More

    ಬಿಜೆಪಿ ಸೇರ್ಪಡೆ ಹಾಗೂ ಬೆದರಿಕೆ ಪತ್ರ ವಿಚಾರ: ನಟ ಸುದೀಪ್​ ಕೊಟ್ಟ ಸ್ಪಷ್ಟನೆ ಹೀಗಿದೆ…

    ಬೆಂಗಳೂರು: ನಟ ಸುದೀಪ್​ ಬಿಜೆಪಿ ಸೇರುತ್ತಾರೆ ಎಂಬ ವಿಚಾರ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿರುವುದರ ನಡುವೆಯೇ ಸ್ವತಃ ಸುದೀಪ್​ ಅವರು ಇದೀಗ ಸ್ಪಷ್ಟನೆ ನೀಡಿದ್ದಾರೆ. ಈ ಹಿಂದೆಲ್ಲ ಯಾವ ಪಕ್ಷದಿಂದ ಕರೆದರೂ ನಾನು ಹೋಗಿ ಪ್ರಚಾರ ಮಾಡಿದ್ದೇನೆ. ಹೀಗಂದ ಮಾತ್ರಕ್ಕೆ ನಾನು ನೇರವಾಗಿ ಬೆಂಬಲ ನೀಡುತ್ತಿದ್ದೇನೆ ಎಂಬರ್ಥವಲ್ಲ ಎನ್ನುವ ಮೂಲಕ ರಾಜಕೀಯ ಎಂಟ್ರಿಯನ್ನು ತಳ್ಳಿ ಹಾಕಿದರು.

    ಜೆಪಿ ನಗರ ನಿವಾಸದ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಸುದೀಪ್​, ನಾನು ಕೆಲವನ್ನು ಇಲ್ಲಿ ಮಾತಾಡಲಿಕ್ಕೆ ಆಗಲ್ಲ. ನಾನೊಬ್ಬ ಕಲಾವಿದ. ಹೀಗಾಗಿ ಟಿಕೆಟ್ ಕೊಡ್ತೀವಿ ಅಂತ ನನಗೆ ಕೇಳುವುದರಲ್ಲಿ ತಪ್ಪೇನಿಲ್ವಲ್ಲಾ? ನಾನು ಅಭ್ಯರ್ಥಿಯಾಗಿ ಸ್ಪರ್ಧೆ ಮಾಡ್ತಿಲ್ಲ. ನನ್ನ ಪರ ಯಾರು ನಿಂತಿದ್ರು ಅವರ ಪರ ನಾನು ನಿಲ್ಲುತ್ತಿದ್ದೇನೆ. ಯಾವ ಪಕ್ಷದಿಂದ ಕರೆದರೂ ನಾನು ಹೋಗಿ ಪ್ರಚಾರ ಮಾಡಿದ್ದೇನೆ. ಹೀಗಂದ ಮಾತ್ರಕ್ಕೆ ನಾನು ನೇರವಾಗಿ ಸಪೋರ್ಟ್ ಮಾಡುತ್ತಿದ್ದೇನೆ ಎಂದರ್ಥವಲ್ಲ ಎಂದರು.

    ಇದನ್ನೂ ಓದಿ: VIDEO | ಬುಲೆಟ್ ಪ್ರೂಫ್ ‘ಬಕೆಟ್’ ತೊಟ್ಟು ಕೊರ್ಟ್​​ಗೆ ಬಂದ ಇಮ್ರಾನ್ ಖಾನ್!

    ಇದೇ ಸಂದರ್ಭದಲ್ಲಿ ಬೆದರಿಕೆ ಪತ್ರದ ಬಗ್ಗೆ ಮಾತನಾಡಿದ ಸುದೀಪ್, ಇದು ರಾಜಕೀಯದವರು ಮಾಡಿರುವುದಲ್ಲ. ಖಂಡಿತ ಇದನ್ನು ಚಿತ್ರರಂಗದವರೇ ಮಾಡಿಸಿದ್ದಾರೆ. ನಾನು ಯಾವುದಕ್ಕೂ ಹೆದರುವವನ್ನಲ್ಲ. ಈ ಮೊದಲೂ ಈಮೇಲ್ ಬರುತ್ತಿತ್ತು. ಈಗ ಪೋಸ್ಟ್​ ಮಾಡಿದ್ದಾರೆ. ಯಾರು ಅಂತ ಗೊತ್ತಿದ್ದರೂ ಈಗ ಸುಮ್ಮನಿರುತ್ತೇನೆ. ಅದಕ್ಕೆ ಹೇಗೆ ಉತ್ತರ ನೀಡಬೇಕು ಅಂತ ನನಗೆ ಗೊತ್ತಿದೆ. ಇವೆಲ್ಲ ಕಾನೂನಿನ ಪ್ರಕಾರ ಹೋದರೆ ಒಳ್ಳೆಯದು ಎಂದು ಹೇಳಿದರು.

    ನಟ ಸುದೀಪ್ ಬೆದರಿಕೆ ಪತ್ರ ವಿಚಾರವಾಗಿ ದಕ್ಷಿಣ ವಿಭಾಗ ಡಿಸಿಪಿ ಕೃಷ್ಣಕಾಂತ್ ಮಾತನಾಡಿ, ಸುದೀಪ್​ಗೆ ಬೆದರಿಕೆ ಪತ್ರ ಬಂದಿದೆ ಅಂತ ಮಂಜು ಎಂಬುವವರು ದೂರು ನೀಡಿದ್ದಾರೆ. ಪತ್ರ ಬರೆದವರು ಯಾರೆಂದು ಗೊತ್ತಿಲ್ಲ. ಪತ್ರದಲ್ಲಿ ಯಾವುದೇ ವಿಳಾಸ ಇಲ್ಲ. ಈ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ ಎಂದರು. (ದಿಗ್ವಿಜಯ ನ್ಯೂಸ್​)

    ರಶ್ಮಿಕಾ ಮಂದಣ್ಣ ಹುಟ್ಟುಹಬ್ಬಕ್ಕೆ ಪರಂವಃ ಸ್ಟುಡಿಯೋಸ್ ಮೂಲಕ ವಿಶ್ ಮಾಡಿದ ರಕ್ಷಿತ್ ಶೆಟ್ಟಿ!

    ಮಹಾ ಉದ್ಧಟತನಕ್ಕೆ ಸಿಎಂ ಬೊಮ್ಮಾಯಿ‌ ಕಿಡಿ; ವಿಮೆ ವಾಪಸ್ ಪಡೆಯದಿದ್ದರೆ ತಿರುಗೇಟಿನ ಎಚ್ಚರಿಕೆ

    ದ್ರೌಪದಿಯ ಕಥೆ ಮೂಲಕ ನಿಧಿಸಂಗ್ರಹ; ಸರ್ಕಾರಿ ಶಾಲೆಗಳ ದತ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts