More

    ರಶ್ಮಿಕಾ ಮಂದಣ್ಣ ಹುಟ್ಟುಹಬ್ಬಕ್ಕೆ ಪರಂವಃ ಸ್ಟುಡಿಯೋಸ್ ಮೂಲಕ ವಿಶ್ ಮಾಡಿದ ರಕ್ಷಿತ್ ಶೆಟ್ಟಿ!

    ಬೆಂಗಳೂರು: ‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ಸಿನಿಮಾ ರಂಗ ಪ್ರವೇಶಿಸಿದ ನಟಿ ರಶ್ಮಿಕಾ ಮಂದಣ್ಣ ಇಂದು ತಮ್ಮ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. 27ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರಶ್ಮಿಕಾ ಮಂದಣ್ಣ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

    ಇದೀಗ ರಶ್ಮಿಕಾ ಹುಟ್ಟು ಹಬ್ಬಕ್ಕೆ ಪರಂವಃ ಸ್ಟುಡಿಯೋಸ್ ಹಾರೈಸಿದೆ. ಪರಂವಃ ಸ್ಟುಡಿಯೋಸ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿಕೊಂಡು ಶುಭಶಯ ತಿಳಿಸಿದೆ. ರಶ್ಮಿಕಾ ಮಂದಣ್ಣ ಕೂಡ ಪೋಟೋ ಶೇರ್ ಮಾಡಿಕೊಂಡಿದ್ದಾರೆ. ನಿಮ್ಮ ಈ ವರ್ಷವು ಸಂತೋಷ, ನಗು ಮತ್ತು ಯಶಸ್ಸಿನಿಂದ ಕೂಡಿರಲಿ ಎಂದು ಪರಂವಃ ಸ್ಟುಡಿಯೋಸ್ ಹಾರೈಸಿದೆ.

    ಇದನ್ನೂ ಓದಿ: ರಶ್ಮಿಕಾ ಹೊಸ ಅವತಾರ; ಉರ್ಫಿ ಜಾವೇದ್ ಪ್ರಭಾವ ಎಂದ ನೆಟ್ಟಿಗರು!

    ನಟ ರಕ್ಷಿತ್ ಶೆಟ್ಟಿ ಪರಂವಃ ಸ್ಟುಡಿಯೋಸ್ ಮೂಲಕ ರಶ್ಮಿಕಾಗೆ ವಿಶ್ ಮಾಡಿರುವುದನ್ನು ಕಂಡು ಅಭಿಮಾನಿಗಳು ಒಂದು ಕ್ಷಣ ಅಚ್ಚರಿಗೊಂಡಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾ ಸಕ್ಸನ್​ನಲ್ಲಿದ್ದ ಈ ಜೋಡಿ, ಮದುವೆಯಾಗುವುದಾಗಿ ಹೇಳಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಇವರಿಬ್ಬರ ಮದುವೆ ಮುರಿದು ಬಿದ್ದು, ಈ ಜೋಡಿ ದೂರವಾಗಿತ್ತು. ಇದನ್ನೂ ಓದಿ: ತುಂಡುಡುಗೆ ತೊಟ್ಟು ಯುವತಿಯ ಮೆಟ್ರೋ ಪ್ರಯಾಣ; ಇದು ಊರ್ಫಿ ಜಾವೇದ್ ಪ್ರಭಾವ ಎಂದ ನೆಟ್ಟಿಗರು!

    ರಕ್ಷಿತ್ ಶೆಟ್ಟಿಯೊಂದಿಗಿನ ಮದುವೆ ಮುರಿದು ಬೀಳುತ್ತಿದ್ದಂತೆ ತೆಲುಗು ಸಿನಿಮಾ ರಂಗಕ್ಕೆ ಹಾರಿದ ರಶ್ಮಿಕಾ, ಸಾಕಷ್ಟು ಬಿಝಿಯಾಗಿದ್ದಾರೆ. ಸಾಲು ಸಾಲು ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದರೊಂದಿಗೆ ತನ್ನ ಮಾತುಗಳ ಮೂಲಕ ಸಾಕಷ್ಟು ಟ್ರೋಲ್ ಹಾಗು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಹೀಗಾಗಿ ರಶ್ಮಿಕಾ ಮಂದಣ್ಣ ಹೆಸರು ಸದಾ ಚಾಲ್ತಿಯಲ್ಲಿರುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts