More

    20ಕ್ಕಿಳಿದ 50ರ ಖುಷ್ಬೂ! 15 ಕೆಜಿ ಭಾರ ಇಳಿಸಿದ ನಟಿಯ ಫೋಟೋಗಳು ವೈರಲ್…

    ಲಂಡನ್: ಖುಷ್ಬೂ ಎಂಬ ಹೆಸರು ದಕ್ಷಿಣ ಭಾರತದ ಸಿನಿರಂಗದಲ್ಲಿ ಬಹಳಷ್ಟು ಫೇಮಸ್. ಹೌದು, ಹೆಚ್ಚು ಕಡಿಮೆ ನಾಲ್ಕು ಭಾಷೆಗಳ ನೂರಾರು ಸಿನಿಮಾಗಳಲ್ಲಿ ನಟಿಸಿ ಈಗ ರಾಜಕೀಯದಲ್ಲಿ ಬ್ಯೂಸಿಯಾಗಿರುವ ನಟಿ ಅವರು. ಇನ್ನು, ಸಿನಿಮಾಗಳಲ್ಲಿ ನಟಿಸುವುದು ನಿಲ್ಲಿಸಿದಾಗಿನಿಂದ ಅವರು ತಮ್ಮ ಗ್ಲಾಮರ್ ಮತ್ತು ಫಿಟ್ನೆಸ್ ಕಡೆ ಹೆಚ್ಚು ಗಮನ ಹಾರಿಸಿಲ್ಲ. ಹಾಗಾಗಿ, ನಟಿ ಖುಷ್ಬೂ ಅವರು ದಪ್ಪಾ ಆಗಿದ್ದರು. ಆದರೆ, ಈಗ ತೂಕ ಇಳಿಕೆ ಎಂಬುದನ್ನು ಚಾಲೆಂಜ್ ಆಗಿ ತೆಗೆದುಕೊಂಡು, ಸಖತ್ ಸ್ಲಿಮ್ ಆಗಿ, ಸೂಪರ್ ಆಗಿ ಕಾಣಿಸುತ್ತಿದ್ದಾರೆ.
    ಹೌದು, ಇತ್ತೀಚಿನ ದಿನಗಳಲ್ಲಿ ನಟಿ ಖುಷ್ಬೂ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೆ ಸಕ್ರಿಯರಾಗಿದ್ದಾರೆ. ಅವರು ಹಲವು ಫೋಟೋಗಳನ್ನು, ವಿಡಿಯೋಗಳನ್ನು ಆಗಾಗ ಹಂಚಿಕೊಳ್ಳುತ್ತಲೆ ಇದ್ದಾರೆ. ಇದೀಗ, ನಟಿ ಹೊಸದಾಗಿ ಎರಡು ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋಗಳು ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಕಾರಣ, ಏನು ಅಂತೀರಾ?
    ಒಮ್ಮೆ ಈ ಫೋಟೋಗಳನ್ನು ನೋಡಿ. ಈ ಫೋಟೋಗಳನ್ನು ನೋಡಿದರೆ ನಟಿಯನ್ನು ಗುರುತು ಹಿಡಿಯುವುದು ಕಷ್ಟವಾಗುತ್ತದೆ. ಅಂದಹಾಗೆ, ನಟಿ ಸದ್ಯ ಲಂಡನ್​ನಲ್ಲಿ ಇದ್ದಾರೆ. ಹಾಗಾಗಿ, ನಟಿ ತಾವು ಅಲ್ಲಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ. 50ಖುಷ್ಬೂ ಅವರು ಈಗ 20ರ ಹುಡುಗಿಯಂತೆ ಕಾಣುತ್ತಿದ್ದಾರೆ. ವಯಸ್ಸಿನ ಮಿತಿಯಿಲ್ಲದೇ ವರ್ಕ್ಔಟ್ ಮಾಡಿ ಅವರು ತಮ್ಮ ದೇಹದ ಅಧಿಕ ತೂಕ ಇಳಿಸಿದ್ದಾರೆ. ನಟಿ ಬರೋಬ್ಬರಿ 15 ಕೆಜಿಗೂ ತೂಕ ಇಳಿಸಿದ್ದಾರೆ ಎಂದರೆ ನೀವು ನಂಬಲೆಬೇಕು.
    ನಟಿಯ ಈ ಹೊಸ ಫೋಟೋಗಳನ್ನು ನೋಡಿ ಎಲ್ಲರೂ ಅಚ್ಚರಿ ಹೊರಹಾಕಿದ್ದಾರೆ. ಇನ್ನು, ಖುಷ್ಬೂ ಕಟ್ಟಾಭಿಮಾನಿಗಳಂತೂ ಅವರ ಈ ತೂಕ ಇಳಿಸುವ ಕೆಲಸದಲ್ಲಿ ನಟಿ ಪಟ್ಟ ಪರಿಶ್ರಮಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಸದ್ಯ, ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿದ್ದು, ಮಸ್ತ್ ವೈರಲ್ ಕೂಡ ಆಗುತ್ತಿವೆ. ಇನ್ನು, ಕರೊನಾ ಮೂರನೇ ಅಲೆ ಇದ್ದು, ನಟಿ ಹಾಗೂ ರಾಜಕಾರಣಿ ಖುಷ್ಬೂ ಸುಂದರ್ ಕೂಡ ಈ ಹಿಂದೆ ಕರೊನಾಗೆ ತುತ್ತಾಗಿದ್ದರು. ನಂತರ, ಒಂದು ವಾರದ ಬಳಿಕ ನಟಿ ಚೇತರಿಸಿಕೊಂಡಿದ್ದು, ಲಂಡನ್​ಗೆ ತೆರಳಿದ್ದರು.

    20ಕ್ಕಿಳಿದ 50ರ ಖುಷ್ಬೂ! 15 ಕೆಜಿ ಭಾರ ಇಳಿಸಿದ ನಟಿಯ ಫೋಟೋಗಳು ವೈರಲ್... 20ಕ್ಕಿಳಿದ 50ರ ಖುಷ್ಬೂ! 15 ಕೆಜಿ ಭಾರ ಇಳಿಸಿದ ನಟಿಯ ಫೋಟೋಗಳು ವೈರಲ್...

    40 ಕೋಟಿ ರೂ. ಬೆಲೆಯ ಬಟ್ಟೆ ತೊಟ್ಟ ಭೂಲೋಕದ ಊರ್ವಶಿ!

    ಸ್ವಿಜರ್​ಲೆಂಡ್​ನಲ್ಲಿ ಸಮಂತಾ ಧರಿಸಿದ ಜಾಕೆಟ್​ಗಳ ಬೆಲೆ ಎಷ್ಟು ಗೊತ್ತಾ?

    OTT ಬಿಡುಗಡೆ ನಂತರವೂ ಚಿತ್ರಮಂದಿರದಲ್ಲಿ ‘ಬಡವ ರಾಸ್ಕಲ್’ ಗೆ ಹೌಸ್ ಫುಲ್! 6ನೇ ವಾರದಲ್ಲೂ ಡಾಲಿ ಹವಾ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts