More

    ಡಿಜಿಟಲ್ ಇಂಡಿಯಾ ಈಗ ಜೀವನಮಾರ್ಗ: ತಂತ್ರಜ್ಞಾನವೇ ಮೊದಲು ಎಂದರು ಮೋದಿ

    ನವದೆಹಲಿ: ಕರೊನಾ ಹಾವಳಿ ಇಟ್ಟ ಬಳಿಕ ಎಲ್ಲವೂ ಡಿಜಿಟಲ್​ ಕೇಂದ್ರಿತ ಆಗಿಬಿಟ್ಟಿವೆ. ತಂತ್ರಜ್ಞಾನದಿಂದ ದೂರವಿದ್ದವರೂ ತಂತ್ರಜ್ಞಾನಕ್ಕೆ ಮೊರೆ ಹೋಗಿದ್ದಾರೆ. ಐದು ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಆರಂಭಿಸಿದ್ದ ಡಿಜಿಟಲ್ ಇಂಡಿಯಾ ಕಲ್ಪನೆ ಬಹುತೇಕ ಸಾಕಾರವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಈಗ ಮತ್ತೊಮ್ಮೆ ಡಿಜಿಟಲ್ ಇಂಡಿಯಾ ವಿಷಯವನ್ನು ಪ್ರಸ್ತಾಪಿಸಿದ್ದಾರೆ.

    ಅಷ್ಟಕ್ಕೂ ಅವರು ಈ ಡಿಜಿಟಲ್ ಇಂಡಿಯಾ ಕುರಿತು ಮಾತನಾಡಲು ಕಾರಣ ಬೆಂಗಳೂರು. ಅರ್ಥಾತ್ ಬೆಂಗಳೂರು ಟೆಕ್​ ಸಮ್ಮಿಟ್​ 2020ಗೆ ದೆಹಲಿಯಿಂದಲೇ ವಿಡಿಯೋ ಕಾನ್ಫರೆನ್ಸ್​ ಮೂಲಕ ಚಾಲನೆ ನೀಡಿದ ಅವರು ತಂತ್ರಜ್ಞಾನ ಕುರಿತ ಮಾಹಿತಿ, ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

    2015ರಲ್ಲಿ ಕೇಂದ್ರ ಸರ್ಕಾರ ಡಿಜಿಟಲ್ ಇಂಡಿಯಾ ಅಭಿಯಾನ ಕೈಗೆತ್ತಿಕೊಂಡಿತ್ತು. ಅಂದಿನಿಂದ ಯಶಸ್ವಿಯಾಗಿ ಜರುಗಿದ ಅದು ಈಗ ಸಾಮಾನ್ಯ ಸರ್ಕಾರಿ ಯೋಜನೆಗಳಲ್ಲಿ ಒಂದು ಎಂದೆನಿಸಿಕೊಳ್ಳದೆ ಜೀವನದ ಮಾರ್ಗ ಎಂಬಂತಾಗಿದೆ. ತಂತ್ರಜ್ಞಾನವನ್ನು ಬೃಹತ್​ ಪ್ರಮಾಣದಲ್ಲಿ ಅಳವಡಿಸಿಕೊಂಡಿರುವ ಕಾರಣಕ್ಕೆ ಪ್ರಜೆಗಳ ಜೀವನದಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ತಂತ್ರಜ್ಞಾನವೇ ಮೊದಲು ಎಂಬುದು ನಮ್ಮ ಸರ್ಕಾರದ ಧ್ಯೇಯ ಎಂದಿರುವ ಮೋದಿ, ಅದೇ ನಮ್ಮ ಆಡಳಿತದ ಮಾದರಿ ಎಂದೂ ಹೇಳಿದರು. ಬಹುತೇಕ ಎಲ್ಲ ಯೋಜನೆಗಳು ತಂತ್ರಜ್ಞಾನಕ್ಕೆ ಒಳಪಟ್ಟಿರುವುದರಿಂದ ಫಲಾನುಭವಿಗಳಿಗೆ ನೇರವಾಗಿ ಹಾಗೂ ತ್ವರಿತವಾಗಿ ಪ್ರಯೋಜನ ಸಿಗುತ್ತಿದೆ. ತಂತ್ರಜ್ಞಾನದ ಮೂಲಕ ನಾವು ಜನರ ಗೌರವವನ್ನು ಹೆಚ್ಚಿಸಿದ್ದು, ಕೋಟ್ಯಂತರ ರೈತರು ಒಂದು ಕ್ಲಿಕ್​ನಲ್ಲಿ ಆರ್ಥಿಕ ನೆರವು ಪಡೆಯುತ್ತಿದ್ದಾರೆ. ಅದರಲ್ಲೂ ಲಾಕ್​ಡೌನ್​ ಅವಧಿಯಲ್ಲಿ ದೇಶದ ಜನಸಾಮಾನ್ಯರು ತಕ್ಷಣಕ್ಕೆ ಸೂಕ್ತ ನೆರವು ಪಡೆಯುವಲ್ಲಿ ಸಾಧ್ಯವಾಗುವಂತೆ ಮಾಡಿದ್ದು ತಂತ್ರಜ್ಞಾನ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

    ಕೈಗಾರಿಕಾ ಯುಗವನ್ನೂ ದಾಟಿ ನಾವೀಗ ಮಾಹಿತಿ ಯುಗದ ಮಧ್ಯದಲ್ಲಿದ್ದೇವೆ. ಭವಿಷ್ಯವು ಕೈಗಾರಿಕಾ ಯುಗದಲ್ಲಿ ನಿರೀಕ್ಷಿಸಿದ್ದಕ್ಕಿಂತ ವೇಗವಾಗಿ ಮಾಹಿತಿ ಯುಗದಲ್ಲಿ ಬರುತ್ತಿದೆ. ಕೈಗಾರಿಕಾ ಯುಗದಲ್ಲಿ ಯಾರು ಮೊದಲು ಆರಂಭಿಸಿದ್ದರು ಎಂಬುದೇ ಮುಖ್ಯವಾಗಿರುತ್ತಿತ್ತು. ಆದರೆ ಮಾಹಿತಿ ಯುಗದಲ್ಲಿ ಯಾರು ಅತ್ಯುತ್ತಮವಾಗಿ ಮಾಡುತ್ತಿದ್ದಾರೆ ಎಂಬುದೇ ಮುಖ್ಯ. ಯಾರು ಯಾವಾಗ ಬೇಕಿದ್ದರೂ ಒಂದು ಉತ್ಪನ್ನವನ್ನು ಸೃಷ್ಟಿಸಿ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಡಿಜಿಟಲ್ ಇಂಡಿಯಾ ಈಗ ಜೀವನಮಾರ್ಗ: ತಂತ್ರಜ್ಞಾನವೇ ಮೊದಲು ಎಂದರು ಮೋದಿ

    ಬಂಡವಾಳ ಹೂಡಿಕೆಗೆ ಅದರಲ್ಲೂ ಅತ್ಯಾಧುನಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದ ಹೂಡಿಕೆಗಳಿಗೆ ಕರ್ನಾಟಕವೇ ಅತ್ಯುತ್ತಮ ಎಂದೆನಿಸುವಂತೆ ಮಾಡುವಲ್ಲಿ ರಾಜ್ಯ ಸರ್ಕಾರ ಆದ್ಯತೆ ಹಾಗೂ ಆಸಕ್ತಿ ವಹಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಹೇಳಿದರು.
    ‘ನೆಕ್ಸ್ಟ್​ ಈಸ್ ನೌ’ ಎಂಬುದು ಈ ಸಲದ ಸಮಾವೇಶದ ಥೀಮ್​ ಆಗಿದ್ದು, ಇಂದಿನಿಂದ ನ. 21ರ ವರೆಗೆ ಈ ತಂತ್ರಜ್ಞಾನ ಸಮಾವೇಶ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts