ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ; ಶೇ.98.8 ಉತ್ತೀರ್ಣ, ಶೇ.95 ಫಲಿತಾಂಶ ಪಡೆದರೂ ವಯನಾಡ್​ ಕನಿಷ್ಠ ಸಾಧನೆ

SSLC
Published on

ತಿರುವನಂತಪುರಂ: ಕೇರಳದಲ್ಲಿ ನಡೆಸಲಾಗಿದ್ದ 2020ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಶೇ.98.8 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಳೆದ ಬಾರಿಗೆ ಹೋಲಿಸಿದಲ್ಲಿ ಉತ್ತಮ ಸಾಧನೆ ತೋರಿದೆ. ಕಳೆದ ವರ್ಷದ ಉತ್ತೀರ್ಣ ಪ್ರಮಾಣ ಶೇ.91 ಆಗಿತ್ತು.

ಕುಟ್ಟಿನಾಡ್​ ಜಿಲ್ಲೆಯಲ್ಲಿ ಎಲ್ಲ ವಿದ್ಯಾರ್ಥಿಗಳು ಪಾಸಾಗಿದ್ದು, ಶೇ.100 ಫಲಿತಾಂಶ ಪಡೆದಿದೆ. ಪಟ್ಟನಂತಿಟ್ಟ ಜಿಲ್ಲೆಯಲ್ಲಿ 99.7 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಇನ್ನು ಮಲಪ್ಪುರಂ ಜಿಲ್ಲೆಯಲ್ಲಿ ಅತ್ಯುನ್ನತ ಶ್ರೇಣಿ (ಎ+) ಪಡೆದವರ ಸಂಖ್ಯೆ 2,736 ಆಗಿದ್ದು, ಅತಿ ಹೆಚ್ಚು ಆಗಿದೆ.

ವಯನಾಡ್​ ಜಿಲ್ಲೆಯಲ್ಲಿ ಶೇ.95.04 ಸಾಧನೆ ಮಾಡಿದ್ದರೂ ಅತಿ ಕನಿಷ್ಠ ಎನಿಸಿದೆ. ಈ ವರ್ಷ ಒಟ್ಟಾರೆ 4.20 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು ಎಂದು ಕೇರಳ ಪರೀಕ್ಷಾ ಭವನ ಮಾಹಿತಿ ನೀಡಿದೆ.

ಇನ್ನೊಂದು ಮಹತ್ವದ ಸಂಗತಿ ಎಂದರೆ 1,837 ಸರ್ಕಾರಿ ಶಾಲೆಗಳು ಶೇ.100 ಫಲಿತಾಂಶ ಪಡೆದಿವೆ. ಜತೆಗೆ, ಈ ಬಾರಿ ಪ್ರಮಾಣಪತ್ರದಲ್ಲಿ ಕ್ಯೂಆರ್​ ಕೋಡ್​ ಮುದ್ರಿಸಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.

ಈಗಾಗಲೇ ವೆಬ್​ಸೈಟ್​ನಲ್ಲಿ ಫಲಿತಾಂಶ ಪ್ರಕಟಿಸಲಾಗಿದೆ ಹಾಗೂ ಶಾಲಾವಾರು ಫಲಿತಾಂಶದ ವಿವರವನ್ನು ಬಿಡುಗಡೆ ನೀಡಲಾಗಿದೆ ಎಂದು ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net