More

    ಮಾಧ್ಯಮ ಧ್ವನಿ ಅಡಗಿಸುವ ಪ್ರಯತ್ನ

    ದೇವದುರ್ಗ: ಪಶ್ಚಿಮ ಬಂಗಾಳದಲ್ಲಿ ಅತ್ಯಾಚಾರ ಘಟನೆ ಕುರಿತು ವರದಿ ಮಾಡುತ್ತಿದ್ದ ಖಾಸಗಿ ಸುದ್ದಿವಾಹಿನಿ ವರದಿಗಾರ ಸಂತುಪನ್ ಬಂಧನ ಮಾಡಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಪಟ್ಟಣದ ಮಿನಿವಿಧಾನಸೌಧ ಮುಂದೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬುಧವಾರ ಪ್ರತಿಭಟನೆ ನಡೆಸಿತು.

    ಪತ್ರಕರ್ತ ಬಂಧನ ಖಂಡನೀಯ

    ಪಶ್ಚಿಮ ಬಂಗಾಳದ ಸಂದೇಶ ಕಾಲಿಯಲ್ಲಿ ಜರುಗಿದ ಮಹಿಳೆ ಮೇಲಿನ ಅತ್ಯಾಚಾರ ಘಟನೆ ಬಗ್ಗೆ ವರದಿಗಾರ ಸಂತುಪನ್ ವರದಿ ಮಾಡುತ್ತಿದ್ದರು. ಈ ವೇಳೆ ಅಲ್ಲಿನ ಪೊಲೀಸರು ಯಾವುದೇ ಕಾರಣ ನೀಡದೆ ವರದಿಗಾರರನ್ನು ಬಂಧಿಸಿದ್ದರು. ಮಾಧ್ಯಮ ರಂಗ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದೆ. ಆದರೆ, ಆಡಳಿತ ನಡೆಸುವಂಥ ಸರ್ಕಾರಗಳು ಮಾಧ್ಯಮ ರಂಗದ ಮೇಲೆ ಪದೇಪದೆ ದಬ್ಬಾಳಿಕೆ ನಡೆಸುತ್ತಿರುವುದು ಖಂಡನೀಯ.

    ಇದನ್ನೂ ಓದಿ: ಗಲ್ಲಿ ಕ್ರಿಕೆಟ್ ಆಡಿದ ಸಚಿನ್ ತೆಂಡೂಲ್ಕರ್; ವಿಡಿಯೋ ವೈರಲ್

    ಸಂದೇಶ ಕಾಲಿಯಲ್ಲಿ ಮಹಿಳೆ ಮೇಲೆ ಅತ್ಯಾಚಾರ ಘಟನೆ ನಡೆದಿದ್ದು ದೇಶಾದ್ಯಂತ ಹೋರಾಟ ನಡೆಯುತ್ತಿದೆ. ಮಮತಾ ಬ್ಯಾನರ್ಜಿ ಸರ್ಕಾರ ವರದಿಗಾರನನ್ನು ಬಂಧನ ಮಾಡುವ ಮೂಲಕ ಮಾಧ್ಯಮ ಧ್ವನಿ ಅಡಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದ್ದು, ನಿರ್ಭೀತಿಯಿಂದ ಕೆಲಸ ಮಾಡದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕೂಡಲೇ ಬಂಧನ ಮಾಡಿರುವ ವರದಿಗಾರರನ್ನು ಬಿಡುಗಡೆ ಮಾಡಬೇಕು. ಅವರ ಮೇಲೆ ದಾಖಲಾದ ಪ್ರಕರಣ ಕೈಬಿಡಬೇಕು. ಮಾಧ್ಯಮ ರಂಗ ಸ್ವತಂತ್ರ್ಯವಾಗಿ ಕೆಲಸ ಮಾಡಲು ಸ್ಥಾಪಿತ ಸರ್ಕಾರಗಳು ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿ ಗ್ರೇಡ್-2 ತಹಸೀಲ್ದಾರ್ ವೆಂಕಟೇಶಗೆ ಮನವಿ ಸಲ್ಲಿಸಿದರು. ವರದಿಗಾರರಾದ ಬಂದೇನವಾಜ್ ನಾಗಡದಿನ್ನಿ, ಬಸವರಾಜ ನಾಯಕ ಮಸ್ಕಿ, ಮಲ್ಲೇಶ ಮಾಶೆಟ್ಟಿ, ಯಮನಪ್ಪ ಗೌಡಗೇರ್, ಆನಂದಗುಡಿ, ಅಸನ್ ಅಂಜಳ, ರಾಮಣ್ಣ ನಾಯಕ ಡಿ.ಕರಡಿಗುಡ್ಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts