ್ದ.

    ಅಧಿಕ ಬೆಲೆಯ ರಾಸುಗಳನ್ನು ಅತ್ಯಂತ ಕಡಿಮೆ ಬೆಲೆಗೆ ಕೊಡ್ತಿವಿ ಎಂದು ಪ್ರಚಾರ ಮಾಡುತ್ತಿದ್ದ, ರಾಸುಗಳ ಸ್ಟೇಟ್ ಟ್ರಾನ್ಸಫರ್, ಇನ್ಷೂರೆನ್ಸ್​ ಮತ್ತು ವೆಟನರಿ ಸ್ಟೇಟ್ ಕ್ಲಿಯರೆನ್ಸ್ ಚಾರ್ಜ್ ಶೇ.30-40 ಹಣ ವಸೂಲಿ ಮಾಡಿ ನಂತ ವಂಚಿಸುತ್ತಿದ್ದ. ರಾಸುಗಳ ಆಸೆಗೆ ಬಿದ್ದು ಕನಕಪುರ ಮೂಲದ ಗೌತಮ್ ಎಂಬುವವರು 6 ಲಕ್ಷ ರೂ. ಕಳೆದುಕೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts