More

    ತಿರುವುಗಳಿರುವ ಬೆಟ್ಟದ ರಸ್ತೆಯಲ್ಲಿ ಪ್ರಯಾಣಿಕರು ತುಂಬಿರುವ ಬಸ್​ ಓಡಿಸಬೇಕೆಂಬ ಕನಸಿನ ಹಿಂದೆ ಬಿದ್ದ ಮಹಿಳೆ!

    ಕಾಸರಗೋಡು: ಮಹಿಳೆಯರು ನಾವು ಯಾವುದರಲ್ಲೂ ಕಮ್ಮಿ ಇಲ್ಲ ಎಂಬುದನ್ನು ಅನೇಕ ಬಾರಿ ನಿರೂಪಿಸಿದ್ದಾರೆ. ಕೈಯಲ್ಲಿ ಸೌಟು ಹಿಡಿಯುವುದರಿಂದಿಡಿದು ದೊಡ್ಡ ದೊಡ್ಡ ವಾಹನಗಳ ಚಾಲನೆಯ ಜತೆಗೆ ದೇಶದ ಆಡಳಿತ ಚುಕ್ಕಾಣಿಯನ್ನು ಹಿಡಿಯಬಲ್ಲೆವು ಎಂಬುದನ್ನು ಮಹಿಳೆಯರು ಸಾಬೀತು ಮಾಡಿದ್ದಾರೆ. ಪುರುಷರಿಗಿಂತ ಮಹಿಳೆಯರೂ ಕೂಡ ಯಾವುದರಲ್ಲೂ ಕಡಿಮೆ ಇಲ್ಲ. ಎಷ್ಟೇ ಅಡೆತಡೆಗಳು ಬಂದರೂ ಅವರಿಗೆ ಅನಿಸಿದ್ದನ್ನು ಮಾಡಿಯೇ ಮಾಡುತ್ತಾರೆ ಎನ್ನುವುದಕ್ಕೆ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ.

    ಪ್ರತಿಭೆಯನ್ನು ಅನುಮಾನಿಸಲಿಲ್ಲ

    ಕೇರಳದ ಅಡುಕಥಯವಯಾಲ್​ ಮೂಲದ ಎನ್​. ದೀಪಾ ಅವರು ಶ್ರೀ ಕೃಷ್ಣ ಹೆಸರಿನ ಬೋರ್ಡ್​ ಇರುವ ಬಸ್​ ಚಲಾಯಿಸುವ ಮೂಲಕ ದೊಡ್ಡ ವಾಹನಗಳನ್ನು ಮಹಿಳೆಯರು ಮುನ್ನಡೆಸಲಾಗದು ಎಂಬ ಕಲ್ಪನೆಯನ್ನು ಕೊನೆಗಾಣಿಸಿದ್ದಾರೆ. ಪ್ರಯಾಣಿಕರು ತುಂಬಿ ತುಳುಕುವ ಬಸ್​ ಅನ್ನು ತಿರುವುಗಳೇ ತುಂಬಿರುವ ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ಲೀಲಾಜಾಲವಾಗಿ ಚಾಲನೆ ಮಾಡಬೇಕೆಂಬ ಬಹು ದಿನಗಳ ಕನಸನ್ನು 36 ವರ್ಷದ ದೀಪಾ ಈಡೇರಿಸಿಕೊಂಡಿದ್ದಾರೆ. ದೀಪಾ ಡ್ರೈವರ್ ಸೀಟಿನಲ್ಲಿ ಕುಳಿತಾಗ ಬಸ್ ಮಾಲೀಕ ನಿಶಾಂತ್ ಸಹ ದೀಪಾಳ ಪ್ರತಿಭೆಯನ್ನು ಅನುಮಾನಿಸಲಿಲ್ಲ. ಅವರ ಮೇಲಿನ ಬಲವಾದ ನಂಬಿಕೆಯಿಂದಲೇ ಅವಕಾಶವನ್ನು ನೀಡಿದರು.

    ಇದನ್ನೂ ಓದಿ: ಕೆಪಿಎಸ್​ಸಿ ಅಧ್ಯಕ್ಷರ ನೇಮಕದಲ್ಲಿ ಪಾರದರ್ಶಕತೆ ಇರಲಿ; ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

    ಬಹುದೊಡ್ಡ ಸವಾಲು

    ಅನುಭವಿ ಮತ್ತು ವೇಗವುಳ್ಳ ಡ್ರೈವರ್‌ನಂತೆಯೇ ದೀಪಾ ಸಹ ಯಾವಾಗಲೂ ಟ್ರಾಫಿಕ್​ನ ಪೀಕ್ ಸಮಯದಲ್ಲಿಯೂ ಸರಿಯಾದ ಸಮಯಕ್ಕ ತನ್ನ ಗಮ್ಯಸ್ಥಾನವನ್ನು ತಲುಪುತ್ತಾರೆ. ಶ್ರೀ ಕೃಷ್ಣ ಬಸ್ ಕನ್ಹಂಗಾಡ್ ಮತ್ತು ಬಂದಡ್ಕ್​ ನಡುವೆ ಸಂಚಾರ ಮಾಡುತ್ತದೆ. ಇದು ಕನ್ಹಾಂಗಾಡ್‌ನಿಂದ ಬೆಳಿಗ್ಗೆ 7.50ಕ್ಕೆ ಪ್ರಯಾಣ ಆರಂಭಿಸುತ್ತದೆ ಮತ್ತು ಸಂಜೆ 3.45ಕ್ಕೆ ಹಿಂತಿರುಗುತ್ತದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಅನೇಕ ನಿರ್ಮಾಣ ಕೆಲಸಗಳು ಭಾರೀ ಸಂಚಾರ ದಟ್ಟಣೆ ಉಂಟು ಮಾಡಿರುವುದು ದೀಪಾಗೆ ಬಹುದೊಡ್ಡ ಸವಾಲಾಗಿದೆ.

    ಬಸ್ ಮಾಲೀಕರು ಚಿಂತಿಸಬೇಕಾಗಿಲ್ಲ

    ದೀಪಾ ಅವರ ಡ್ರೈವಿಂಗ್​ ಬಗ್ಗೆ ಅನೇಕರು ಅನುಮಾನಗಳು ಮತ್ತು ಕಳವಳಗಳನ್ನು ವ್ಯಕ್ತಪಡಿಸಿದರೂ ದೀಪಾ ಮಾತ್ರ ಮೂರು ವಾರಗಳ ಹಿಂದೆ ತನ್ನ ಮೊದಲ ಪ್ರವಾಸವನ್ನು ಅತ್ಯಂತ ಯಶಸ್ವಿಯಾಗಿ ಮುಗಿಸಿದರು. ಸ್ವಲ್ಪ ಬಿಡುವು ಸಿಕ್ಕಾಗಲೆಲ್ಲ ದೀಪಾ ಅವರು ಬಸ್ ಸ್ಟೀರಿಂಗ್ ಹಿಡಿಯಲು ನಿರ್ಧರಿಸಿದ್ದಾರೆ. ಅಂದಹಾಗೆ ದೀಪಾ, ಮಾಲೀಕ ನಿಶಾಂತ್ ಅವರ ಸಂಬಂಧಿ. ಆದ್ದರಿಂದ ಬಸ್‌ನ ಸಾಮಾನ್ಯ ಚಾಲಕರು ಒಂದು ದಿನ ರಜೆ ತೆಗೆದುಕೊಂಡಾಗ ಬಸ್ ಮಾಲೀಕರು ಚಿಂತಿಸಬೇಕಾಗಿಲ್ಲ. ಏಕೆಂದರೆ, ಆ ಸ್ಥಾನವನ್ನು ದೀಪಾ ತುಂಬುತ್ತಾರೆ.

    ಇದನ್ನೂ ಓದಿ: ಪಿಂಕಾದವೋ ಕಣ್ಣು… ಹೆಚ್ಚಿದ ಬೇನೆ: ಪಿಂಕ್ ಐ, ರೆಡ್ ಐ, ಮದ್ರಾಸ್ ಐ ಉಲ್ಬಣ; ಹವಾಮಾನ ವೈಪರೀತ್ಯದಿಂದ ತೀವ್ರತೆ

    ದೀಪಾ ಅವರು 2008 ರಲ್ಲಿ LMV (ಲೈಟ್ ಮೋಟಾರ್ ವೆಹಿಕಲ್) ಪರವಾನಗಿಯನ್ನು ಪಡೆದುಕೊಂಡರು. ಟಿಪ್ಪರ್ ಲಾರಿ ಓಡಿಸುವ ಪ್ರಯತ್ನದಿಂದ ಮೊದಲ ಪ್ರಯಾಣವನ್ನು ಪ್ರಾರಂಭಿಸಿದರು. ತನ್ನ ಪತಿ ಹಾಗೂ ಬಸ್ ಮಾಲೀಕ ನಿಶಾಂತ್ ಹಾಗೂ ಟೂರಿಸ್ಟ್ ಬಸ್ ಚಾಲಕ ಶಾಜಿ ಅವರ ಪ್ರೋತ್ಸಾಹದಿಂದ ದೀಪಾ ತನ್ನ ಬಹುದಿನದ ಕನಸನ್ನು ಈಡೇರಿಸಿಕೊಂಡಿದ್ದಾರೆ.

    ಮೂರು ಮಕ್ಕಳ ತಾಯಿ

    ದೀಪಾ ಅವರು ಕಳೆದ ನವೆಂಬರ್‌ನಲ್ಲಿ ಎಚ್‌ಎಂವಿ (ಹೆವಿ ಮೋಟರ್ ವೆಹಿಕಲ್) ಪರವಾನಗಿ ಪಡೆದರು. ಮೂರು ಮಕ್ಕಳ ತಾಯಿಯಾಗಿರುವದ ದೀಪಾ, ಫ್ಯಾಷನ್ ಡಿಸೈನಿಂಗ್ ಮತ್ತು ಮ್ಯೂರಲ್ ಪೇಂಟಿಂಗ್‌ನಲ್ಲಿ ಆಸಕ್ತಿ ಹೊಂದಿದ್ದು, ಕೆಲವು ಶಾಲೆಗಳಲ್ಲಿ ಇದಕ್ಕೆ ಸಂಬಂಧಿಸಿದ ಕೆಲವು ಕೆಲಸಗಳನ್ನು ಮಾಡಿದ್ದಾರೆ. ಇದರ ಜೀವನ ಇತರರಿಗೂ ಮಾದರಿಯಾಗಿದೆ. (ಏಜೆನ್ಸೀಸ್​)

    ಪೊಲೀಸರಿಗೆ ಮುಂಬಡ್ತಿ ಪರ್ವ: ಎಸ್​ಐ ನೇಮಕಾತಿಗೆ ಕಾನೂನು ತೊಡಕು; ಕಾನ್​ಸ್ಟೆಬಲ್ ಭರ್ತಿಗೆ ಕ್ರಮ

    ಆಕರ್ಷಣೆಗೆ ಮಿತಿಯಿರಲಿ: ಮನೋಲ್ಲಾಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts