ವಿಶ್ವದ ಏಕಾಂಗಿ ಆನೆಗೆ ಸಿಕ್ಕಿದ್ರು ಮೂವರು ಗೆಳತಿಯರು: ಕಾವನ್​ ವರ್ತನೆ ಕಂಡು ಹುಬ್ಬೇರಿಸಿದ ಪರಿಪಾಲಕ!

ಫೆನೋಮ್ ಪೆನ್: ವಿಶ್ವದ ಏಕಾಂಗಿ ಆನೆಯೆಂದೇ ಪ್ರಸಿದ್ಧಿಯಾಗಿರುವ “ಕಾವನ್​” ಆನೆಗೆ ಇದೀಗ ಮೂವರು ಗೆಳತಿಯರು ಸಿಕ್ಕಿದ್ದಾರೆ. ಕುತೂಹಲಕಾರಿ ವಿಚಾರವೆಂದರೆ ಮೂರು ಹೆಣ್ಣಾನೆಗಳಲ್ಲಿ ಒಂದರ ಮೇಲೆ ಕಾವನ್​ ಹೆಚ್ಚು ಆಸಕ್ತಿ ತೋರುತ್ತಿದ್ದಾನೆಂದು ಆತನ ಪರಿಪಾಲಕ ತಿಳಿಸಿದ್ದು, ಕಾವನ್​ಗೆ ಪ್ರೇಮಾಂಕುರವಾಗಿದೆ ಎಂದು ಅರ್ಥೈಸಲಾಗಿದೆ. ಅಂದಹಾಗೆ 35 ವರ್ಷದ ಏಷ್ಯಾ ಆನೆ ಕಾವನ್ ಕಳೆದ ತಿಂಗಳವರೆಗೂ ಪಾಕಿಸ್ತಾನದ ಇಸ್ಲಮಾಬಾದ್​ ಮೃಗಾಲಯದಲ್ಲಿ ಒಬ್ಬಂಟಿಯಾಗಿ ಶೋಕಿಸುತ್ತಿದ್ದ. ಕಾವನ್​ ಸಂಗಾತಿ ಆನೆ 2012ರಲ್ಲಿ ಇಸ್ಲಮಾಬಾದ್​ನ ಮಾರ್ಘಜರ್​ ಮೃಗಾಲಯದಲ್ಲಿ ಕಾಯಿಲೆಯಿಂದ ಮೃತಪಟ್ಟಾಗಿನಿಂದ ಕಾವನ್​ ಒಂಟಿಯಾಗಿ ದಿನ ದೂಡುತ್ತಿತ್ತು. … Continue reading ವಿಶ್ವದ ಏಕಾಂಗಿ ಆನೆಗೆ ಸಿಕ್ಕಿದ್ರು ಮೂವರು ಗೆಳತಿಯರು: ಕಾವನ್​ ವರ್ತನೆ ಕಂಡು ಹುಬ್ಬೇರಿಸಿದ ಪರಿಪಾಲಕ!