More

    ಹಪ್ಪಳ ಮಾಡೋಕೆ ಹೊರಟಿದ್ದಾರೆ ಕಿಯಾರಾ ಅಡ್ವಾನಿ …

    ಮುಂಬೈ: ಬಾಲಿವುಡ್​ನಲ್ಲಿ ಬೇಡಿಕೆಯ ನಟಿ ಯಾರು ಎಂದರೆ, ಮೊದಲು ಬರುವ ಹೆಸರು ಕಿಯಾರಾ ಅಡ್ವಾನಿ ಅವರದ್ದು. ಈಗಾಗಲೇ, ‘ಜುಗ್​ ಜುಗ್​ ಜೀಯೋ’, ‘ಭೂಲ್​ ಬುಲ್ಲಯ್ಯಾ 2’, ‘ಶೇರ್​ಷಾ’ ಮುಂತಾದ ಚಿತ್ರಗಳಲ್ಲಿ ನಟಿಸುತ್ತಿರುವ ಕಿಯಾರಾ, ಇದೀಗ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ.

    ಇದನ್ನೂ ಓದಿ: ನಟ ಚಂದು ಗೌಡ ಆ್ಯಂಡ್​ ಗ್ಯಾಂಗ್​ಗೆ ಹೊಡೆಯಿತು ಜಾಕ್​ಪಾಟ್​!

    ಅಂದಹಾಗೆ, ಕಿಯಾರಾ ಒಪ್ಪಿರುವ ಹೊಸ ಚಿತ್ರದ ಹೆಸರು ‘ಕರ್ರಂ ಕುರ್ರಂ’. ಈ ಹೆಸರನ್ನು ಎಲ್ಲೋ ಕೇಳಿದ ಹಾಗಿದೆಯಲ್ಲಾ ಎಂಬ ಪ್ರಶ್ನೆ ಬರುವುದು ಸಹ. ಲಿಜ್ಜತ್​ ಪಾಪಡ್​ ಜಾಹೀರಾತಿನಲ್ಲಿ ‘ಕರ್ರಂ ಕುರ್ರಂ’ ಎಂಬ ಹಾಡು ಕೇಳಿರುತ್ತೀರಿ. ಈಗ ಅದೇ ಹೆಸರಿನಲ್ಲಿ ಸಿನಿಮಾ ಆಗುತ್ತಿದೆ.

    ಬರೀ ಜಾಹೀರಾತು ಮತ್ತು ಹಾಡಷ್ಟೇ ಅಲ್ಲ, ಇದು ಶ್ರೀ ಮಹಿಳಾ ಗೃಹ ಉದ್ಯೋಗ್​ ಎಂಬ ಮಹಿಳಾ ಸಹಕಾರ ಸಂಘದ ಕುರಿತಾದ ಚಿತ್ರವಾಗಿದೆ. ಹಲವು ವರ್ಷಗಳ ಹಿಂದೆ ಗುಜರಾತಿನ ಆರು ಮಹಿಳೆಯರು ಈ ಸಂಸ್ಥೆಯನ್ನು ಹುಟ್ಟುಹಾಕಿ, ಲಿಜ್ಜತ್​ ಪಾಪಡ್​ ಮಾರುವುದಕ್ಕೆ ಶುರು ಮಾಡಿದರೆ. ಹೀಗೆ ಶುರುವಾದ ಸಣ್ಣ ಸಂಸ್ಥೆಯೊಂದು ಹೇಗೆ ದೇಶಾದ್ಯಂತ ಬೆಳೆದು ಹೆಸರು ಮಾಡಿತು ಎಂಬ ಕಥೆ ಈ ಚಿತ್ರದಲ್ಲಿದೆ.

    ಶ್ರೀ ಮಹಿಳಾ ಗೃಹ ಉದ್ಯೋಗ್​ ಎಂಬ ಮಹಿಳಾ ಸಹಕಾರ ಸಂಘದ ಹುಟ್ಟಿಗೆ ಕಾರಣರಾದ ಮಹಿಳೆಯ ಪಾತ್ರದಲ್ಲಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದು, ‘ಕರ್ರಂ ಕುರ್ರಂ’ ಚಿತ್ರದಲ್ಲಿ ಅವರು ಹಪ್ಪಳ ಮಾಡುವ ಮತ್ತು ಮಾರುವ ಗೃಹಿಣಿಯಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಇಲ್ಲಿಯವರೆಗೂ ಗ್ಲಾಮರ್​ ಗೊಂಬೆಯಾಗಿ ಕಾಣಿಸಿಕೊಂಡಿದ್ದ ಅವರು, ಈ ಚಿತ್ರದಲ್ಲಿ ವಿಭಿನ್ನ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ಇದನ್ನೂ ಓದಿ: ಅಯೋಧ್ಯೆಯಲ್ಲಿ ‘ರಾಮ್​ ಸೇತು’ ಶೂಟಿಂಗ್​ ವಿಚಾರ: ಅಕ್ಷಯ್​ ಬೇಡಿಕೆಗೆ ಸಿಎಂ ಆದಿತ್ಯನಾಥ ಏನಂದ್ರು?

    ಈ ಚಿತ್ರವನ್ನು ನಿರ್ಮಿಸುತ್ತಿರುವವರು ಬಾಲಿವುಡ್​ನ ಜನಪ್ರಿಯ ನಿರ್ಮಾಪಕ ಅಶುತೋಶ್​ ಗೊವಾರಿಕರ್​. ಈ ಹಿಂದೆ ಅವರ ಜತೆಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಗ್ಲೆನ್​ ಬರೆಟ್ಟೋ ಮತ್ತು ಅಂಕುಶ್​ ಮೊಹ್ಲಾ, ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಮುಂದಿನ ವರ್ಷ ಈ ಚಿತ್ರ ಪ್ರಾರಂಭವಾಗಲಿದೆ.

    ಫ್ಯಾಂಟಮ್​ನಲ್ಲಿ ಶ್ರದ್ಧಾ ಇಲ್ಲ; ಸುದೀಪ್​ಗೆ ಜತೆಯಾಗಿ ಮುಂಬೈ ನಾಯಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts