More

    ಅಸಾಧ್ಯ ಎಂದು ಸರ್ಕಾರವೇ ಕೈಚೆಲ್ಲಿದಾಗ, ಈ ಅಪ್ಪ-ಮಗ ಮಾಡಿ ತೋರಿಸಿದರೊಂದು ಅದ್ಭುತ!

    ಕೋಳಿಕ್ಕೋಡ್ (ಕೇರಳ)​: ಲಾಕ್​ಡೌನ್​ ಸಮಯದಲ್ಲಿ ಹೇಗೆ ಟೈಂಪಾಸ್​ ಮಾಡಬೇಕೆಂದು ತಿಳಿಯದೇ ಗೋಳೋ ಎನ್ನುವವರೇ ಹೆಚ್ಚು. ಕೆಲವರು ಸಿಕ್ಕದ್ದೇ ಛಾನ್ಸ್​ ಎಂದುಕೊಂಡು ಸಮಯವನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಅಪರೂಪದಲ್ಲಿ ಅಪರೂಪ ಎನ್ನುವಂಥ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

    ಅಂಥ ಅಪರೂಪದ ಕೆಲಸ ಮಾಡಿದ್ದಾರೆ ಕೇರಳದ ಕೋಳಿಕ್ಕೋಡ್​ನ ಅಪ್ಪ-ಮಗ. ಇವರು ಮಾಡಿರುವಂಥ ಕೆಲಸ ಅಂತಿಂಥದ್ದಲ್ಲ, ಇಡೀ ದೇಶವೇ ಭೇಷ್​ ಎಂದಿದೆ. ಸ್ವಂತಕ್ಕಾಗಿ ಈ ಕೆಲಸಕ್ಕೆ ಮುಂದಾಗಿದ್ದರೂ ಇಡೀ ಗ್ರಾಮಕ್ಕೆ ಅನುಕೂಲ ಆಗುವಂಥ ಕಾರ್ಯ ಮಾಡಿರುವುದಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

    ಇದನ್ನೂ ಓದಿ: ಸತ್ತೇ ಹೋಗಿದ್ದಾನೆ ಎಂದುಕೊಂಡವ 45 ವರ್ಷಗಳ ನಂತರ ಪತ್ನಿ ಮುಂದೆ ಪ್ರತ್ಯಕ್ಷನಾದಾಗ..!

    ಅಷ್ಟಕ್ಕೂ 58 ವರ್ಷದ ಅಗಸ್ಟೀನ್ ಮತ್ತು ಅವರ 27 ವರ್ಷದ ಮಗ ಜೋಸೆಫ್ ಮಾಡಿರುವ ಕೆಲಸ ಎಂದರೆ ಗುಡ್ಡಗಾಡು ಪ್ರದೇಶ ಎನಿಸಿಕೊಂಡಿದ್ದಲ್ಲಿ ರಸ್ತೆ ನಿರ್ಮಿಸಿರುವುದು! ಕೇವಲ 38 ದಿನಗಳಲ್ಲಿ ಎಂಟು ಮೀಟರ್ ಅಗಲ ಹಾಗೂ 200 ಮೀಟರ್ ಉದ್ದದ ರಸ್ತೆಯನ್ನು ನಿರ್ಮಿಸಿದ್ದಾರೆ ಇವರು, ಅದೂ ಯಾರ ಸಹಕಾರವೂ ಇಲ್ಲದೆ!

    ಕೋಳಿಕ್ಕೋಡ್​ನಿಂದ ಸುಮಾರು 37 ಕಿಲೋಮೀಟರ್ ದೂರದಲ್ಲಿರುವ ಕೂಡರಂಹಿ ಎಂಬ ಹಳ್ಳಿಯಲ್ಲಿ ರಸ್ತೆ ಇಲ್ಲದೇ ಜನರು ತುಂಬಾ ಪರದಾಡುತ್ತಿದ್ದರು. ರಸ್ತೆ ತುಂಬಾ ಕಿರಿದಾಗಿತ್ತು ಕೂಡ. ವಾಹನ ಸಂಚಾರ ದೂರದ ಮಾತು, ನಡೆದು ಹೋಗುವುದೇ ಅಸಾಧ್ಯ ಎನಿಸಿತ್ತು. 38 ದಿನಗಳ ಅವಿತರ ಶ್ರಮದಿಂದ ಈ ರಸ್ತೆ ಈಗ ಎಂಟು ಮೀಟರ್ ಅಗಲದ ರಸ್ತೆಯಾಗಿದೆ! ನಾಲ್ಕು ಚಕ್ರಗಳ ವಾಹನಗಳು ಕೂಡ ಯಾವುದೇ ಅಡೆತಡೆಗಳಿಲ್ಲದೆ ಪ್ರಯಾಣಿಸಬಹುದಾಗಿದೆ.

    ಇದನ್ನೂ ಓದಿ:  ಸಿಎಂ ಮೇಲೆ ನರ್ಸ್​ಗಳು ಗರಂ: ಪಶ್ಚಿಮ ಬಂಗಾಳದಲ್ಲಿ ಏರುತ್ತಲೇ ಇದೆ ರಾಜೀನಾಮೆ- ಸುಸ್ತಾದ ದೀದಿ!

    ಅಷ್ಟಕ್ಕೂ ಇಂಥದ್ದೊಂದು ಕಾರ್ಯಕ್ಕೆ ಅವರು ಮುಂದಾಗಿರುವ ಹಿಂದೆ ಒಂದು ಕಾರಣವೂ ಇದೆ. ಅದೇನೆಂದರೆ, ಮಗ ಜೋಸೆಫ್ ತಮಿಳುನಾಡಿನಲ್ಲಿ ಕೃಷಿ ಅಧ್ಯಯನಕ್ಕೆ ಹೋಗಿದ್ದ. ಅದಕ್ಕಾಗಿ ಅಪ್ಪ ಬ್ಯಾಂಕ್​ನಿಂದ ಶೈಕ್ಷಣಿಕ ಸಾಲ ಪಡೆದಿದ್ದರು. ಮೂರು ವರ್ಷಗಳ ಕೋರ್ಸ್​ ಅದು. ಆದರೆ ಮಗನಿಗೆ ತೀವ್ರ ಅನಾರೋಗ್ಯ ಆಗಿದ್ದರಿಂದ ಊರಿಗೆ ವಾಪಸ್​ ಆಗಬೇಕಾಯಿತು. ಆದರೆ ಸಾಲ ಮಾತ್ರ ಹಾಗೆಯೇ ಇತ್ತು. ಜತೆಗೆ, ಒಂದಿಷ್ಟು ಗೃಹ ಸಾಲವನ್ನೂ ಇವರು ಮಾಡಿಕೊಂಡಿದ್ದರು.

    ಸಾಲವನ್ನು ತೀರಿಸಲು ತಮ್ಮ ಆಸ್ತಿಯನ್ನು ಮಾರಾಟ ಮಾಡಲು ಅಗಸ್ಟೀನ್ ಮುಂದಾಗಿದ್ದರು. ಆದರೆ ರಸ್ತೆ ಸರಿಯಾಗಿ ಇಲ್ಲದ ಕಾರಣ, ಆಸ್ತಿಯನ್ನು ಖರೀದಿ ಮಾಡಲು ಯಾರೂ ಮುಂದೆ ಬರುತ್ತಿರಲಿಲ್ಲ. ರಸ್ತೆಯ ಜಾಗದಲ್ಲಿ 15 ವರ್ಷಗಳ ಹಿಂದೆ ಜಮೀನು ಇತ್ತು. ಆದರೆ ಅದನ್ನು ರಸ್ತೆ ನಿರ್ಮಾಣಕ್ಕೆಂದು ಆಗಲೇ ಸರ್ಕಾರಕ್ಕೆ ಬಿಟ್ಟುಕೊಡಲಾಗಿತ್ತು. ಆದರೆ ಇಷ್ಟು ವರ್ಷವಾದರೂ ಕೆಲಸ ಶುರುವೇ ಆಗಿರಲಿಲ್ಲ.

    ಇದನ್ನೂ ಓದಿ: ಹಿಂದೆಂದಿಗಿಂತಲೂ ಭೀಕರ ರೂಪ ಪಡೆದಿದೆ ಕರೊನಾ- ಮಂಡ್ಯ ಒಂದರಲ್ಲಿಯೇ 62 ಪ್ರಕರಣ,ರಾಜ್ಯದಲ್ಲಿ 3 ಬಲಿ!

    ಇಲ್ಲಿ ರಸ್ತೆ ನಿರ್ಮಿಸುವಂತೆ ಅಧಿಕಾರಿಗಳಿಗೆ ಆಗಸ್ಟೀನ್​ ಮನವಿ ಸಲ್ಲಿಸಿದರು. ಆದರೆ ಇದು ಗುಡ್ಡಗಾಡು ಪ್ರದೇಶವಾದ್ದರಿಂದ ಇಲ್ಲಿ ರಸ್ತೆ ನಿರ್ಮಾಣ ಸಾಧ್ಯವಿಲ್ಲ ಎಂದುಬಿಟ್ಟರು ಅಧಿಕಾರಿಗಳು. ಇದಕ್ಕೆ ನಾವು ಧೈರ್ಯಗುಂದದೇ ಖುದ್ದು ನಿರ್ಮಾಣಕ್ಕೆ ಮುಂದಾದೆವು ಎನ್ನುತ್ತಾರೆ ಆಗಸ್ಟೀನ್​.

    ಒಟ್ಟಿನಲ್ಲಿ ಮನಸ್ಸಿದ್ದರೆ ಮಾರ್ಗ ಎಂಬುದನ್ನು ಅಪ್ಪ-ಮಗ ತೋರಿಸಿದ್ದಾರೆ. ಸ್ವಂತಕ್ಕಾಗಿ ಇಂಥದ್ದೊಂದು ಸಾಹಸಮಯ ಕಾರ್ಯಕ್ಕೆ ಮುಂದಾಗಿದ್ದರೂ, ಇದೀಗ ಇಡೀ ಗ್ರಾಮದ ಜನರು ಖುಷಿಪಡುತ್ತಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts