More

    ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಇಂದು ಭಾರತ-ಪಾಕ್ ಕಾದಾಟ

    ಢಾಕಾ: ಗೋಲಿನ ಸುರಿಮಳೆ ಹರಿಸಿ ಆತಿಥೇಯ ಬಾಂಗ್ಲಾದೇಶ ತಂಡವನ್ನು ಸೋಲಿಸಿದ ವಿಶ್ವಾಸದಲ್ಲಿರುವ ಭಾರತ ತಂಡ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ತನ್ನ 3ನೇ ಪಂದ್ಯದಲ್ಲಿ ಶುಕ್ರವಾರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ಸಾಧನೆಯ ಬಳಿಕ ಮೊದಲ ಟೂರ್ನಿ ಆಡುತ್ತಿರುವ ಭಾರತ ತಂಡ ಬಹುತೇಕ ಯುವ ಆಟಗಾರರಿಂದ ಕೂಡಿದೆ. ದಕ್ಷಿಣ ಕೊರಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಡ್ರಾಕ್ಕೆ ತೃಪ್ತಿಪಟ್ಟ ಬಳಿಕ ಬಾಂಗ್ಲಾ ವಿರುದ್ಧ 9-0ಯಿಂದ ಗೆದ್ದು ಲಯ ಕಂಡುಕೊಂಡಿದೆ. ಇದೀಗ ಪಾಕಿಸ್ತಾನ ವಿರುದ್ಧವೂ ಗೆಲುವಿನ ಓಟ ಮುಂದುವರಿಸುವ ತವಕದಲ್ಲಿದೆ.

    ಭಾರತ ಹಾಕಿ ತಂಡದ ಗತವೈಭವ ಟೋಕಿಯೊದಲ್ಲಿ ಮರುಕಳಿಸಿದ್ದರೆ, ಪಾಕಿಸ್ತಾನ ತಂಡ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲೇ ವಿಲವಾಗಿತ್ತು. ಉಭಯ ತಂಡಗಳು 2018ರ ಕೊನೇ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಜಂಟಿ ಚಾಂಪಿಯನ್ ಆಗಿದ್ದವು. ಮಳೆಯಿಂದ ಫೈನಲ್ ರದ್ದುಗೊಂಡ ಕಾರಣ ಟ್ರೋಫಿ ಹಂಚಿಕೊಂಡಿದ್ದವು.

    ಪಾಕಿಸ್ತಾನ ವಿರುದ್ಧ ಹೆಚ್ಚಿನ ಪ್ರಯೋಗಗಳಿಗೆ ಪ್ರಯತ್ನಿಸದೆ ತನ್ನ ಪೂರ್ಣ ಸಾಮರ್ಥ್ಯದ ನಿರ್ವಹಣೆ ತೋರುವತ್ತ ಮನ್‌ಪ್ರೀತ್ ಸಿಂಗ್ ಬಳಗ ಗಮನಹರಿಸಲಿದೆ. ಸ್ಟ್ರೈಕರ್ ದಿಲ್‌ಪ್ರೀತ್ ಸಿಂಗ್, ಜರ್ಮನ್‌ಪ್ರೀತ್ ಸಿಂಗ್, ಲಲಿತ್ ಉಪಾಧ್ಯಾಯ, ಆಕಾಶ್‌ದೀಪ್ ಸಿಂಗ್, ಉಪನಾಯಕ ಹರ್ಮಾನ್‌ಪ್ರೀತ್ ಸಿಂಗ್, ವರುಣ್ ಕುಮಾರ್ ಉತ್ತಮ ಲಯದಲ್ಲಿದ್ಧಾರೆ.

    ಪಾಕಿಸ್ತಾನ ತಂಡವೂ ಈಗ ಗತವೈಭವಕ್ಕೆ ಮರಳುವ ಕನಸಿನಲ್ಲಿದ್ದರೂ ಭಾರತವೇ ಈ ಪಂದ್ಯದ ಫೇವರಿಟ್ ತಂಡವಾಗಿ ಕಣಕ್ಕಿಳಿಯಲಿದೆ. ಉಭಯ ತಂಡಗಳು 2018ರ ಟೂರ್ನಿಯ ಲೀಗ್ ಹಂತದಲ್ಲಿ ಕೊನೆಯದಾಗಿ ಮುಖಾಮುಖಿ ಆಗಿದ್ದವು. ಆ ಪಂದ್ಯದಲ್ಲಿ ಭಾರತ 3-1ರಿಂದ ಜಯಿಸಿತ್ತು. ಪಾಕ್ ವಿರುದ್ಧ ಈ ಬಾರಿ ಗೆದ್ದರೆ ಭಾರತಕ್ಕೆ ಸೆಮಿಫೈನಲ್ ಸ್ಥಾನ ಖಚಿತವಾಗಲಿದೆ. ಭಾರತ ಸದ್ಯ ಆಡಿದ 2 ಪಂದ್ಯಗಳಿಂದ 4 ಅಂಕ ಕಲೆಹಾಕಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಪಾಕಿಸ್ತಾನ ತಂಡ ಆಡಿದ ಏಕೈಕ ಪಂದ್ಯದಲ್ಲಿ ಜಪಾನ್ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿ 1 ಅಂಕದೊಂದಿಗೆ 4ನೇ ಸ್ಥಾನದಲ್ಲಿದೆ. ಕರೊನಾ ಸಂಬಂಧಿಸಿದ ಕಾರಣದಿಂದಾಗಿ ಮಲೇಷ್ಯಾ ತಂಡ ಕೊನೇಕ್ಷಣದಲ್ಲಿ ಹೊರಬಿದ್ದಿದ್ದರಿಂದ ಇದು ಈಗ 5 ತಂಡಗಳ ಟೂರ್ನಿಯಾಗಿದೆ.

    *ಆರಂಭ: ಮಧ್ಯಾಹ್ನ 3.00
    *ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಡಿ ಸ್ಪೋರ್ಟ್ಸ್

    ರಾಜಕೀಯಕ್ಕೆ ಸೇರ್ತಾರಂತೆ ಕ್ರಿಕೆಟಿಗ ಹರ್ಭಜನ್ ಸಿಂಗ್; ಬಿಜೆಪಿಯೋ, ಕಾಂಗ್ರೆಸ್ಸೋ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts