More

    87 ಗಂಟೆಯಲ್ಲಿ ಏಳು ಖಂಡದ 208 ದೇಶ ಸುತ್ತಾಡಿದ ಯುವತಿ; ಎಲ್ಲವೂ ನನ್ನ ದೇಶಕ್ಕಾಗಿ ಎಂದ ಸಾಧಕಿ

    ದುಬೈ: ಎಲ್ಲಾದರೂ ಪ್ರವಾಸಕ್ಕೆ ಹೋಗಿ ಬಂದರೆ ಅದೆಷ್ಟು ಸುಸ್ತಾಗಿ ಬಿಡುತ್ತೇವಲ್ಲವೇ? 1000 ಕಿ.ಮೀ ಪ್ರಯಾಣ ಮಾಡಿದರೆ, ಅದರ ಸುಸ್ತನ್ನು ಸುಧಾರಿಸಿಕೊಳ್ಳೋದಕ್ಕೆ ಕನಿಷ್ಟ 2-3 ದಿನ ಬೇಕು. ಆದರೆ ಈ ಯುವತಿ ಹಾಗಲ್ಲ. ಈ ಯುವತಿ ಮೂರು ದಿನದಲ್ಲಿ ಸುತ್ತಿದ್ದು ಬರೋಬ್ಬರಿ ಏಳು ಖಂಡಗಳನ್ನು! 208 ದೇಶಗಳ ನೀರು ಕುಡಿದು ಬಂದ ಈ ಯುವತಿಗೆ ಇದೀಗ ಗಿನ್ನೆಸ್​ ರೆಕಾರ್ಡ್​ ಕೂಡ ಸಿಕ್ಕಿದೆ.

    ಇದನ್ನೂ ಓದಿ: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಚಳ್ಳಕೆರೆಯಲ್ಲಿ ಕರವೇ ವಿರೋಧ

    ಅರಬ್​ ಸಂಯುಕ್ತ ಸಂಸ್ಥಾನ (ಯುಎಇ)ದ ಖಾವ್ಲಾ ಅಲ್​ರೊಮೈತಿ ಈ ಸಾಧನೆ ಮಾಡಿರುವ ಯುವತಿ. ಆಕೆಯ ದೇಶದಲ್ಲಿ ಸುಮಾರು 200 ದೇಶಗಳ ಜನರು ವಲಸಿಗರಾಗಿ ವಾಸಿಸುತ್ತಿದ್ದಾರೆ. ಅವರನ್ನೆಲ್ಲ ನೋಡಿದಾಗ ಆಕೆಗೆ ತಾನೂ ಅವರ ದೇಶಗಳಿಗೆ ಹೋಗಿ ಬರಬೇಕು ಎನ್ನುವ ಆಸೆ ಮೂಡುತ್ತಿತ್ತಂತೆ. ಆ ಆಸೆಗೆ ಮನೆಯವರ ಉತ್ತೇಜನವೂ ಸಿಕ್ಕ ಹಿನ್ನೆಲೆಯಲ್ಲಿ ಈ ವರ್ಷದ ಫೆಬ್ರವರಿಯಲ್ಲಿ ದೊಡ್ಡದೊಂದು ಸಾಧನೆಗೆ ಕೈ ಹಾಕಿದ್ದಾಳೆ.

    3 ದಿನ, 14 ಗಂಟೆ, 46 ನಿಮಿಷ ಮತ್ತು 48 ಸೆಕೆಂಡುಗಳಲ್ಲಿ ಖಾವ್ಲಾ ಎಳು ಖಂಡಗಳನ್ನು ಸುತ್ತಿದ್ದಾಳೆ. ಆಕೆಯ ಪ್ರಯಾಣ ಫೆಬ್ರವರಿ 13ರಂದು ಸಿಡ್ನಿಯಲ್ಲಿ ಅಂತ್ಯವಾಗಿದೆ. ಈವರೆಗೆ ಅತಿ ಕಡಿಮೆ ಸಮಯದಲ್ಲಿ ಏಳು ಖಂಡಗಳನ್ನು ಸುತ್ತಿರುವವರಲ್ಲಿ ಖಾವ್ಲಾ ಮೊದಲನೇ ಸ್ಥಾನಕ್ಕೇರಿದ್ದಾರೆ. ಅದೇ ಕಾರಣಕ್ಕೆ ಗಿನ್ನೆಸ್​ ರೆಕಾರ್ಡ್​ ಕೂಡ ಈಕೆಯದ್ದಾಗಿದೆ.

    ಇದನ್ನೂ ಓದಿ: ಅಮಿತಾಬ್​ ಚಿತ್ರಕ್ಕೆ ಅಜಯ್​ ದೇವ್​ಗನ್ ಆ್ಯಕ್ಷನ್​ ಕಟ್​; ರಾಕುಲ್​ ಪ್ರೀತ್​ ನಾಯಕಿ

    ಈ ರೀತಿ ಸತತ ಪ್ರಯಾಣ ಅಷ್ಟೇನು ಸುಲಭವಾಗಿರಲಿಲ್ಲ ಎನ್ನುತ್ತಾರೆ ಖಾವ್ಲಾ. ಒಂದು ವಿಮಾನವಿಳಿದು ಮತ್ತೊಂದನ್ನು ಹತ್ತಬೇಕಿತ್ತು. ಗಂಟೆಗಳ ಕಾಲ ವಿಮಾನದಲ್ಲೇ ಕೂರಬೇಕಿತ್ತು. ಆದರೆ ಅದೆಲ್ಲವೂ ನನ್ನ ಕುಟುಂಬದಿಂದಲೇ ಸಾಧ್ಯವಾಗಿದೆ. ಅವರು ನೀಡಿದ ಪ್ರೋತ್ಸಾಹದಿಂದಲೇ ನಾನು ಈ ಸಾಧನೆ ಮಾಡಲು ಸಾಧ್ಯವಾಗಿದೆ. ನನಗೆ ಗಿನ್ನೆಸ್​ ರೆಕಾರ್ಡ್​ ಬಂದಿರುವ ಸಂಪೂರ್ಣ ಕ್ರೆಡಿಟ್​ ಅನ್ನು ನನ್ನ ದೇಶಕ್ಕೆ ಅರ್ಪಿಸುತ್ತೇನೆ ಎನ್ನುತ್ತಾರೆ ಅವರು. (ಏಜೆನ್ಸೀಸ್​)

    ನೀವು ದುಡ್ಡಿಟ್ಟಿರುವ ಬ್ಯಾಂಕ್ ಸುರಕ್ಷಿತವೇ?

    ಡಿಜಿಟಲ್ ಇಂಡಿಯಾ ಈಗ ಜೀವನಮಾರ್ಗ: ತಂತ್ರಜ್ಞಾನವೇ ಮೊದಲು ಎಂದರು ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts