More

    ನನ್ನ ಲೈಂಗಿಕ ಜೀವನ ಆಸಕ್ತಿಕರವಾಗಿಲ್ಲದಿರಬಹುದು! ಕರಣ್​ ಜೋಹರ್​ಗೆ ಟಾಂಗ್​ ಕೊಟ್ಟ ತಾಪ್ಸಿ ಪನ್ನು

    ಮುಂಬೈ: ಬಾಲಿವುಡ್​ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್​ ಜೋಹರ್​ ನಡೆಸಿಕೊಡುವ ಕಾಫಿ ವಿತ್​ ಕರಣ್​ ಕಾರ್ಯಕ್ರಮವನ್ನು ನಟಿ ತಾಪ್ಸಿ ಪನ್ನು ಲೇವಡಿ ಮಾಡಿದ್ದಾರೆ. ತಮ್ಮ ನಟನೆಯ ದೋಬಾರಾ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿರುವ ತಾಪ್ಸಿ, ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಕಾಫಿ ವಿತ್​ ಕರಣ್​ ಕಾರ್ಯಕ್ರಮ ವಿರುದ್ಧ ವಾಗ್ದಾಳಿ ನಡೆಸಿದರು.

    ನಿಮ್ಮನ್ಯಾಕೆ ಕಾಫಿ ವಿತ್​ ಕರಣ್​ ಕಾರ್ಯಕ್ರಮಕ್ಕೆ ಆಹ್ವಾನಿಸುವುದಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ತಾಪ್ಸಿ, ಕರಣ್​ ಜೋಹರ್​ ಟಾಕ್​ ಶೋಗೆ ನನ್ನನ್ನು ಆಹ್ವಾನಿಸುವಷ್ಟು ನನ್ನ ಲೈಂಗಿಕ ಜೀವನ ಆಸಕ್ತಿದಾಯಕವಾಗಿಲ್ಲದಿರಬಹುದು ಎಂದು ಹೇಳುವ ಮೂಲಕ ಕಾಫಿ ವಿತ್​ ಕರಣ್​ ಕಾರ್ಯಕ್ರಮದ ಬಗ್ಗೆ ವ್ಯಂಗ್ಯವಾಡಿದರು. ಏಕೆಂದರೆ, ಕರಣ್​ ಜೋಹರ್​ ನಡೆಸಿಕೊಡವ ಕಾರ್ಯಕ್ರಮದಲ್ಲಿ ಸಿನಿಮಾಗಿಂತ ಸೆಲೆಬ್ರಿಟಿಗಳ ಸೆಕ್ಸ್​ ಲೈಫ್​ ಬಗ್ಗೆಯೇ ಹೆಚ್ಚು ಮಾತನಾಡಲಾಗುತ್ತದೆ. ಈ ಕಾರಣದಿಂದ ತಾಪ್ಸಿ ಮೊನೆಚಾದ ಮಾತಿನ ಮೂಲಕವೇ ಕಾಫಿ ವಿತ್​​ ಕರಣ್​ ಕಾರ್ಯಕ್ರಮದ ವಿರುದ್ಧ ಚಾಟಿ ಬೀಸಿದ್ದಾರೆ.

    ಈ ಹಿಂದೆ ಕಾರ್ಯಕ್ರಮದ ಅತಿಥಿಗಳಾಗಿ ಬಂದಿದ್ದ ಸಾರಾ ಅಲಿ ಖಾನ್​, ಜಾಹ್ನವಿ ಕಪೂರ್​, ವಿಜಯ್​ ದೇವರಕೊಂಡ, ಅನನ್ಯಾ ಪಾಂಡೆ, ಕರೀನಾ ಕಪೂರ್​ ಹಾಗೂ ಆಮೀರ್​ ಖಾನ್​ ಬಳಿ ಸಿನಿಮಾಗಿಂದ ಲೈಂಗಿಕತೆ ಬಗ್ಗೆಯೇ ಕರಣ್​ ಜೋಹರ್​ ಹೆಚ್ಚಾಗಿ ಚರ್ಚಿಸಿದ್ದರು. ಮಗುವಾದ ಬಳಿಕ ಸೆಕ್ಸ್​ ಲೈಫ್​ ಹೇಗಿದೆ ಎಂದು ಕರೀನಾ ಕಪೂರ್​ ಅವರನ್ನು ಕರಣ್​ ಪ್ರಶ್ನೆ ಮಾಡಿದ್ದರು. ಇದಕ್ಕೆ ಉತ್ತರಿಸಿದ ಕರೀನಾ, ನಿಮಗೂ ಯಶ್​ ಮತ್ತು ರೂಹಿ ಎಂಬ ಮಕ್ಕಳಿರುವುದು ಗೊತ್ತಿರಲಿ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಕರಣ್​, ನೀವು ನನ್ನ ಸೆಕ್ಸ್​ ಲೈಫ್​ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದೀರಿ, ನನ್ನ ತಾಯಿ ಈ ಕಾರ್ಯಕ್ರಮವನ್ನು ನೋಡುತ್ತಿರುತ್ತಾರೆ ಎಂದರು. ಈ ವೇಳೆ ಆಮೀರ್​ ಖಾನ್​, ಕರಣ್​ಗೆ ತಕ್ಷಣ ಪ್ರಶ್ನೆಯೊಂದನ್ನು ಮುಂದಿಟ್ಟರು. ಬೇರೆಯವರ ಸೆಕ್ಸ್​ ಲೈಫ್​ ಬಗ್ಗೆ ಮಾತನಾಡುತ್ತೀಯಲ್ಲ ನಿಮ್ಮ ತಾಯಿ ಏನು ಅಂದುಕೊಳ್ಳುವುದಿಲ್ಲವಾ? ಎಂದಿದ್ದರು. ಈ ವಿಡಿಯೋ ಸಿಕ್ಕಾಪಟ್ಟೆ ಟ್ರೋಲ್​ ಆಗಿತ್ತು.

    ತಾಪ್ಸಿ ಪನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಅವರ ಮುಂಬರುವ ಚಿತ್ರ ದೋಬಾರಾವನ್ನು ಅನುರಾಗ್ ಕಶ್ಯಪ್ ನಿರ್ದೇಶಿಸಿದ್ದಾರೆ ಮತ್ತು ಏಕ್ತಾ ಕಪೂರ್ ನಿರ್ಮಿಸಿದ್ದಾರೆ. ಈ ಚಲನಚಿತ್ರವು ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಒಂದಾದ ಲಂಡನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್​ನಲ್ಲಿ ತೆರೆಕಂಡಿತು. ಈ ಚಿತ್ರವು 2018ರ ಸ್ಪ್ಯಾನಿಷ್ ಚಲನಚಿತ್ರ ಮಿರಾಜ್​ನ ರಿಮೇಕ್ ಆಗಿದೆ. ಇದು ಆಗಸ್ಟ್ 19 ರಂದು ಬಿಡುಗಡೆಯಾಗಲಿದೆ. (ಏಜೆನ್ಸೀಸ್​)

    ಕಮಲ್​ ಹಾಸನ್​ ವಿರುದ್ಧ ಗಂಭೀರ ಆರೋಪ ಮಾಡಿದ ಖ್ಯಾತ ಕಿರುತೆರೆ ಕಲಾವಿದೆ: ಅಭಿಮಾನಿಗಳಿಗೆ ಶಾಕ್​!

    ಧನಂಜಯ್ ನಿಜಕ್ಕೂ ನಟರಾಕ್ಷಸ!; ‘ಮಾನ್ಸೂನ್ ರಾಗ’ ಟ್ರೇಲರ್ ಲಾಂಚ್​ನಲ್ಲಿ ರಚಿತಾ ಮಾತು

    ಚೀನಿ ಮೊಬೈಲ್​ಗೆ ನಿರ್ಬಂಧ?; ಅಗ್ಗದ ಸ್ಮಾರ್ಟ್​ಫೋನ್ ಮಾರಾಟ ನಿಯಂತ್ರಣಕ್ಕೆ ಕೇಂದ್ರ ಪ್ಲ್ಯಾನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts