More

    ಹೃತಿಕ್ ರೋಷನ್, ದೀಪಿಕಾ ಪಡುಕೋಣೆಗೆ ಬಿಗ್ ಶಾಕ್..ಈ ದೇಶಗಳಲ್ಲಿ ‘ಫೈಟರ್​’ ಸಿನಿಮಾ ಬ್ಯಾನ್​!

    ಮುಂಬೈ: ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ನಟಿಸಿರುವ ಆಕ್ಷನ್ ಚಿತ್ರ ‘ಫೈಟರ್’ ಭಾರಿ ಬಝ್ ಕ್ರಿಯೇಟ್ ಆಗಿದೆ. ದೇಶಭಕ್ತಿಯ ಹಿನ್ನಲೆಯಲ್ಲಿ ತಯಾರಾಗಿರುವ ಈ ಸಿನಿಮಾ ಗಣರಾಜ್ಯೋತ್ಸವದ ಉಡುಗೊರೆಯಾಗಿ ಜನವರಿ 25ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಆದರೆ ಸಿನಿಮಾ ಬಿಡುಗಡೆಗೂ ಮೊದಲೇ ಬಿಗ್ ಶಾಕ್​ಎದುರಾಗಿದೆ.

    ಇದನ್ನೂ ಓದಿ: ಉದ್ಯೋಗಿಗಳ ಕಾರ್ಯಕ್ಷಮತೆ ಮೇಲೆ ಅತಿಯಾದ ನಿಗಾ: ಅಮೆಜಾನ್‌ಗೆ ಭಾರಿ ದಂಡ!

    ಮುಂಗಡ ಬುಕ್ಕಿಂಗ್ ನಲ್ಲಿಯೂ ಫೈಟರ್ ಚಿತ್ರ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಬಿಡುಗಡೆಗೆ ಒಂದು ದಿನ ಬಾಕಿ ಇರುವಾಗ ಫೈಟರ್ ಚಿತ್ರತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್) ಹೊರತುಪಡಿಸಿ ಎಲ್ಲಾ ಗಾಲ್ಫ್ ರಾಷ್ಟ್ರಗಳಲ್ಲಿ ಹೃತಿಕ್ ಫೈಟರ್ ಸಿನಿಮಾವನ್ನು ಬ್ಯಾನ್ ಮಾಡಲಾಗಿದೆ

    ಫೈಟರ್ ಸಿನಿಮಾ ಗಾಲ್ಫ್ ದೇಶಗಳಲ್ಲಿ ಬ್ಯಾನ್ ಮಾಡಲಾಗಿದೆ ಎಂದು ಚಲನಚಿತ್ರ ವ್ಯವಹಾರ ತಜ್ಞ ಮತ್ತು ನಿರ್ಮಾಪಕ ಗಿರೀಶ್ ಜೋಹರ್ ಹೇಳಿದ್ದಾರೆ. ಎಕ್ಸ್ (ಟ್ವಿಟರ್) ನಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುವಾಗ ಈ ಮಾಹಿತಿಯನ್ನು ನೀಡಿದ್ದಾರೆ. ಈ ಚಲನಚಿತ್ರವು ಪಿಜಿ15 ವರ್ಗೀಕರಣದೊಂದಿಗೆ ಯುಎಇ ಥಿಯೇಟರ್​ಗಳಲ್ಲಿ ಬಿಡುಗಡೆಯಾಗಲಿದೆ. ಸಿನಿಮಾದ ಕೆಲವು ದೃಶ್ಯಗಳು ಧರ್ಮದ ಜನರ ಭಾವನೆಗಳಿಗೆ ಧಕ್ಕೆ ತರುತ್ತವೆ ಎಂದು ಆ ದೇಶಗಳಲ್ಲಿ ನಿಷೇಧಿಸಲಾಗಿದೆ ಎಂದು ವರದಿಯಾಗಿದೆ.

    ‘ಫೈಟರ್’ ಚಿತ್ರಕ್ಕೆ ಗಲ್ಫ್ ರಾಷ್ಟ್ರಗಳ ಸೆನ್ಸಾರ್ ಮಂಡಳಿಯಿಂದ ಬಿಡುಗಡೆಗೆ ಒಂದು ದಿನ ಬಾಕಿ ಇದ್ದರೂ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಈ ಚಿತ್ರ ಜನವರಿ 25, 2024 ರಂದು ಭಾರತೀಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಭಾರತೀಯ ವಾಯುಪಡೆ ಕಥೆಯುಳ್ಳ ಆ್ಯಕ್ಷನ್ ಸಿನಿಮಾ ಇದಾಗಿದೆ.

    ಈ ಸಿನಿಮಾದಲ್ಲಿ ಅನಿಲ್ ಕಪೂರ್, ಕರಣ್ ಸಿಂಗ್ ಗ್ರೋವರ್ ಮತ್ತು ಸಂಜೀದಾ ಶೇಖ್ ಮುಂತಾದ ಸ್ಟಾರ್​ಗಳು ಕಾಣಿಸಿಕೊಂಡಿದ್ದಾರೆ. ಬಾಲಿವುಡ್​ ನಲ್ಲಿ ಹಲವು ಸೂಪರ್​ಹಿಟ್ ಚಿತ್ರಗಳನ್ನು ನಿರ್ಮಿಸಿರುವ ಸಿದ್ಧಾರ್ಥ್ ಆನಂದ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

    ‘ಟಾಪ್ ಗನ್’ಗೆ ಹೋಲಿಕೆ ಯಾಕೆ?: ಫೈಟರ್ ಅನ್ನು ಹಾಲಿವುಡ್ ಸಿನಿಮಾ ‘ಟಾಪ್ ಗನ್’ಗೆ ಹೋಲಿಸಿದ್ದಕ್ಕೆ ನಿರ್ದೇಶಕ ಸಿದ್ಧಾರ್ಥ್ ಅಸಹನೆ ವ್ಯಕ್ತಪಡಿಸಿದ್ದಾರೆ. ಏರೋಪ್ಲೇನ್ ಸೀನ್ ಗಳಿರುವ ಸಿನಿಮಾವನ್ನು ಯಾರು ಮಾಡಿದರೂ ಅದನ್ನು ‘ಟಾಪ್ ಗನ್’ಗೆ ಹೋಲಿಸುತ್ತಾರೆ. ಏಕೆಂದರೆ ಹಾಗೆ ಹೋಲಿಕೆ ಮಾಡುವವರಿಗೆ ಬೇರೆ ಉಲ್ಲೇಖ ಸಿಗುವುದಿಲ್ಲ. ಚಲನಚಿತ್ರ ತಯಾರಕರಲ್ಲಿ ಸೃಜನಶೀಲತೆಯ ಕೊರತೆಯಿದೆ ಎಂದು ಭಾವಿಸಲಾಗಿದೆ. ಅಂಥವರೆಲ್ಲ ನಮ್ಮ ಚಿತ್ರಗಳನ್ನು ಗೌರವಿಸಬೇಕು. ಎಲ್ಲವನ್ನೂ ನಾವು ಇತರರಿಂದ ನಕಲು ಮಾಡುತ್ತಿದ್ದೇವೆ ಎಂಬ ಭಾವನೆಯಿಂದ ಹೊರಬರಬೇಕು. ವಿಷಯದ ವಿಷಯದಲ್ಲಿ ಪಾಶ್ಚಿಮಾತ್ಯರು ನಮ್ಮಿಂದ ಸ್ಫೂರ್ತಿ ಪಡೆದ ಸಂದರ್ಭಗಳಿವೆ” ಎಂದು ಅವರು ಹೇಳಿದರು.

    ಉಕ್ರೇನ್‌ನ 65 ಯುದ್ಧ ಕೈದಿಗಳಿದ್ದ ರಷ್ಯಾ ವಿಮಾನ ಪತನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts