More

    ಸೆಕ್ಸ್​ ಬಿಟ್ಟರೆ ಕಿಯಾರಾಗೆ ಏನಿಷ್ಟ!?; ಅಭಿಮಾನಿಯ ಪ್ರಶ್ನೆಗೆ ನಟಿಯ ಉತ್ತರ ಹೀಗಿದೆ

    ಮುಂಬೈ: ಬಾಲಿವುಡ್​ ನಟಿ ಕಿಯಾರಾ ಅಡ್ವಾಣಿ ಬಹುಬೇಗನೆ ಸ್ಟಾರ್ ನಟಿಯಾಗಿ ಗುರುತಿಸಿಕೊಂಡವರು. ದಕ್ಷಿಣ ಭಾರತದ ಸಿನಿಮಾ ಮೂಲಕ ಹೆಚ್ಚು ಮನ್ನಣೆ ಪಡೆದುಕೊಂಡು, ಇದೀಗ ಬಾಲಿವುಡ್​ನಲ್ಲಿಯೇ ನೆಲೆಕಂಡುಕೊಂಡಿದ್ದಾರೆ. ನ. 9ರಂದು ಅಕ್ಷಯ್​ ಕುಮಾರ್ ಜತೆಗೆ ನಟಿಸಿರುವ ಲಕ್ಷ್ಮೀ ಸಿನಿಮಾ ಸಹ ಬಿಡುಗಡೆಯಾಗಲಿದೆ. ಆ ಚಿತ್ರದ ಆನ್​ಲೈನ್​ ಪ್ರಚಾರದಲ್ಲಿಯೂ ಅವರು ತೊಡಗಿಸಿಕೊಂಡಿದ್ದಾರೆ. ಹೀಗಿರುವಾಗಲೇ ಸೆಕ್ಸ್ ವಿಚಾರದ ಬಗ್ಗೆಯೂ ಮಾತನಾಡಿ ಅಚ್ಚರಿ ಮೂಡಿಸಿದ್ದಾರೆ!

    ಇದನ್ನೂ ಓದಿ: PHOTOS| ಪತಿ ಜತೆಗಿನ ಚುಂಬನದ ಫೋಟೋ ಶೇರ್ ಮಾಡಿಕೊಂಡ ಕಾಜಲ್​

    ಹೌದು, ಸಿನಿಮಾ ಪ್ರಚಾರಕ್ಕೆಂದೇ ಸೋಷಿಯಲ್​ ಮೀಡಿಯಾದಲ್ಲಿ ಟ್ವಿಂಕಲ್​ ಖನ್ನಾ ಜತೆಗೆ ಲೈವ್​ ಬಂದಿದ್ದ ಕಿಯಾರಾ, ಅಭಿಮಾನಿಗಳಿಗೆ ನಿಮಗನಿಸಿದ್ದನ್ನು ಕೇಳಿ, ಅದಕ್ಕೆ ಉತ್ತರಿಸುತ್ತೇನೆ ಎಂದಿದ್ದರು. ಅದರಂತೆ ಸಾವಿರಾರು ಪ್ರಶ್ನೆಗಳು ಅವರ ಬಳಿ ಬಂದಿದ್ದವು. ಅದರಲ್ಲಿ ಓರ್ವ ನೆಟ್ಟಿಗ, ಗ್ರೇಟ್ ಸೆಕ್ಸ್ ಹೊರತುಪಡಿಸಿದರೆ, ನಿಮ್ಮನ್ನು ತುಂಬ ಸಂತೋಷಪಡಿಸುವ ಮೂರು ವಿಚಾರಗಳನ್ನು ಹಂಚಿಕೊಳ್ಳಿ ಎಂದಿದ್ದ.

    ಅದಕ್ಕೆ ಯಾವುದೇ ಅಳುಕಿಲ್ಲದೆ ಉತ್ತರ ನೀಡಿದ್ದ ಕಿಯಾರಾ, ಮೊದಲ ಸ್ಥಾನದಲ್ಲಿ ಪಿಜ್ಜಾ, ಶಾಪಿಂಗ್ ಮತ್ತು ಒಂದೊಳ್ಳೆ ಸಿನಿಮಾ ಈ ಮೂರು ನನ್ನನ್ನು ಹೆಚ್ಚು ಸಂತೋಷಪಡಿಸುವ ವಿಚಾರವೆಂದು ಹೇಳಿದ್ದಾರೆ. ಇನ್ನುಳಿದಂತೆ ನಿಮ್ಮ ಚಿಯರ್ ಲೀಡರ್​ ಯಾರು, ಶೂಟಿಂಗ್​ ಸಮಯದಲ್ಲಿ ನೀವು ಎದುರಿಸಿದ ಅತಿ ದೊಡ್ಡ ಸವಾಲು ಯಾವುದು ಹೀಗೆ ಬಗೆಬಗೆಯ ಪ್ರಶ್ನೆಗಳಿಗೆ ಕಿಯಾರಾ ಉತ್ತರಿಸಿ ಸೈ ಎನಿಸಿಕೊಂಡಿದ್ದಾರೆ.

    ಇದನ್ನೂ ಓದಿ: ರಾಜಕೀಯದಿಂದ ದೂರಾದರೆ ಅಪ್ಪ-ಮಗ? ವಿಜಯ್​ ಕುಟುಂಬದಲ್ಲಿ ಬಿರುಕು!

    ಸದ್ಯ ಒಂದಲ್ಲ ಎರಡಲ್ಲ ಸಾಲು ಸಾಲು ಸಿನಿಮಾ ಅವಕಾಶಗಳನ್ನು ಕಿಯಾರಾ ತಮ್ಮ ಬತ್ತಳಿಕೆಯಲ್ಲಿ ಇಟ್ಟುಕೊಂಡಿದ್ದಾರೆ. ಇಂದೂ ಕಿ ಜವಾನಿ, ಶೇರ್​ಷಾ, ಭೂಲ್​ ಭೂಲಯ್ಯ 2 ಚಿತ್ರ ಸೇರಿ ಇನ್ನೂ ಹಲವು ಪ್ರಾಜೆಕ್ಟ್​ಗಳನ್ನು ಕಿಯಾರಾ ಒಪ್ಪಿಕೊಂಡಿದ್ದಾರೆ. (ಏಜೆನ್ಸೀಸ್​)

    ಅಪ್ಪ ಮಗನ ಕೃಷಿ ಪ್ರೀತಿ; ಸೈಫ್​ ಜತೆ ಜಮೀನಿನಲ್ಲಿ ನೀರು ಹಾಯಿಸ್ತಿದ್ದಾನೆ ತೈಮೂರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts