More

    ಬೆದರಿಕೆ, ನಿಂದನೆ, ಅವಮಾನಕರ ಪೋಸ್ಟ್​ ಮಾಡಿದರೆ 5 ವರ್ಷ ಜೈಲು, 10 ಸಾವಿರ ರೂ ದಂಡ!

    ತಿರುವನಂತಪುರಂ: ಫೇಸ್​ಬುಕ್​ನಲ್ಲಿ ಮನಸೋಇಚ್ಛೆ ಪೋಸ್ಟ್​ ಮಾಡುವ ಅಭ್ಯಾಸ ಇದ್ದರೆ ಈ ಸುದ್ದಿಯನ್ನೊಮ್ಮೆ ಓದಿ. ಬೇಕಾಬಿಟ್ಟಿ ಪೋಸ್ಟ್​ ಮಾಡುವ ಮೊದಲು ಹತ್ತು ಬಾರಿ ಯೋಚಿಸಿ ಪೋಸ್ಟ್​ ಮಾಡಿ. ಏಕೆಂದರೆ ಈ ರೀತಿಯ ಪೋಸ್ಟ್​ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಸರ್ಕಾರ ಸಿದ್ಧವಾಗಿದೆ.

    ಇದನ್ನೂ ಓದಿ: VIDEO| ನೀರು ಕುಡಿದ ಕಾಡಾನೆಗಳು ರಾತ್ರಿಯೀಡಿ ಚೀರಾಡುತ್ತಲೇ ಇದ್ದವು! ಸ್ಥಳಕ್ಕೆ ಹೋದ ಸಿಬ್ಬಂದಿಗೆ ಶಾಕ್​

    ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ, ನಿಂದನೆ, ಅವಮಾನಕರ ಮತ್ತು ಮಾನಹಾನಿಕರ ಪೋಸ್ಟ್​ಗಳನ್ನು ಹಾಕುವವರ ವಿರುದ್ಧ ಕೇರಳ ಸರ್ಕಾರ ಹೊಸ ಕಾನೂನೊಂದನ್ನು ಮಾಡಿದೆ. ಈ ಕಾನೂನಿನ ಪ್ರಕಾರ ಈ ರೀತಿಯ ಪೋಸ್ಟ್ ಮಾಡುವವರಿಗೆ ಐದು ವರ್ಷಗಳ ಜೈಲು ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಬಹುದಾಗಿದೆ.

    ಇದನ್ನೂ ಓದಿ: ವಿಷವಿಕ್ಕಿ ಹುಲಿ ಕೊಂದ ದುರುಳರು? ಹೆತ್ತಮ್ಮನನ್ನು ಕಳೆದುಕೊಂಡ ಮರಿಗಳ ರೋದನ

    ಸರ್ಕಾರದ ಈ ಕಾನೂನಿಗೆ ವಿರೋಧ ಪಕ್ಷಗಳು ಭಾರಿ ವಿರೋಧ ವ್ಯಕ್ತಪಡಿಸಿವೆ. ಇದು ವಾಕ್​ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿರುವ ರೀತಿ ಎಂದು ಬಿಜೆಪಿ ಮತ್ತು ಕಾಂಗ್ರೆಸ್​ ದೂರಿವೆ. ಕಾಂಗ್ರೆಸ್​ ನಾಯಕ ಪಿ.ಚಿದಂಬರಂ ಅವರು ಸರ್ಕಾರದ ಈ ನಿರ್ಧಾರದಿಂದ ಆಘಾತಕ್ಕೊಳಗಾಗಿರುವುದಾಗಿ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

    ಸತ್ರೂ ನಾನು ಆ ಪಕ್ಷ ಸೇರಲ್ಲ ಎಂದು ಕೆಂಡಾಮಂಡಲನಾದ ಸಂಸದ…

    ನಗ್ರೋಟಾ ಎನ್​ಕೌಂಟರ್: ಉಗ್ರರ ಬಳಿ ಇತ್ತು ಪಾಕ್​ ಫೋನ್​, ಸಿಮ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts