More

    ನೆಗೆಟಿವ್‌ ವರದಿ ಕಡ್ಡಾಯ ಆದೇಶ ಹಿಂಪಡೆಯಲು ಒತ್ತಾಯಿಸಿ ಕೇರಳಿಗರಿಂದ ಪ್ರತಿಭಟನೆ

    ಮಂಗಳೂರು: ತಲಪಾಡಿ ಗಡಿ ಬಂದ್ ವಿರೋಧಿಸಿ ಕೇರಳಿಗರಿಂದ ಗಡಿಭಾಗದಲ್ಲಿ ಮಂಗಳವಾರ ಪ್ರತಿಭಟನೆ ಶುರುವಾಗಿದೆ.
    ಸೋಮವಾರದಿಂದ ಕೇರಳದಿಂದ ಕರ್ನಾಟಕ ಪ್ರವೇಶಿಸುವುದಕ್ಕೆ ನೆಗೆಟಿವ್‌ ರಿಪೋರ್ಟ್‌ ಕಡ್ಡಾಯಗೊಳಿಸಲಾಗಿದೆ. ಇದನ್ನು ವಿರೋಧಿಸಿ
    ಕೇರಳ ಭಾಗದ ರಸ್ತೆ‌ ಬಂದ್ ಮಾಡಿ ಕೇರಳಿಗರು ಪ್ರತಿಭಟಿಸುತ್ತಿದ್ದಾರೆ. ಮಂಗಳೂರಿನಿಂದ ಕೇರಳಕ್ಕೆ ತೆರಳುವ ರಸ್ತೆಗೆ ಅಡ್ಡಲಾಗಿ ನಿಂತು ಪ್ರತಿಭಟನೆ ಶುರುಮಾಡಿದ್ದಾರೆ. ಈ ನಡುವೆ ರಾಜ್ಯ ಎಡಿಜಿಪಿ ಪ್ರತಾಪ್ ರೆಡ್ಡಿ ಭೇಟಿ ನೀಡುವಾಗಲೂ ಕೇರಳದ ವಿವಿಧ ಪಕ್ಷಗಳ ಮುಖಂಡರು ಪ್ರತಿಭಟನಾಕಾರರು ಸೇರಿ ಪ್ರತಿಭಟಿಸಿದರು.
    ಈ ವೇಳೆ ಮಾತನಾಡಿದ ಪ್ರತಾಪ್‌ ರೆಡ್ಡಿ ರಾಜ್ಯ ಸರ್ಕಾರದ ಸೂಚನೆಯಂತೆ ನೆಗೆಟಿವ್ ವರದಿ ಇಲ್ಲದವರಿಗೆ ಕರ್ನಾಟಕ ಪ್ರವೇಶ ನೀಡುತ್ತಿಲ್ಲ, ಕೇವಲ ತುರ್ತು ಭೇಟಿಗೆ ಮಾತ್ರ ಅವಕಾಶ ನೀಡಲಾಗಿದೆ, ಕೇರಳ ಭಾಗದ ವಿದ್ಯಾರ್ಥಿಗಳು ಪರೀಕ್ಷಾ ಹಾಲ್ ಟಿಕೆಟ್ ತೋರಿಸಿದರೆ ಬಿಡಲಾಗುತ್ತದೆ, ಕಾಸರಗೋಡು ಭಾಗದಲ್ಲಿ ಕರೊನಾ ಸೋಂಕು ಅತೀ ಹೆಚ್ಚು ಇರುವುದರಿಂದ ಬಿಗಿ ತಪಾಸಣೆ ಮಾಡುತ್ತಿದ್ದೇವೆ ಎಂದು ಸ್ಪಷ್ಟಗೊಳಿಸಿದರು.
    ಕೇರಳದಿಂದ ರೈಲು ಮಾರ್ಗವಾಗಿ ಬಂದವರನ್ನೂ ಪರೀಕ್ಷೆ ಮಾಡುತ್ತಿದ್ದೇವೆ, ಮಂಗಳೂರಿನ ಟೌನ್ ಹಾಲ್ ನಲ್ಲಿ ಪರೀಕ್ಷಾ ಕೇಂದ್ರ ತೆರೆದಿದ್ದೇವೆ, ಕಾಸರಗೋಡು ಡಿಸಿ,ಎಸ್ಪಿ ಜೊತೆ ಜಿಲ್ಲೆಯ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ, ಉಭಯ ಜಿಲ್ಲೆಗಳ ನಡುವೆ ಯಾವುದೇ ಗೊಂದಲಗಳಿಲ್ಲ ಎಂದೂ ತಿಳಿಸಿದರು.

    ನೆಗೆಟಿವ್‌ ವರದಿ ಕಡ್ಡಾಯ ಆದೇಶ ಹಿಂಪಡೆಯಲು ಒತ್ತಾಯಿಸಿ ಕೇರಳಿಗರಿಂದ ಪ್ರತಿಭಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts