More

    ‘ಕೆಜಿಎಫ್ 2’ ಟ್ರೈಲರ್ ರಿಲೀಸ್: ಟಿವಿ ರೈಟ್ಸ್ ಕೋಟ್ಯಂತರ ರೂಪಾಯಿಗೆ ಸೇಲ್

    ಕೆಜಿಎಫ್ 2′ ಸಿನಿಮಾದ ಬಹುನಿರೀಕ್ಷಿತ ಟ್ರೈಲರ್ ಕೊನೆಗೂ ಮಾ. 27 ರಂದು ಸಂಜೆ ರಿಲೀಸ್ ಆಗಿದೆ. ಮೊದಲೆ, ‘ಕೆಜಿಎಫ್ಸಿನಿಮಾ ನೋಡಿದ ಎಲ್ಲರೂ ಕೆಜಿಎಫ್ 2′ ನೋಡಲು ತುದಿಗಾಲಲ್ಲಿ ನಿಂತಿದ್ದರು. ಇದೀಗ, ನಿನ್ನೆ ಬಿಡುಗಡೆಯಾಗಿರುವ ಚಿತ್ರದ ಟ್ರೈಲರ್ ಸಿನಿಪ್ರಿಯರಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಹೌದು, ಚಿತ್ರದ ಟ್ರೈಲರ್ ನೋಡಿ ಅಭಿಮಾನಿಗಳು ಫುಲ್ ಖುಷಿ ಆಗಿದ್ದು, ಅದು ರಿಲೀಸ್ ಆದ ಕೆಲವೇ ಗಂಟೆಯಲ್ಲಿ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಕೋಟಿ ಕೋಟಿ ವೀಕ್ಷಣೆಗಳನ್ನು ಪಡೆಯುತ್ತಿದೆ. ಐದು ಭಾಷೆಗಳಲ್ಲಿ ಕೆಜಿಎಫ್ 2′ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಎಲ್ಲಾ ಭಾಷೆಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ.
    ಇನ್ನು, ಈ ಸಿನಿಮಾದ ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ ಬೇಡಿಕೆ ಹೆಚ್ಚಾಗುತ್ತಿದ್ದು, ಟಿವಿ ರೈಟ್ಸ್ ಪಡೆಯಲು ಹಲವು ಚಾನೆಲ್​ಗಳು ಮುಂದೆ ಬಂದವು ಎಂಬ ಮಾಹಿತಿ ದೊರಕಿದೆ. ಇತ್ತೀಚಿನ ದಿನಗಳಲ್ಲಿ, ಟಿವಿ ರೈಟ್ಸ್, ಒಟಿಟಿ ರೈಟ್ಸ್ ಅಂತ ರಿಲೀಸ್‌ಗೂ ಮುನ್ನವೇ ಸಿನಿಮಾಗಳಿಗೆ ಹಲವು ರೀತಿಗಳಲ್ಲಿ ವರಮಾನ ಬರಲು ಆರಂಭವಾಗುವ ವಿಷಯ ಎಲ್ಲರಿಗೂ ತಿಳಿದೆ ಇದೆ. ಇನ್ನು ಬಹುನಿರೀಕ್ಷಿತ ಚಿತ್ರಗಳಾದರೆ ಅವು ತುಂಬಾ ದೊಡ್ಡ ಮೊತ್ತಕ್ಕೆ ಸೇಲ್ ಆಗುವುದು ಸಹಜ. ಇದೀಗ, ‘ಕೆಜಿಎಫ್ 2′ ಗೂ ಟ್ರೈಲರ್ ರಿಲೀಸ್ ಆದ ಬೆನ್ನಲ್ಲೆ ಬೇಡಿಕೆ ಹೆಚ್ಚಾಗಿದ್ದು, ಈ ಸಿನಿಮಾದ ತೆಲುಗು ಟಿವಿ ರೈಟ್ಸ್ ಬರೋಬ್ಬರಿ 70 ಕೋಟಿ ರೂಪಾಯಿಗೆ ಸೇಲ್ ಆಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
    ಅಂದಹಾಗೆ, ತೆಲುಗಿನ ಸೂಪರ್ ಸ್ಟಾರ್‌ಗಳ ಸಿನಿಮಾದ ಟಿವಿ ರೈಟ್ಸ್ ಕೂಡಾ ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆಗೊದು ಅಪರೂಪ ಎಂದು ಹೇಳಲಾಗುತ್ತಿದೆ. ಅದರಲ್ಲೂ, ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾದ ತೆಲುಗೂ ಟಿವಿ ರೈಟ್ಸ್ ಇಷ್ಟರ ಮಟ್ಟಿಗೆ ಸೇಲ್ ಆಗಿರೋದು ನಿಜಕ್ಕೂ ಗ್ರೇಟ್ ಎನ್ನಲಾಗಿದೆ. ಮತ್ತೊಂದು ಕಡೆ, ತಮಿಳಿನಲ್ಲಿ ಕೆಜಿಎಫ್ 2′ ಚಿತ್ರದ ಟಿವಿ ರೈಟ್ಸ್ 40 ಕೋಟಿ ರೂಪಾಯಿಗೆ ಸೇಲ್ ಆಗಿದೆಯಂತೆ. ಕನ್ನಡದಲ್ಲಂತೂ ಈಗಾಗಲೇ ಸಿನಿಮಾ 100 ಕೋಟಿ ರೂಪಾಯಿ ಬ್ಯಸಿನೆಸ್ ಮಾಡಿದೆ ಎಂಬುದು ತಿಳಿದೆ ಇದೆ. ಹೀಗೆ ಕೆಜಿಎಫ್ 2′ ಸಿನಿಮಾ ರಿಲೀಸ್‌ಗೂ ಮುನ್ನವೇ ಎಲ್ಲಾ ಭಾಷೆಗಳಲ್ಲೂ ಸೇರಿ ಸುಮಾರು 250 ಕೋಟಿ ರೂಪಾಯಿ ಬ್ಯುಸಿನೆಸ್ ಮಾಡಿದೆ ಎನ್ನಬಹುದು.

    ನನ್ನ ಪತಿಯ ಸಿನಿಮಾ ಅಂತ ಹೊಗಳ್ತಿಲ್ಲ… ರಿಲೀಸ್​ಗೂ ಮುನ್ನ ‘ಕೆಜಿಎಫ್ 2’ ನೋಡಿದ ರಾಧಿಕಾ ಹೇಳಿದ್ದೇನು?

    RRR ಪ್ರಭಾವ: ಸ್ಕ್ರೀನ್​ಗಳು ಸಿಗದೆ ಕನ್ನಡ ಸಿನಿಮಾಗಳ ರಿಲೀಸ್ ಡೇಟ್​ ಮುಂದೂಡಿಕೆ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts