More

  ಹೌದು ಫೋನ್​ S*x ಅನುಭವಿಸಿದ್ದೆ! ಬಾಲಿವುಡ್​ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಬೋಲ್ಡ್​ ಮಾತುಗಳು ವೈರಲ್​

  ಮುಂಬೈ: ನಟ-ನಟಿಯರು ತಮ್ಮ ಕುರಿತಾದ ರೋಚಕ ಹಾಗೂ ರಹಸ್ಯ ಸಂಗತಿಗಳನ್ನು ಕ್ಯಾಮೆರಾ ಮುಂದೆ ಬಿಚ್ಚಿಡುವಂತಹ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಮತ್ತೆ ವೈರಲ್​ ಆಗುತ್ತಿರುತ್ತವೆ. ಯಾವುದೇ ಕಾರಣವಿಲ್ಲದಿದ್ದರೂ ಹಳೆಯ ವಿಡಿಯೋಗಳು ಕೆಲವೊಮ್ಮೆ ಮತ್ತೆ ಮುನ್ನೆಲೆಗೆ ಬಂದು ಬಿಡುತ್ತವೆ. ಇದೀಗ ಬಾಲಿವುಡ್​ ಬ್ಯೂಟಿ ಪ್ರಿಯಾಂಕಾ ಚೋಪ್ರಾ ವಿಚಾರದಲ್ಲೂ ಅದೇ ನಡೆದಿದೆ. ಅವರ ಹಳೆಯ ವಿಡಿಯೋವೊಂದು ಮತ್ತೆ ಮುನ್ನೆಲೆಗೆ ಬಂದಿದೆ.

  ಖ್ಯಾತ ಬಾಲಿವುಡ್ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್​ ಜೋಹರ್​ ನಡೆಸಿಕೊಡುವ ಕಾಫಿ ವಿತ್​ ಕರಣ್​ ಕಾರ್ಯಕ್ರಮದ ಬಗ್ಗೆ ನಿಮಗೆಲ್ಲರಿಗೂ ತಿಳಿದೇ ಇದೆ. ಬಾಲಿವುಡ್​ ಸೆಲೆಬ್ರಿಟಿಗಳು ಶೋನ ಮುಖ್ಯ ಅತಿಥಿಗಳಾಗಿ ಬರುತ್ತಾರೆ. ಶಾರುಖ್​, ಸಲ್ಮಾನ್​, ಆಮೀರ್​, ಅನುಷ್ಕಾ ಶರ್ಮಾ, ಆಲಿಯಾ ಭಟ್​, ಕತ್ರಿನಾ ಕೈಫ್​, ಕಿಯಾರ ಅಡ್ವಾನಿ, ದೀಪಿಕಾ ಪಡುಕೋಣೆ ಹಾಗೂ ರಣವೀರ್​ ಸಿಂಗ್​ ಸೇರಿದಂತೆ ಕಲಾವಿದರ ದಂಡೇ ಈ ಶೋನಲ್ಲಿ ಭಾಗವಹಿಸಿದೆ.

  ನಟಿ ಪ್ರಿಯಾಂಕಾ ಚೋಪ್ರಾ ಸಹ ಭಾಗವಹಿಸಿದ್ದು, ಅವರಿಗೆ ಸಂಬಂಧಿಸಿದ ಹಳೆಯ ವಿಡಿಯೋ ಇದೀಗ ಮತ್ತೆ ಸದ್ದು ಮಾಡುತ್ತಿದೆ. ಈ ಶೋನಲ್ಲಿ ಅತಿಥಿಗಳಿಗೆ ಸಿನಿಮಾದಿಂದಾಚೆಗೆ ವೈಯಕ್ತಿಕ ಜೀವನದ ಪ್ರಶ್ನೆಗಳನ್ನು ಸಹ ಮಾಡಲಾಗುತ್ತದೆ. ಅಲ್ಲದೆ, ಲೈಂಗಿಕತೆ ಕುರಿತಾಗಿಯೂ ಪ್ರಶ್ನೆ ಮಾಡಲಾಗುತ್ತದೆ. ಅದೇ ರೀತಿ ಪ್ರಿಯಾಂಕಾ ಅವರನ್ನೂ ಕರಣ್​ ಪ್ರಶ್ನೆ ಮಾಡಿದ್ದರು. ಈ ವೇಳೆ ಪ್ರಿಯಾಂಕಾ ಕೊಟ್ಟಿದ್ದ ಉತ್ತರ ಸಿಕ್ಕಾಪಟ್ಟೆ ವೈರಲ್​ ಆಗಿತ್ತು ಮತ್ತು ಅಭಿಮಾನಿ ಹುಬ್ಬೇರಿಸಿತ್ತು.

  2017ರ ಜನವರಿಯಲ್ಲಿ ನಡೆದ 5ನೇ ಆವೃತ್ತಿಯ ಕಾಫಿ ವಿತ್​ ಕರಣ್​ ಶೋಗೆ ಪ್ರಿಯಾಂಕಾ ಚೋಪ್ರಾ ಅತಿಥಿಯಾಗಿ ಭಾಗವಗಿಸಿದ್ದರು. ಈ ವೇಳೆ ಕಾರ್ಯಕ್ರಮದ ನಿರೂಪಕ ಕರಣ್​ ಜೋಹರ್​ ಮುಕ್ತವಾಗಿ ಪ್ರಶ್ನೆಗಳನ್ನು ಕೇಳಿದ್ದರು. ನೀವು ಎಂದಾದರೂ ಫೋನ್​ ಸೆಕ್ಸ್​ ಮಾಡಿದ್ದೀರಾ ಎಂದು ಕರಣ್​ ಪ್ರಶ್ನೆ ಮಾಡಿದ್ದರು. ಇದಕ್ಕೆ ಉತ್ತರಿಸಿದ ಪಿಗ್ಗಿ, ತಾನು ಫೋನ್ ಸೆಕ್ಸ್‌ನಲ್ಲಿ ತೊಡಗಿದ್ದಾಗಿ ಒಪ್ಪಿಕೊಂಡರು. ಆದರೆ, ಯಾರೊಂದಿಗೆ ಎಂಬುದನ್ನು ಆಕೆ ಬಹಿರಂಗಪಡಿಸಲಿಲ್ಲ. ಅದನ್ನು ವೀಕ್ಷಕರ ಕಲ್ಪನೆಗೆ ಬಿಟ್ಟರು.

  ಲವ್​ ಮುರಿದುಬಿದ್ದ ನಂತರವೂ ಮಾಜಿ ಪ್ರಿಯಕರನನ್ನು ಚುಂಬಿಸಿದ್ದಾಗಿ ಪ್ರಿಯಾಂಕಾ ಇದೇ ಸಂದರ್ಭದಲ್ಲಿ ಬಹಿರಂಗಪಡಿಸಿದರು. ಇದೀಗ ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪ್ರಿಯಾಂಕಾ ಅವರ ಬೋಲ್ಡ್​ ಮಾತುಗಳನ್ನು ಕೇಳಿ ಅಭಿಮಾನಿಗಳು ಒಂದು ಕ್ಷಣ ದಂಗಾಗಿದ್ದಾರೆ. (ಏಜೆನ್ಸೀಸ್​)

  ಲಾಸ್ಟ್​ ಟೈಂ ಯಾವಾಗ ಲೈಂಗಿಕ ಕ್ರಿಯೆ ನಡೆಸಿದ್ರಿ! ವಿಜಯ್​ಗೆ ಕರಣ್​ ಪ್ರಶ್ನೆ, ನಾನು ಗೆಸ್​ ಮಾಡ್ಲಾ ಎಂದ ಅನನ್ಯಾ

  ನನ್ನ ಲೈಂಗಿಕ ಜೀವನ ಆಸಕ್ತಿಕರವಾಗಿಲ್ಲದಿರಬಹುದು! ಕರಣ್​ ಜೋಹರ್​ಗೆ ಟಾಂಗ್​ ಕೊಟ್ಟ ತಾಪ್ಸಿ ಪನ್ನು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts