More

    ಶಬರಿಮಲೆ ದೇವಸ್ಥಾನದ ವಿಚಾರ: ಹೈಕೋರ್ಟ್​ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು ಕೇರಳ ಸರ್ಕಾರ

    ನವದೆಹಲಿ: ಕರೊನಾ ಸೋಂಕಿನ ಕಾರಣಕ್ಕೆ ಕೇರಳದ ಇತಿಹಾಸ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಸದ್ಯ ವಾರ್ಷಿಕ ಉತ್ಸವ ಚಾಲ್ತಿಯಲ್ಲಿದೆ. ಭಗವಂತನ ದರ್ಶನ ಮಾಡುವುದಕ್ಕೆ ನಿತ್ಯ 5,000 ಭಕ್ತರಿಗಷ್ಟೇ ಅವಕಾಶ ನೀಡಬೇಕು ಎಂಬ ಕೇರಳ ಹೈಕೋರ್ಟ್ ಡಿಸೆಂಬರ್ 18ರಂದು ನೀಡಿದ ಆದೇಶ ಪ್ರಶ್ನಿಸಿ ಕೇರಳ ಸರ್ಕಾರ ಸುಪ್ರೀಂ ಕೋರ್ಟ್​​ ಮೆಟ್ಟಿಲೇರಿದೆ.

    ರಾಜ್ಯದ ಮುಖ್ಯಕಾರ್ಯದರ್ಶಿ ಅವರನ್ನು ಒಳಗೊಂಡ ಸಮಿತಿ ಈಗಾಗಲೇ ವಾರದ ದಿನಗಳಲ್ಲಿ ನಿತ್ಯ 2,000 ಭಕ್ತರು ಮತ್ತು ವಾರಾಂತ್ಯದ ದಿನಗಳಲ್ಲಿ 3,000 ಭಕ್ತರಿಗೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಅವಕಾಶ ನೀಡಬೇಕು ಎಂದು ಶಿಫಾರಸು ಮಾಡಿದೆ. ಇದು ಕರೊನಾ ನಿಯಮಗಳನ್ನು ಪಾಲಿಸಿಕೊಂಡು ತೆಗೆದುಕೊಂಡ ನಿರ್ಧಾರವಾಗಿದೆ. ಇದಕ್ಕೂ ಹೆಚ್ಚಿನ ಸಂಖ್ಯೆಯ ಭಕ್ತರನ್ನು ನಿರ್ವಹಿಸುವುದು ಕಷ್ಟ ಸಾಧ್ಯ. ಹಾಗೊಂದು ವೇಳೆ ಮಾಡಿದರೆ ಅದರಿಂದ ಪೊಲೀಸ್ ಹಾಗೂ ಆರೋಗ್ಯ ಸಿಬ್ಬಂದಿ ಮೇಲೆ ಅನಾವಶ್ಯಕ ಒತ್ತಡ ಹೆಚ್ಚಿಸಿದಂತಾಗುತ್ತದೆ ಎಂಬುದು ಕೇರಳ ಸರ್ಕಾರದ ವಾದ.

    ಇದನ್ನೂ ಓದಿ: ‘ನಿಮ್ಮ ಹೇಳಿಕೆಗಳಲ್ಲಿ ಕಾಂಗ್ರೆಸ್​ ಮುಗಿಸುವ ಹುನ್ನಾರವಿದೆ, ಇನ್ನಾದ್ರೂ ದುರಹಂಕಾರದ ಮಾತನ್ನು ನಿಲ್ಲಿಸಿ’

    ಡಿಸೆಂಬರ್ 14 ರಂದು ಈ ಸಮಿತಿ ಸಭೆ ಸೇರಿ ನಿಯಮ ಪರಿಷ್ಕರಿಸಿ ವಾರಾಂತ್ಯ ಹೆಚ್ಚಿನ ಸಂಖ್ಯೆಯ ಭಕ್ತರಿಗೆ ಅವಕಾಶ ನೀಡಿದೆ. ಈಗ ಮತ್ತೆ ಇಂಗ್ಲೆಂಡ್​ನಲ್ಲಿ ರೂಪಾಂತರಿತ ಕರೊನಾ ವೈರಸ್ ಸೋಂಕು ಹರಡುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದು, ಕಳವಳ ಸೃಷ್ಟಿಸಿದೆ. ಈ ಎಲ್ಲ ಹಿನ್ನೆಲೆಯನ್ನೂ ಗಮನಿಸಿ ಕೆಲಸ ಮಾಡಬೇಕಾದ ಅವಶ್ಯಕತೆ ಇದೆ ಎಂದು ಕೇರಳ ಸರ್ಕಾರ ಪ್ರತಿಪಾದಿಸಿದೆ. (ಏಜೆನ್ಸೀಸ್)

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ವಿಶ್ವದ ಏಕಾಂಗಿ ಆನೆಗೆ ಸಿಕ್ಕಿದ್ರು ಮೂವರು ಗೆಳತಿಯರು: ಕಾವನ್​ ವರ್ತನೆ ಕಂಡು ಹುಬ್ಬೇರಿಸಿದ ಪರಿಪಾಲಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts