More

    ಅಪ್ಪನ ಇಚ್ಛೆಗೆ ವಿರುದ್ಧವಾಗಿ ಬಾಕ್ಸಿಂಗ್ ರಿಂಗ್ ಪ್ರವೇಶಿಸಿದ್ದವಳು ಈಗ ಒಲಿಂಪಿಕ್ಸ್ ಪದಕಕ್ಕೆ ಸನಿಹ!

    ಟೋಕಿಯೊ: ಮಗಳು ಬಾಕ್ಸರ್ ಆಗುವುದು ಅಪ್ಪನಿಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಯಾಕೆಂದರೆ ಬಾಕ್ಸಿಂಗ್‌ನಲ್ಲಿ ಎದುರಾಳಿ ನೀಡುವ ಪಂಚ್‌ನಿಂದ ಮಗಳಿಗೆ ಏಟು ಬೀಳುತ್ತದೆ. ಇದರಿಂದ ತಮಗೂ ನೋವಾಗುತ್ತದೆ ಎಂಬ ಕಾರಣಕ್ಕಾಗಿ ಅವರು ಮಗಳಿಗೆ ಬಾಕ್ಸಿಂಗ್ ರಿಂಗ್ ಪ್ರವೇಶಿಸಲು ಅನುಮತಿ ನಿರಾಕರಿಸಿದ್ದರು. ಆದರೆ ಅಪ್ಪನಿಗೆ ಗೊತ್ತಿಲ್ಲದಂತೆ ಬಾಕ್ಸಿಂಗ್ ಅಕಾಡೆಮಿ ಸೇರಿದ್ದ ಮಗಳು ಈಗ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲುವಿನ ಸನಿಹ ಬಂದಿದ್ದಾಳೆ. ಆ ಹೆಮ್ಮೆಯ ಪುತ್ರಿಯೇ ಬಾಕ್ಸರ್ ಪೂಜಾ ರಾಣಿ.

    30 ವರ್ಷದ ಬಾಕ್ಸರ್ ಪೂಜಾ ರಾಣಿ ಒಲಿಂಪಿಕ್ಸ್‌ಗೆ ಗೆಲುವಿನ ಪದಾರ್ಪಣೆ ಮಾಡುವುದರೊಂದಿಗೆ ಪದಕಕ್ಕೂ ಸನಿಹವಾಗಿದ್ದಾರೆ. ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ಪೂಜಾ ರಾಣಿ ಬುಧವಾರ ನಡೆದ ಮಹಿಳೆಯರ 75 ಕೆಜಿ ವಿಭಾಗದ 16ರ ಘಟ್ಟದಲ್ಲಿ ಅಲ್ಜೀರಿಯಾದ ಇಕ್ರಕ್ ಚೈಬ್ ವಿರುದ್ಧ 5-0ಯಿಂದ ಸುಲಭ ಗೆಲುವು ಸಾಧಿಸಿದರು. ತಮಗಿಂತ 10 ವರ್ಷ ಕಿರಿಯ ಬಾಕ್ಸರ್ ವಿರುದ್ಧ ಪೂಜಾ ಎಲ್ಲ 3 ಸುತ್ತುಗಳಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿದರು. ಪೂಜಾ ಸೆಮೀಸ್ ಪ್ರವೇಶಿಸಿದರೆ ಪದಕ ಖಚಿತವಾಗಲಿದೆ. 2 ಬಾರಿಯ ಏಷ್ಯನ್ ಚಾಂಪಿಯನ್ ಪೂಜಾ, ಎದುರಾಳಿಯ ಅನನುಭವದ ಸಂಪೂರ್ಣ ಲಾಭವೆತ್ತಿದರು.

    ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸಣ್ಣಪುಟ್ಟ ದೇಶಗಳಿಗೆ ಚಿನ್ನದ ಸಂಭ್ರಮ!

    ಹರಿಯಾಣದ ಪೂಜಾ ರಾಣಿ ಆರ್ಥಿಕ ಮತ್ತು ಗಾಯದ ಸಮಸ್ಯೆಯ ನಡುವೆ ಒಲಿಂಪಿಕ್ಸ್ ವೇದಿಕೆ ತಲುಪಿದ್ದಾರೆ. ಪೊಲೀಸ್ ಅಧಿಕಾರಿಯಾಗಿದ್ದ ಅವರ ತಂದೆಗೆ ಮಗಳು ಬಾಕ್ಸರ್ ಆಗುವುದು ಇಷ್ಟವಿರಲಿಲ್ಲ. ಆದರೆ ತಂದೆಯ ಇಚ್ಛೆಗೆ ವಿರುದ್ಧವಾಗಿ ಬಾಕ್ಸಿಂಗ್ ಅಕಾಡೆಮಿ ಸೇರಿದ್ದ ಪೂಜಾ, ಎದುರಾಳಿಯ ಹೊಡೆತಕ್ಕೆ ಏಟುಗಳು ಆದಾಗ ಗೆಳತಿಯ ಮನೆಯಲ್ಲಿ ಉಳಿದುಕೊಳ್ಳುವ ಮೂಲಕ ತಂದೆಯಿಂದ ಗಾಯಗಳನ್ನು ಮರೆಸಿದ್ದರು. ಕೊನೆಗೆ ತಂದೆಗೆ ಮಗಳ ಬಾಕ್ಸಿಂಗ್ ಆಟ ಗೊತ್ತಾದಾಗ ಅವರು 6 ತಿಂಗಳ ಕಾಲ ಮಗಳನ್ನು ಮನೆಯಲ್ಲೇ ಇರಿಸಿ ಬಾಕ್ಸಿಂಗ್‌ನಿಂದ ಸಂಪೂರ್ಣ ದೂರವಿಟ್ಟಿದ್ದರು. ಆದರೂ ಕೋಚ್ ಸಂಜಯ್ ಕುಮಾರ್ ಒತ್ತಾಯದ ಮೇರೆಗೆ ಕೊನೆಗೂ ಅವರಿಗೆ ಬಾಕ್ಸಿಂಗ್ ವೃತ್ತಿಯಲ್ಲಿ ಮುಂದುವರಿಯಲು ತಂದೆಯಿಂದ ಒಪ್ಪಿಗೆ ದೊರೆತಿತ್ತು. 2019 ಮತ್ತು 2021ರ ಏಷ್ಯನ್ ಚಾಂಪಿಯನ್‌ಷಿಪ್‌ಗಳಲ್ಲಿ ಚಿನ್ನ ಜಯಿಸುವ ಮೂಲಕ ಅವರು ಮಿಂಚಿದ್ದರು.

    ಮೀರಾಬಾಯಿ ಜೀವನವನ್ನೇ ಬದಲಿಸಿತು ಆ ಒಂದು ಘಟನೆ: ಬೆಳ್ಳಿ ವಿಜೇತೆಯ ಸ್ಫೂರ್ತಿದಾಯಕ ಸ್ಟೋರಿ ಇದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts