More

    ಮೂರು ಚಿತ್ರಗಳಿಗೆ ಕಾರ್ತಿಕ್ ಆರ್ಯನ್​ ಪಡೆದ ಸಂಭಾವನೆ 75 ಕೋಟಿಯಂತೆ!

    ಮುಂಬೈ: ಒಂದೆರೆಡು ವರ್ಷಗಳ ಹಿಂದೆ ನಟ ಕಾರ್ತಿಕ್​ ಆರ್ಯನ್​ ಬಗ್ಗೆ ಹೆಚ್ಚು ಜನರಿಗೆ ಗೊತ್ತಿರಲಿಲ್ಲ. ಬಾಲಿವುಡ್​ನಲ್ಲೂ ಹೆಚ್ಚೇನು ಜನರು ಅವರ ಜತೆಗೆ ಕೆಲಸ ಮಾಡುವುದಕ್ಕೆ ಆಸಕ್ತಿ ತೋರಿಸಿರಲಿಲ್ಲ. ಈಗ ಬ್ಯಾಕ್​ ಟು ಬ್ಯಾಕ್​ ಗೆಲುವುಗಳ ನಂತರ, ಕಾರ್ತಿಕ್​ ಬಾಲಿವುಡ್​ನ ಬೇಡಿಕೆಯ ನಟರಾಗಿದ್ದಾರೆ.

    ಇದನ್ನೂ ಓದಿ: Photos: ಕೊಡಗಿನಲ್ಲಿ ಸುರಿವ ಮಳೆಯಲ್ಲಿಯೇ ಉಪ್ಪಿ ಬರ್ತ್​​ಡೇ ಸಂಭ್ರಮ..

    ಅವರ ಬೇಡಿಕೆ ಎಷ್ಟಿದೆಯೆಂದರೆ, ಎರೋಸ್​ ಇಂಟರ್​ನ್ಯಾಷನಲ್​ ಸಂಸ್ಥೆಯು ಕಾರ್ತಿಕ್​ ಜತೆಗೆ ಚಿತ್ರ ಮಾಡುವುದಕ್ಕೆ ಮುಂದಾಗಿದ್ದು, ಮೂರು ಚಿತ್ರಗಳಿಗೆ ಬುಕ್​ ಮಾಡಿದೆಯಂತೆ. ಈ ಮೂರು ಚಿತ್ರಗಳಿಗೆ ಕಾರ್ತಿಕ್​ಗೆ ಎರೋಸ್​ ಆಫರ್​ ಮಾಡಿರುವ ಮೊತ್ತ 75 ಕೋಟಿ ಎಂದು ಹೇಳಲಾಗುತ್ತಿದೆ.

    ಹೌದು, ಎರೋಸ್​ ಇಂಟರ್​ನ್ಯಾಷನಲ್​ ಜತೆಗೆ ಕಾರ್ತಿಕ್​ ಒಂದು ಒಪ್ಪಂದ ಮಾಡಿಕೊಂಡಿದ್ದು, ಈ ಒಪ್ಪಂದದ ಪ್ರಕಾರ ಮೂರು ಚಿತ್ರಗಳನ್ನು ಮಾಡಿಕೊಡಬೇಕಂತೆ. ಈ ಮೂರು ಚಿತ್ರಗಳಲ್ಲಿ ನಟಿಸುವುದಕ್ಕೆ ಕಾರ್ತಿಕ್​ 75 ಕೋಟಿ ಪಡೆದಿದ್ದು, ಒಂದೊಂದು ಚಿತ್ರಕ್ಕೆ 25 ಕೋಟಿಯಷ್ಟು ಸಂಭಾಷನೆ ಪಡೆಯುವಷ್ಟು ಬೆಳೆದಿದ್ದಾರೆ ಎಂಬ ಸುದ್ದಿ ಇದೆ.

    ಇದಕ್ಕೂ ಮುನ್ನ, ಕಾರ್ತಿಕ್​ ತಮ್ಮ ಚಿತ್ರಗಳಿಗೆ ಆರರಿಂದ ಎಂಟು ಕೋಟಿ ಪಡೆಯುತ್ತಿದ್ದರಂತೆ. ಆದರೆ, ಇತ್ತೀಚೆಗೆ ಅವರ ಚಿತ್ರಗಳು ಯಶಸ್ವಿಯಾಗಿದ್ದರಿಂದ, ಎರೋಸ್​ ಸಂಸ್ಥೆಯು ಅವರನ್ನು ಅಷ್ಟು ಕೊಟ್ಟು ಬುಕ್​ ಮಾಡಿದೆಯಂತೆ. ಒಂದು ಚಿತ್ರಕ್ಕೆ 25 ಕೋಟಿಯಾದರೂ, ಕಾರ್ತಿಕ್​ ಅವರ ಸಂಭಾವನೆ ಮೂರು ಪಟ್ಟು ಹೆಚ್ಚಾಗಿರುವುದು ವಿಶೇಷ.

    ಇದನ್ನೂ ಓದಿ: ಅನುರಾಗ್​ ಅವರಿಂದ ಈ ಮಾತು ನಿರೀಕ್ಷಿಸಿರಲಿಲ್ಲ … ರವಿಕಿಶನ್​ ಬೇಸರ

    ಸದ್ಯ ಕಾರ್ತಿಕ್​ ಆರ್ಯನ್​ ಕೈಯಲ್ಲಿ ಮೂರು ದೊಡ್ಡ ಚಿತ್ರಗಳಿವೆ. ‘ಭೂಲ್​ ಬುಲಯ್ಯ 2’, ‘ದೋಸ್ತಾನಾ 2’ ಮತ್ತು ‘ಅಲಾ ವೈಕುಂಠಪುರಂಲೋ’ ಚಿತ್ರದ ಹಿಂದಿ ರೀಮೇಕ್​ಗಳಲ್ಲಿ ನಟಿಸುತ್ತಿರುವ ಕಾರ್ತಿಕ್​, ಈ ಚಿತ್ರದ ಕೆಲಸಗಳನ್ನು ಮುಗಿಸಿದ ನಂತರ ಎರೋಸ್​ ಇಂಟರ್​ನ್ಯಾಷನಲ್​ ಸಂಸ್ಥೆಗೆ ಚಿತ್ರ ಮಾಡಿಕೊಡಲಿದ್ದಾರೆ.

    PHOTOS| ಬಾಡಿ ಬಿಲ್ಡಿಂಗ್​ನಲ್ಲಿ ಅಪ್ಪ ಸೋನು ಸೂದ್​ರನ್ನೇ ಮೀರಿಸುತ್ತಿದ್ದಾನೆ ಮಗ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts