More

    ಪೃಥ್ವಿ ಷಾ ಭರ್ಜರಿ ಶತಕ, ಸೆಮೀಸ್‌ನಲ್ಲಿ ಮುಂಬೈ ವಿರುದ್ಧ ಕರ್ನಾಟಕಕ್ಕೆ ನಿರಾಸೆ

    ನವದೆಹಲಿ: ಭರ್ಜರಿ ಲಯದಲ್ಲಿ ಮುನ್ನಡೆಯುತ್ತಿದ್ದ ಹಾಲಿ ಚಾಂಪಿಯನ್ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯ ಸೆಮಿಫೈನಲ್‌ನಲ್ಲಿ ಎಡವಿದೆ. ನಾಯಕ ಪೃಥ್ವಿ ಷಾ (165 ರನ್, 122 ಎಸೆತ, 17 ಬೌಂಡರಿ, 7 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ನಿರ್ವಹಣೆ ಎದುರು ಬೆದರಿದ ಕರ್ನಾಟಕ ತಂಡ ಮುಂಬೈ ವಿರುದ್ಧ 72 ರನ್‌ಗಳಿಂದ ಶರಣಾಯಿತು. ಈ ಮೂಲಕ ಕರೊನಾ ಕಾಲದ ದೇಶೀಯ ಕ್ರಿಕೆಟ್ ಋತುವಿನಲ್ಲಿ ಕರ್ನಾಟಕ ತಂಡ ಪ್ರಶಸ್ತಿ ಗೆಲುವಿಲ್ಲದೆ ಅಭಿಯಾನ ಮುಗಿಸಿದೆ. ಈ ಮುನ್ನ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಕರ್ನಾಟಕ ಕ್ವಾರ್ಟರ್​ಫೈನಲ್‌ನಲ್ಲಿ ಹೊರಬಿದ್ದಿತ್ತು.

    ಪಾಲಂನ ಏರ್‌ೆರ್ಸ್ ಕಾಂಪ್ಲೆಕ್ಸ್ ಮೈದಾನದಲ್ಲಿ ಗುರುವಾರ ನಡೆದ ಉಪಾಂತ್ಯದ ಹೋರಾಟದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಮುಂಬೈ ತಂಡಕ್ಕೆ ಪೃಥ್ವಿ ಷಾ ಭದ್ರ ಬುನಾದಿ ಹಾಕಿಕೊಟ್ಟರು. ಆದರೆ ಕೊನೇ 10 ಓವರ್‌ಗಳಲ್ಲಿ ಮುಂಬೈಗೆ ದಿಟ್ಟ ತಿರುಗೇಟು ಕೊಟ್ಟ ಕರ್ನಾಟಕ ತಂಡ ಕೇವಲ 13 ರನ್ ಅಂತರದಲ್ಲಿ ಕೊನೆಯ 5 ವಿಕೆಟ್ ಕಬಳಿಸುವ ಮೂಲಕ 49.2 ಓವರ್‌ಗಳಲ್ಲಿ 322 ರನ್‌ಗೆ ಆಲೌಟ್ ಮಾಡಿತು. ಪ್ರತಿಯಾಗಿ ದೇವದತ್ ಪಡಿಕಲ್ (64) ಸಿಡಿಸಿದ ಸತತ 7ನೇ ಪ್ಲಸ್ ಗಳಿಕೆಯ ನಡುವೆಯೂ ಇತರ ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಲ್ಯದಿಂದಾಗಿ ಕರ್ನಾಟಕ ತಂಡ 42.4 ಓವರ್‌ಗಳಲ್ಲಿ 250 ರನ್‌ಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.

    ಇದನ್ನೂ ಓದಿ: ಐಸಿಸಿ ಸಿಇಒ ಮನು ಸಾವ್ನೆಗೆ ರಜೆಯ ಸಜೆ ನೀಡಿದ್ದೇಕೆ ಗೊತ್ತೇ?

    ಮುಂಬೈ: 49.2 ಓವರ್‌ಗಳಲ್ಲಿ 322 (ಪೃಥ್ವಿ ಷಾ 165, ಜೈಸ್ವಾಲ್ 6, ಆದಿತ್ಯ ತಾರೆ 16, ಶಿವಂ ದುಬೆ 27, ಮುಲಾನಿ 45, ವೈಶಾಕ್ 56ಕ್ಕೆ 4, ಪ್ರಸಿದ್ಧಕೃಷ್ಣ 64ಕ್ಕೆ 3, ರೋನಿತ್ 61ಕ್ಕೆ 1), ಕರ್ನಾಟಕ: 42.4 ಓವರ್‌ಗಳಲ್ಲಿ 250 (ದೇವದತ್ ಪಡಿಕಲ್ 64, ಸಮರ್ಥ್ 8, ಸಿದ್ಧಾರ್ಥ್ ಕೆವಿ 8, ಮನೀಷ್ ಪಾಂಡೆ 1, ಕರುಣ್ ನಾಯರ್ 29, ಶ್ರೇಯಸ್ ಗೋಪಾಲ್ 33, ಬಿಆರ್ ಶರತ್ 61, ಕೆ. ಗೌತಮ್ 28, ತುಷಾರ್ ದೇಶಪಾಂಡೆ 37ಕ್ಕೆ 2, ತನುಷ್ 23ಕ್ಕೆ 2, ಸೋಲಂಕಿ 61ಕ್ಕೆ 2, ಮುಲಾನಿ 47ಕ್ಕೆ 2).

    *ಫೈನಲ್ ಪಂದ್ಯ
    ಮುಂಬೈ-ಉತ್ತರ ಪ್ರದೇಶ
    ಯಾವಾಗ: ಭಾನುವಾರ
    ಎಲ್ಲಿ: ಅರುಣ್ ಜೇಟ್ಲಿ ಮೈದಾನ, ನವದೆಹಲಿ.
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್2.

    ಭಾರತಕ್ಕೆ ಟಿ20, ಏಕದಿನ ರ‌್ಯಾಂಕಿಂಗ್‌ನಲ್ಲಿ ವಿಶ್ವ ನಂ. 1 ಪಟ್ಟಕ್ಕೇರುವ ಅವಕಾಶ!

    ಐಪಿಎಲ್‌ಗೂ ಕರೊನಾ ಹೊಡೆತ, ಬ್ರಾಂಡ್ ಮೌಲ್ಯ ಶೇ. 3.6 ಕುಸಿತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts