More

    ಪ್ರತಿಷ್ಠಿತ ಲೌರೆಸ್ ಕ್ರೀಡಾ ಪ್ರಶಸ್ತಿ ರೇಸ್‌ನಲ್ಲಿ ಒಲಿಂಪಿಕ್ಸ್ ಚಿನ್ನದ ಹುಡುಗ ನೀರಜ್ ಚೋಪ್ರಾ

    ಲಂಡನ್: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ವರ್ಣ ಪದಕ ಗೆದ್ದು ಇತಿಹಾಸ ಬರೆದ ಭಾರತದ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಅವರ ಹೆಸರು ಪ್ರತಿಷ್ಠಿತ ಲೌರೆಸ್ ವಾರ್ಷಿಕ ಪ್ರಶಸ್ತಿಯ ‘ವರ್ಷದ ಅದ್ಭುತ ಗೆಲುವು’ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ಅವರು ಈ ಪ್ರಶಸ್ತಿ ರೇಸ್‌ನಲ್ಲಿ ಕಾಣಿಸಿಕೊಂಡ ಮೊದಲ ಭಾರತೀಯರೆನಿಸಿದ್ದಾರೆ.

    ಕಳೆದ ವರ್ಷದ ಯುಎಸ್ ಓಪನ್ ಚಾಂಪಿಯನ್‌ಗಳಾದ ರಷ್ಯಾದ ಡೆನಿಲ್ ಮೆಡ್ವೆಡೇವ್ ಮತ್ತು ಬ್ರಿಟನ್‌ನ ಎಮ್ಮಾ ರಾಡುಕೇನ್, ಸ್ಪೇನ್ ಫುಟ್‌ಬಾಲ್ ಯುವತಾರೆ ಪೆಡ್ರಿ, ಆಸ್ಟ್ರೇಲಿಯಾದ ಈಜುಪಟು ಅರಿಯರ್ನೆ ಟಿಟ್ಮಸ್ ಮತ್ತು ವೆನೆಜುವೆಲಾದ ಅಥ್ಲೀಟ್ ಯುಲಿಮರ್ ರೋಜಾಸ್ ಅವರು 23 ವರ್ಷದ ನೀರಜ್ ಜತೆಗೆ ಪ್ರಶಸ್ತಿ ರೇಸ್‌ನಲ್ಲಿದ್ದಾರೆ. ಪ್ರಶಸ್ತಿ ವಿಜೇತರ ಹೆಸರು ಏಪ್ರಿಲ್‌ನಲ್ಲಿ ಘೋಷಣೆಯಾಗಲಿದೆ. ನೀರಜ್ ಟೋಕಿಯೊದಲ್ಲಿ 87.58 ಮೀಟರ್ ಜಾವೆಲಿನ್ ಎಸೆಯುವ ಮೂಲಕ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಅಥ್ಲೀಟ್ ಎನಿಸಿದ್ದರು.

    ‘ನನ್ನ ಸಾಧನೆಯನ್ನು ಜಾಗತಿಕ ಕ್ರೀಡಾ ಮಟ್ಟದಲ್ಲಿ ಗುರುತಿಸಿರುವುದು ಶ್ರೇಷ್ಠ ಗೌರವವಾಗಿದೆ. ಫಿಟ್ನೆಸ್‌ಗಾಗಿ ಕ್ರೀಡೆಯತ್ತ ಆಸಕ್ತಿ ತೋರಿದ ಗ್ರಾಮೀಣ ಭಾರತದ ಸಣ್ಣ ಹಳ್ಳಿಯ ಹುಡುಗನಿಂದ ಒಲಿಂಪಿಕ್ಸ್ ಪೋಡಿಯಂವರೆಗೆ ಸಾಗಿಬಂದ ನನ್ನ ಜರ್ನಿ ಅಮೋಘವಾದುದು. ಜಾಗತಿಕ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿ ಪದಕ ಗೆದ್ದಿರುವುದು ನನ್ನ ಹೆಮ್ಮೆ. ಇದೀಗ ಲೌರೆಸ್ ನನ್ನ ಸಾಧನೆಯನ್ನು ಗುರುತಿಸಿರುವುದು ವಿಶೇಷ ಅನುಭವ ನೀಡಿದೆ’ ಎಂದು ನೀರಜ್ ಹೇಳಿದ್ದಾರೆ.

    ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಮತ್ತು ಕುಸ್ತಿಪಟು ವಿನೇಶ್ ಪೋಗಟ್ ಬಳಿಕ ಲೌರೆಸ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ 3ನೇ ಭಾರತೀಯರೆಂಬ ಹೆಗ್ಗಳಿಕೆ ನೀರಜ್ ಅವರದಾಗಿದೆ. ಸಚಿನ್ 2011ರ ಏಕದಿನ ವಿಶ್ವಕಪ್ ಗೆಲುವಿಗಾಗಿ 2020ರಲ್ಲಿ ‘ಕಳೆದ 20 ವರ್ಷಗಳ ಅತ್ಯುತ್ತಮ ಕ್ರೀಡಾಕ್ಷಣ’ ಮತ್ತು ವಿನೇಶ್ 2019ರಲ್ಲಿ ‘ವರ್ಷದ ಕಂಬ್ಯಾಕ್’ ಪ್ರಶಸ್ತಿ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದರು.

    ಶ್ರೇಯಸ್ ಅಯ್ಯರ್‌ಗಾಗಿ ಆರ್‌ಸಿಬಿ ಸಲ್ಲಿಸಲಿರುವ ಬಿಡ್​ ಮೊತ್ತವೆಷ್ಟು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts