More

    ರಾಜ್ಯದಲ್ಲಿ ಸ್ಥಾಪನೆ ಆಗಲಿದೆ ತಾಯಂದಿರ ಎದೆಹಾಲಿನ ಬ್ಯಾಂಕ್​

    ಬೆಂಗಳೂರು: ಸಿಎಂ ಯಡಿಯೂಪ್ಪರಪ್ಪ ಇಂದು ಮಂಡಿಸಿದ ರಾಜ್ಯ ಬಜೆಟ್​ನಲ್ಲಿ ಆರೋಗ್ಯ ಕ್ಷೇತ್ರದ ಉನ್ನತೀಕರಣಕ್ಕೆ ಹಲವು ಯೋಜನೆಗಳು ಘೋಷಣೆಯಾಗಿವೆ. ತಾಯಿ ಮತ್ತು ಶಿಶು ಮರಣ ಪ್ರಮಾಣ ಇಳಿಕೆಗೆ ಒತ್ತು ನೀಡಿರುವ ರಾಜ್ಯ ಸರ್ಕಾರ, ಜನರ ಆರೋಗ್ಯದ ಹಿತದೃಷ್ಟಿಯಿಂದ ನಾನಾ ಕಾರ್ಯಕ್ರಮಕ್ಕೆ ಆದ್ಯತೆ ನೀಡಿದೆ.

    • ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೇಲ್ದರ್ಜೆ: ರಾಜ್ಯದಲ್ಲಿ ಆರೋಗ್ಯ ಸೇವೆ ಬಲಪಡಿಸಲು ಹೆಚ್ಚು ಕಾರ್ಯ ಒತ್ತಡವಿರುವ 250 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೌಲಭ್ಯಗಳನ್ನು ಹೆಚ್ಚಿಸಿ ಹಂತ ಹಂತವಾಗಿ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲು ಕ್ರಮ.
    • ಶಿಶು ಮರಣ ತಡೆಗೆ ಕ್ರಮ: ಅನಿಯಂತ್ರಿತ ಮತ್ತು ಅವೈಜ್ಞಾನಿಕ ಔಷಧ ಬಳಕೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆ ನಿವಾರಣೆಗೆ ಒಂದು ಕೋಟಿ ರೂ. ವೆಚ್ಚದಲ್ಲಿ ಆ್ಯಂಟಿ ಮೈಕ್ರೋಬಿಯಲ್ ರೆಸಿಸ್ಟೆನ್ಸ್ ಘಟಕ ಪ್ರಾರಂಭ. 2030ರ ವೇಳೆಗೆ ತಾಯಂದಿರ ಮರಣ ಪ್ರಮಾಣವನ್ನು 92 ರಿಂದ 70ಕ್ಕೆ ಹಾಗೂ ಶಿಶು ಮರಣ ಪ್ರಮಾಣ 23ರಿಂದ 10ಕ್ಕೆ ಇಳಿಸಲು ಕ್ರಮ.
    • ಪ್ರಯೋಗಾಲಯ: ನವಜಾತ ಶಿಶುಗಳಲ್ಲಿ ಅನುವಂಶೀಯ ಮೆಟಾಬಾಲಿಕ್ ಕಾಯಿಲೆಗಳ ಆರಂಭಿಕ ಹಂತದ ಪತ್ತೆಗೆ ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಪ್ರಯೋಗಾಲಯ ಸ್ಥಾಪನೆ.
    • ಎದೆಹಾಲಿನ ಬ್ಯಾಂಕ್: ತಾಯಿ ಹಾಲು ಕೊರತೆ ಇರುವ ನವಜಾತ ಶಿಶುಗಳಿಗಾಗಿ ರಾಜ್ಯದ ನಾಲ್ಕು ವಿಭಾಗಗಳಲ್ಲಿ 2.5 ಕೋಟಿ ರೂ. ವೆಚ್ಚದಲ್ಲಿ ‘ತಾಯಂದಿರ ಎದೆಹಾಲಿನ ಬ್ಯಾಂಕ್’ ಸ್ಥಾಪನೆ.
    • ‘ಚಿಗುರು’ ಕಾರ್ಯಕ್ರಮ: ತಾಯಿ ಮತ್ತು ಮಕ್ಕಳ ಆರೋಗ್ಯಕ್ಕಾಗಿ ಗರ್ಭಾವಸ್ಥೆಯಲ್ಲಿಯೇ ಸಮಸ್ಯೆ ಪತ್ತೆಹಚ್ಚಲು ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಉತ್ತೇಜಿಸಲು 10 ಕೋಟಿ ರೂ. ವೆಚ್ಚದಲ್ಲಿ ‘ಚಿಗುರು’ ಕಾರ್ಯಕ್ರಮ ಆರಂಭ.
    • ಆಯುಷ್ ಕಾರ್ಯಕ್ರಮ: ಭಾರತೀಯ ವೈದ್ಯ ಪದ್ಧತಿ ಉತ್ತೇಜಿಸಲು ಹಾಗೂ ಸಂಶೋಧನೆ ಪ್ರೋತ್ಸಾಹಿಸಲು ಶಿವಮೊಗ್ಗದ ಅಯುರ್ವೇದ ಕಾಲೇಜುನ್ನು ಆಯುಷ್ ವಿಶ್ವವಿದ್ಯಾಲಯವನ್ನಾಗಿ ಮೇಲ್ದರ್ಜೆಗೇರಿಸುವುದು.
    • ಪೋಷಣೆ ಮತ್ತು ಜೀವನೋಪಾಯ ಕಾರ್ಯಕ್ರಮ: ಅಪೌಷ್ಟಿಕತೆ ಹೊಂದಿರುವ ತಾಯಿ ಹಾಗೂ ಮಗುವಿನ ರಕ್ಷಣೆಗೆ 5 ಕೋಟಿ ರೂ. ವೆಚ್ಚದಲ್ಲಿ ಭಾರತೀಯ ವೈದ್ಯ ಪದ್ಧತಿಯಲ್ಲಿ ‘ಪೋಷಣೆ ಮತ್ತು ಜೀವನೋಪಾಯ’ ಕಾರ್ಯಕ್ರಮ ಪ್ರಾರಂಭ.
    • ತುರ್ತು ಚಿಕಿತ್ಸೆ: ಬೆಂಗಳೂರು, ಮೈಸೂರು, ಬಳ್ಳಾರಿ ಮತ್ತು ಹುಬ್ಬಳಿ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ತುರ್ತು ಚಿಕಿತ್ಸಾ ವಿಭಾಗ ಪ್ರಾರಂಭ.
    • ಪ್ರಾದೇಶಿಕ ಕ್ಯಾನ್ಸರ್ ಆಸ್ಪತ್ರೆ ಆರಂಭ: ಶಿವಮೊಗ್ಗ ಮತ್ತು ಮೈಸೂರಿನಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಕಿದ್ವಾಯಿ ಸಂಸ್ಥೆ ಮಾದರಿಯ ಪ್ರಾದೇಶಿಕ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳ ಆರಂಭ. ಮಹಿಳೆಯರಲ್ಲಿ ಕ್ಯಾನ್ಸರ್ ರೋಗ ಪತ್ತೆಗಾಗಿ 11 ಕೋಟಿ ರೂ. ವೆಚ್ಚದಲ್ಲಿ ಮೂರು ಸುಸಜ್ಜಿತ ಸಂಚಾರಿ ಪ್ರಯೋಗಾಲಯಗಳ ಸೌಲಭ್ಯ.
    • ಹೃದ್ರೋಗ ಆಸ್ಪತ್ರೆ: ದಾವಣಗೆರೆಯಲ್ಲಿ 20 ಕೋಟಿ ರೂ. ವೆಚ್ಚದಲ್ಲಿ 50 ಹಾಸಿಗೆ ಸಾಮರ್ಥ್ಯದ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ ಉಪಕೇಂದ್ರ ಪ್ರಾರಂಭ ಹಾಗೂ ಕಲಬುರಗಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸುಟ್ಟ ಗಾಯಗಳ ಚಿಕಿತ್ಸಾ ಕೇಂದ್ರ ಮತ್ತು ಪ್ಲಾಸ್ಟಿಕ್ ಸರ್ಜರಿ ವಿಭಾಗ ಪ್ರಾರಂಭಕ್ಕೆ ಕ್ರಮ.

    ಒಕ್ಕಲಿಗರ ನಿಗಮಕ್ಕೆ 500 ಕೋಟಿ ರೂ. ಮೀಸಲಿಟ್ಟ ಸಿಎಂ: ಆದಿಚುಂಚನಗಿರಿ ಶ್ರೀಗಳ ಸಂತಸ

    ಸಿನಿಮಾ ಕ್ಷೇತ್ರಕ್ಕೂ ವಿಆರ್​ಎಲ್​ ಸಂಸ್ಥೆ ಎಂಟ್ರಿ!

    ಅಕ್ಕನ ಕಣ್ಣೆದುರಲ್ಲೇ ಭಾವನ ಕಿವಿ ಕಚ್ಚಿ ತುಂಡರಿಸಿದ ಬಾಮೈದುನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts