ಸಿನಿಮಾ

ಈ ಮನೆ ಮದ್ದುಗಳ ಮೂಲಕ ಕೆಟ್ಟ ಬೆವರಿನ ವಾಸನೆಯನ್ನು ದೂರ ಇರಿಸಿ!

ಬೆಂಗಳೂರು: ಆಧುನಿಕ ಜೀವನಶೈಲಿ ಹಾಗೂ ವಾತಾವರಣದಿಂದಾಗಿ ನಮ್ಮ ದೇಹದ ತಾಪಮಾನ ಬದಲಾಗುತ್ತಿರುತ್ತದೆ. ಇದರಿಂದಾಗಿ ದೇಹವು ಬೆವರಲಾರಂಭಿಸಿ ದೇಹದಿಂದ ದುರ್ವಾಸನೆ ಬರತೊಡಗುತ್ತದೆ. ಈ ವಾಸನೆಯಿಂದಾಗಿ ನಾವು ಮತ್ತೊಬ್ಬರ ಮುಂದೆ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ. ಈ ರೀತಿಯ ಮುಜುಗರ ಹಾಗೂ ಬೆವರಿನ ದುರ್ವಾಸನೆಯಿಂದ ದೂರಾಗಬೇಕಾದರೆ ಹಲವು ಸರಳ ತಂತ್ರಗಳನ್ನು ಅನುಸರಿಸಬಹುದಾಗಿದೆ.

ಔಷಧೀಯ ಗುಣಗಳನ್ನು ಹೊಂದಿರುವ ಅಲೋವೆರಾ ರಸವನ್ನು ದೇಹಕ್ಕೆ ಲೇಪಿಸಿ ಸ್ನಾನ ಮಾಡುವುದರಿಂದ ದೇಹದ ದುರ್ಗಂಧವನ್ನು ದೂರ ಮಾಡುವುದರ ಜತೆಗೆ ಚರ್ಮವನ್ನು ಮೃದುವಾಗಿಡಲು ಸಹಾಯಕವಾಗಿದೆ.

ಇದನ್ನೂ ಓದಿ: ಮಹಿಳಾ ಟೆಕ್ಕಿ ಮೃತಪಟ್ಟ ಪ್ರಕರಣ: ಚಾಲಕ ಮತ್ತು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಎಫ್ಐಆರ್

ಪ್ರತಿದಿನ ತಣ್ಣಿರಿನ ಸ್ನಾನ ಉತ್ತಮ ಎಂದು ಕೆಲವರು ಹೇಳುತ್ತಾರೆ. ಹಾಗಾಗಿಯೇ ಸ್ನಾನ ಮಾಡುವಾಗ ರೋಸ್ ವಾಟರ್, ಲ್ಯಾವೆಂಡರ್ ಮುಂತಾದ ಸುಗಂಧಭರಿತ ಎಣ್ಣೆಗಳನ್ನು ಬೆರೆಸಿ ಸ್ನಾನ ಮಾಡುವುದರಿಂದ ದೇಹದ ದುರ್ಗಂಧ ದೂರವಾಗುತ್ತದೆ. ಬೆವರಿನ ದುರ್ವಾಸನೆಗೆ ಮತ್ತೊಂದು ಕಾರಣವೆಂದರೆ ಚರ್ಮದ ಮೇಲೆ ಸೂಕ್ಷ್ಮ ಬ್ಯಾಕ್ಟೀರಿಯಾ ಬೆಳವಣಿಗೆ ಹೊಂದುವುದಾಗಿದೆ.

ಇವುಗಳನ್ನು ನಿಯಂತ್ರಣದಲ್ಲಿಡಲು ಪ್ರತಿದಿನ ಸ್ನಾನದ ನೀರಿನಲ್ಲಿ ಬೇವಿನ ಎಲೆಯ ಬೆರೆಸಿ ಸ್ನಾನ ಮಾಡಬಹುದಾಗಿದೆ. ಹೆಚ್ಚು ಮಸಾಲೆಯುಕ್ತ ಆಹಾರ ಹಾಗೂ ಕರಿದ ಪದಾರ್ಥಗಳನ್ನು ಕಡಿಮೆ ಸೇವಿಸಿ. ಇದರಲ್ಲಿನ ಆಮ್ಲೀಯ ಅಂಶದಿಂದಾಗಿ ದೇಹದ ಉಷ್ಣಾಂಶ ಏರಿಕೆಯಾಗಿ ಬೆವರುವಂತೆ ಮಾಡುತ್ತದೆ. ನಿಂಬೆ ಗಿಡದ ಎಲೆಗಳನ್ನು ನೀರಿನಲ್ಲಿ ಕುದಿಸಿ ಸ್ನಾನ ಮಾಡುವುದರಿಂದ ಬೆವರಿನ ವಾಸನೆಯನ್ನು ತಡೆಯಬಹುದಾಗಿದೆ.

ಪ್ರತಿದಿನ ಶುಭ್ರವಾದ ಬಟ್ಟೆಗಳನ್ನು ಧರಿಸಿ. ಈಗಾಗಲೇ ಬಳಸಿರುವ ಬಟ್ಟೆಗಳನ್ನು ಮತ್ತೇ ಬಳಸುವುದರಿಂದ ಬ್ಯಾಕ್ಟೀರಿಯಾ ಬೆಳವಣಿಗೆ ಇದು ದಾರಿ ಮಾಡಿಕೊಡುತ್ತದೆ. ಇದರಿಂದ ಮೈತುರಿಕೆ, ಬೆವರಿನ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ.(ಎಜೆನ್ಸೀಸ್​)

Latest Posts

ಲೈಫ್‌ಸ್ಟೈಲ್