More

    ಹೊಸ ಕಾರು ಖರೀದಿಸಲು ಹಣ ಬಿಡುಗಡೆ ಮಾಡಿ: ರಾಜ್ಯಪಾಲರ ಪತ್ರಕ್ಕೆ ಕೇರಳ ಸರ್ಕಾರದ ಪ್ರತಿಕ್ರಿಯೆ ಹೀಗಿದೆ…

    ತಿರುವನಂತಪುರಂ: ಹೊಸ ಮರ್ಸಿಡಿಸ್ ಬೆಂಜ್​ ಕಾರು ಖರೀದಿಸುವ ರಾಜ್ಯಪಾಲರ ಪಸ್ತಾವನೆಯನ್ನು ಕೇರಳ ಸರ್ಕಾರ ಪರಿಗಣಿಸುತ್ತಿದೆ. ಕೆಲ ದಿನಗಳ ಹಿಂದಷ್ಟೇ ಕಾರು ಖರೀದಿಗೆ 85 ಲಕ್ಷ ರೂಪಾಯಿ ಹಣ ಬಿಡುಗಡೆ ಮಾಡುವಂತೆ ರಾಜ್ಯಪಾಲ ಆರೀಫ್​ ಮೊಹಮ್ಮದ್​ ಖಾನ್​ ಸರ್ಕಾರಕ್ಕೆ ಪತ್ರ ಬರೆದಿದ್ದರು.

    ಪ್ರಸ್ತುತ ಇರುವ ಕಾರು ಈಗಾಗಲೇ 1.5 ಲಕ್ಷ ಕಿ.ಮೀ ಕವರ್​ ಮಾಡಿದೆ. ವಿವಿಐಪಿ ಪ್ರೊಟೋಕಾಲ್​ ಪ್ರಕಾರ 1 ಲಕ್ಷ ಕಿ.ಮೀ ಮೀರಿದ ಬಳಿಕ ವಾಹನವನ್ನು ಬದಲಾಯಿಸಬೇಕು. ಈ ಅಂಶವನ್ನು ಉಲ್ಲೇಖಿಸಿ, ಹೊಸ ವಾಹನ ಬೇಕೆಂದು ರಾಜ್ಯಪಾಲರು ಸರ್ಕಾರಕ್ಕೆ ಪತ್ರವನ್ನು ಬರೆದು ಕಳುಹಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇರಳ ಸರ್ಕಾರ ರಾಜ್ಯಪಾಲರ ಪ್ರಸ್ತಾವನೆಯನ್ನು ಪರಿಗಣಿಸುತ್ತಿರುವುದಾಗಿ ಹೇಳಿದೆ.

    ಸದ್ಯ ರಾಜ್ಯಪಾಲರು ಮತ್ತು ಕೇರಳ ಸರ್ಕಾರದ ನಡುವೆ ಒಳ್ಳೆಯ ಸಂಬಂಧವಿಲ್ಲ. ಲೋಕಾಯುಕ್ತ ಸುಗ್ರೀವಾಜ್ಞೆಗೆ ಅಂಕಿತ ಹಾಕುವ ವಿಚಾರದಲ್ಲಿ ರಾಜ್ಯಪಾಲರು ಸಾರ್ವಜನಿಕವಾಗಿ ಸರ್ಕಾರದ ವಿರುದ್ಧ ತಮ್ಮ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದರು. ಸಚಿವರ ವೈಯಕ್ತಿಕ ಸಿಬ್ಬಂದಿ ನೇಮಿಸುವ ವಿಚಾರದಲ್ಲೂ ರಾಜ್ಯಪಾಲರು ಸರ್ಕಾರವನ್ನು ಟೀಕೆ ಮಾಡಿದ್ದರು.

    ರಾಜ್ಯಪಾಲರ ಕಚೇರಿಯಲ್ಲಿ ಎರಡು ನೇಮಕಾತಿಗೆ ಅನುಮೋದನೆ ನೀಡಿ, ರಾಜ್ಯಪಾಲರ ಆಪ್ತ ಸಿಬ್ಬಂದಿ ನೇಮಕದ ವಿರುದ್ಧ ಪತ್ರ ಬರೆದಿದ್ದ ಸಾರ್ವಜನಿಕ ಆಡಳಿತ ಕಾರ್ಯದರ್ಶಿ ಕೆ.ಆರ್.ಜ್ಯೋತಿಲಾಲ್ ಅವರನ್ನು ತೆಗೆದುಹಾಕುವ ಮೂಲಕ ರಾಜ್ಯಪಾಲರನ್ನು ಸರ್ಕಾರ ಸಮಾಧಾನಪಡಿಸಿದೆ. (ಏಜೆನ್ಸೀಸ್​)

    ಬೆಳಗ್ಗೆಯಿಂದ ಸಂಜೆವರೆಗೆ ಸಹಾಯಕ ಪ್ರಾಧ್ಯಾಪಕ, ಸಂಜೆ ನಂತರ ಕ್ಷೌರಿಕ! ಇವರ ಲೈಫ್​ ಜರ್ನಿಯೇ ಸ್ಫೂರ್ತಿದಾಯಕ

    ಲೈಂಗಿಕ ದೌರ್ಜನ್ಯ ಎಸಗಿದರೆಂದು ಸ್ವಾಮೀಜಿಯ ಮರ್ಮಾಂಗ ಕತ್ತರಿಸಿದಳು: ಆದರೆ ನಡೆದದ್ದೇ ಬೇರೆ…!

    VIDEO| ಕ್ಯಾಚ್​ ಬಿಟ್ಟಿದ್ದಕ್ಕೆ ಸಹ ಆಟಗಾರನ ಕೆನ್ನೆಗೆ ಬಾರಿಸಿದ ಪಾಕಿಸ್ತಾನ ವೇಗಿ ಹ್ಯಾರೀಸ್​ ರೌಫ್!​

    ಶಿವಮೊಗ್ಗದ ಹರ್ಷನ ಕೊಲೆ ಪ್ರಕರಣದ ಆರೋಪಿ ಖಾಸಿಫ್​ಗೆ ಇದೆ ಕ್ರಿಮಿನಲ್ ಇತಿಹಾಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts