More

    ಆನೆಗೆ ಸ್ಫೋಟಕ ಇದ್ದ ಆಹಾರವನ್ನು ಉದ್ದೇಶಪೂರ್ವಕವಾಗಿ ನೀಡಿಲ್ಲ: ಕೇರಳ ಮುಖ್ಯ ವನ್ಯಜೀವಿ ಅಧಿಕಾರಿ ಸುರೇಂದ್ರ ಕುಮಾರ್​

    ತಿರುವನಂತಪುರ: ಉದ್ದೇಶ ಪೂರ್ವಕವಾಗಿ ಪಟಾಕಿ ಅಡಗಿಸಿದ್ದ ಆಹಾರವನ್ನು ಆನೆಗೆ ನೀಡಿರಲು ಸಾಧ್ಯವಿಲ್ಲ. ಹೀಗಿದ್ದರೂ ಈ ವಿಚಾರವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಕೇರಳದ ಮುಖ್ಯ ವನ್ಯ ಜೀವಿ ಅಧಿಕಾರಿ ಸುರೇಂದ್ರ ಕುಮಾರ್​ ಹೇಳಿದ್ದಾರೆ.

    ಗರ್ಭಿಣಿ ಆನೆ ಮೃತಪಟ್ಟ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ಚರ್ಚೆಯಾಗಿ ಪ್ರಾಣಿ ಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸುರೇಂದ್ರ ಕುಮಾರ್​ ಮೌನ ಮುರಿದು ಮಾತನಾಡಿದ್ದಾರೆ.

    ಇದನ್ನೂ ಓದಿ   ಮುಂದುವರೆದ ಕಾಂಗ್ರೆಸ್​ ಶಾಸಕರ ರಾಜೀನಾಮೆ: ಇಂದು ಪಕ್ಷ ತೊರೆದ ಇಬ್ಬರು ನಾಯಕರು

    ಗರ್ಭಿಣಿ ಆನೆ ಮಲ್ಲಾಪುರಂ ಜಿಲ್ಲೆಯಲ್ಲಿ ಮೃತಪಟ್ಟಿದೆ ಎನ್ನು ಸುದ್ದಿ ಹಬ್ಬಿಸಲಾಗುತ್ತಿದೆ. ಆದರೆ ಆನೆ ಮೃತಪಟ್ಟಿರುವುದು ಪಾಲ್ಕಾಡ್​ ಜಿಲ್ಲೆಯಲ್ಲಿ. ಮೃತಪಟ್ಟ ಆನೆ ಸಾಕು ಆನೆ ಅಲ್ಲ. ಅದು ಕಾಡು ಆನೆ. ಹೀಗಾಗಿ ಅದಕ್ಕೆ ಉದ್ದೇಶಪೂರ್ವಕವಾಗಿ ಸ್ಫೋಟಕ ಇದ್ದ ಆಹಾರವನ್ನು ನೀಡಲು ಸಾಧ್ಯವಿಲ್ಲ. ಮೃಪಟ್ಟ ಆನೆ ಮೇ 23ರಂದು ಅರಣ್ಯದ ಅಂಚಿಗೆ ಬಂದಿತ್ತು. ನಂತರ ಮರಳಿ ಅರಣ್ಯ ಪ್ರವೇಶಿಸಿದೆ. ಬಳಿಕ ಮೇ 25ರಂದು ಇಡೀ ದಿನ ನದಿಯಲ್ಲಿ ಆನೆ ನಿಂತಿತ್ತು. ಮೇ 27ರಂದು ಅದು ಮೃತಪಟ್ಟಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಮಂದಿ ಶಂಕಿತರನ್ನು ಗುರುತಿಸಲಾಗಿದೆ. ಅವರನ್ನು ವಶಕ್ಕೆ ಪಡೆದು ಪ್ರಶ್ನೆ ವಿಚಾರಣೆ ನಡೆಸಲಾಗುತ್ತಿದೆ. ಉದ್ದೇಶಪೂರ್ವಕವಾಗಿ ಆನೆಗೆ ಪಟಾಕಿ ಇಟ್ಟಿದ್ದ ಆಹಾರವನ್ನು ನೀಡಲು ಸಾಧ್ಯವಿಲ್ಲ. ಆದರೂ ಈ ವಿಚಾರವನ್ನು ಪ್ರಧಾನವಾಗಿಟ್ಟುಕೊಂಡು ತನಿಖೆ ನಡೆಸಲಾಗುತ್ತಿದೆ ಎಂದರು.

    ಇದನ್ನೂ ಓದಿ  ಗಂಡ-ಹೆಂಡ್ತಿ ಜಗಳ ವಿಮಾನದಲ್ಲಿ ಬಾಂಬ್​ ಇಡುವ ತನಕ…

    ಮೃತಪಟ್ಟ ಆನೆಯ ಪರೀಕ್ಷೆ ವರದಿ ಬಂದಿದ್ದು, ಅದರಲ್ಲಿ ಆನೆ ನೀರಿನಲ್ಲಿ ಮುಳುಗಿದ ಪರಿಣಾಮ ಶ್ವಾಸಕೋಸಕ್ಕೆ ನೀರು ತುಂಬಿ ಉಸಿರುಗಟ್ಟಿ ಮೃತಪಟ್ಟಿದೆ ಎಂದು ತಿಳಿಸಿದೆ.

    ಆನೆ ಪಟಾಕಿ ಇಟ್ಟಿದ್ದ ಅನಾನಸ್​ ತಿನ್ನಲು ಮುಂದಾಗಿ ಸ್ಫೋಟಕ್ಕೆ ಬಾಯಿ ಗಾಯಗೊಂಡಿತ್ತು. ಇದರಿಂದ ವಾರಗಳ ಕಾಲ ಆಹಾರ ಸ್ವೀಕರಸದೆ ಸುಸ್ತಾಗಿತ್ತು. ಇದೆ ನಡುವೆ ಆನೆ ನದಿಯಲ್ಲಿ ಇಳಿದಿದ್ದ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿತ್ತು. ಗರ್ಭಿಣಿ ಆನೆ ಸಾವು ಸಾಮಾಜಿಕ ಜಾಲತಾಣದಲ್ಲಿ ರಾಷ್ಟ್ರಮಟ್ಟದಲ್ಲಿ ತೀವ್ರ ಚರ್ಚೆಯಾಗಿತ್ತು. (ಏಜೆನ್ಸೀಸ್​)

    ಒಂದೇ ಠಾಣೆಯ ಮೂವರು ಪೇದೆಗಳಿಗೆ ಕರೊನಾ ಪಾಸಿಟಿವ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts