More

    ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸಣ್ಣಪುಟ್ಟ ದೇಶಗಳಿಗೆ ಚಿನ್ನದ ಸಂಭ್ರಮ!

    ಟೋಕಿಯೊ: ಒಂದು ಕೋಟಿಗಿಂತಲೂ ಕಡಿಮೆ ಜನಸಂಖ್ಯೆ ಹೊಂದಿರುವ ಕೆಲವು ಸಣ್ಣ ಪುಟ್ಟ ದೇಶಗಳು ಈ ಬಾರಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ವರ್ಣ ಪದಕದ ಬೇಟೆಯಾಡುವ ಮೂಲಕ ಗಮನಸೆಳೆದಿವೆ.

    ಇಡೀದ ದೇಶದ ಜನರನ್ನು ಟೋಕಿಯೊದ ಒಲಿಂಪಿಕ್ ಕ್ರೀಡಾಂಗಣಕ್ಕೆ (68 ಸಾವಿರ ಪ್ರೇಕ್ಷಕರ ಸಾಮರ್ಥ್ಯ) ತಂದುಬಿಟ್ಟರೂ ಭರ್ತಿಯಾಗದಷ್ಟು ಅಂದರೆ ಕೇವಲ 63 ಸಾವಿರ ಜನಸಂಖ್ಯೆ ಹೊಂದಿರುವ ಬರ್ಮುಡಾ ದೇಶ ಮಹಿಳೆಯರ ಟ್ರಯಾಥ್ಲಾನ್‌ನಲ್ಲಿ ಚಿನ್ನ ಗೆದ್ದು ಬೀಗಿದೆ. ಫ್ಲೋರಾ ಡಫಿ ತಮ್ಮ ದೇಶಕ್ಕೆ ಚಿನ್ನ ಗೆದ್ದುಕೊಟ್ಟ ಮೊದಲಿಗರೆನಿಸಿದ್ದಾರೆ. ಈ ಮೂಲಕ ಬರ್ಮುಡಾ ಬೇಸಗೆ ಒಲಿಂಪಿಕ್ಸ್ ಚಿನ್ನ ಗೆದ್ದ ಅತಿ ಕಡಿಮೆ ಜನಸಂಖ್ಯೆಯ ದೇಶವೆನಿಸಿದೆ.

    ಇದನ್ನೂ ಓದಿ: ಡಾಕ್ಟರ್ ಆಗಬೇಕೆಂಬ ರೈತನ ಮಗಳ ಕನಸು ನನಸಾಗಿಸಿದ ಕ್ರಿಕೆಟ್ ದಿಗ್ಗಜ ತೆಂಡುಲ್ಕರ್

    8.9 ಲಕ್ಷ ಜನಸಂಖ್ಯೆಯ ಓಶಿಯಾನಿಯಾದ ದೇಶ ಫಿಜಿ, ರಗ್ಬಿ ಸೆವೆನ್‌ನಲ್ಲಿ ಸತತ 2ನೇ ಬಾರಿ ಚಿನ್ನ ಜಯಿಸಿದೆ. ಇದಲ್ಲದೆ, 75 ಲಕ್ಷ ಜನಸಂಖ್ಯೆಯ ಹಾಂಕಾಂಗ್ ಫೆನ್ಸಿಂಗ್‌ನಲ್ಲಿ ಚಿನ್ನ ಜಯಿಸಿದ್ದರೆ, 18.7 ಲಕ್ಷ ಜನಸಂಖ್ಯೆಯ ಯುರೋಪ್ ದೇಶ ಕೊಸೊವೊ ಮಹಿಳೆಯರ ಜುಡೋದಲ್ಲಿ 2 ಚಿನ್ನ ಜಯಿಸಿದೆ. 13.2 ಲಕ್ಷ ಜನಸಂಖ್ಯೆಯ ಯುರೋಪ್ ದೇಶ ಈಸ್ಟೋನಿಯಾ ಮಹಿಳೆಯರ ಫೆನ್ಸಿಂಗ್‌ನಲ್ಲಿ ಚಿನ್ನ ಜಯಿಸಿದೆ. 59.4 ಲಕ್ಷ ಜನಸಂಖ್ಯೆಯ ಏಷ್ಯನ್ ರಾಷ್ಟ್ರ ತುರ್ಕ್‌ಮೆನಿಸ್ತಾನ ಮಹಿಳೆಯರ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಗೆದ್ದಿದ್ದು, ಒಲಿಂಪಿಕ್ಸ್ ಇತಿಹಾಸದಲ್ಲಿ ಪದಕದ ಖಾತೆ ತೆರೆದಿದೆ. 53.3 ಲಕ್ಷ ಜನಸಂಖ್ಯೆಯ ನಾರ್ವೆ, ಪುರುಷರ ಟ್ರಯಾಥ್ಲಾನ್‌ನಲ್ಲಿ ಚಿನ್ನ ಗೆದ್ದಿದೆ. 37.2 ಲಕ್ಷ ಜನಸಂಖ್ಯೆಯ ಜಾರ್ಜಿಯಾ ಜುಡೋದಲ್ಲಿ ಚಿನ್ನ ಗೆದ್ದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts