ಮತಎಣಿಕೆ ನಡುವೆಯೇ ಆಪರೇಷನ್​ ಹಸ್ತ: ಮಾಲೂರು ಪಕ್ಷೇತರ ಅಭ್ಯರ್ಥಿಗೆ ಕಾಂಗ್ರೆಸ್​ ಗಾಳ

Hudi Vijayakumar

ಕೋಲಾರ: ಮತಎಣಿಕೆಯ ಮಧ್ಯೆಯೇ ಕಾಂಗ್ರೆಸ್​ ಆಪರೇಷನ್​ ಹಸ್ತಕ್ಕೆ ಕೈಹಾಕಿದ್ದು, ಮಾಲೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಹೂಡಿ ವಿಜಯಕುಮಾರ್​ಗೆ ಗಾಳ ಹಾಕಿದೆ.

ಹೂಡಿ ವಿಜಯಕುಮಾರ್ ಅವರು ಮಾಲೂರು ಕ್ಷೇತ್ರದಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಸದ್ಯ ಕೈ ಮುಖಂಡರು ವಿಜಯಕುಮಾರ್​ ಸಂಪರ್ಕಕ್ಕೆ ಯತ್ನಿಸಿದ್ದಾರೆ. ಇತ್ತ ಗೆಲುವಿನ ನಿರೀಕ್ಷೆಯಲ್ಲಿರುವ ವಿಜಯಕುಮಾರ್​ ಟೆಂಪಲ್ ರನ್ ಮಾಡುತ್ತಿದ್ದಾರೆ. ಮುಳಬಾಗಿಲಿನ ಕುರುಡುಮಲೆಯ‌ ವಿನಾಯಕ ದೇವರ ದರ್ಶನ ಪಡೆಯುತ್ತಿದ್ದಾರೆ.

ಕಾಂಗ್ರೆಸ್​ ಮ್ಯಾಜಿಕ್​ ನಂಬರ್​ ದಾಟಿದ್ದು, ಪಕ್ಷೇತರರನ್ನು ಜೊತೆಗೆ ಸೇರಿಸಿಕೊಂಡು ಸುಭದ್ರ ಸರ್ಕಾರ ರಚನೆ ಮಾಡುವ ನಿಟ್ಟಿನಲ್ಲಿ ಗೆಲುವು ಸಾಧಿಸಲಿರುವ ಪಕ್ಷೇತರ ಅಭ್ಯರ್ಥಿಗಳಿಗೆ ಕೈ ಗಾಳಹಾಕಿದೆ.

ಕಾಂಗ್ರೆಸ್​ ಅಭ್ಯರ್ಥಿಗಳ ಸ್ಥಳಾಂತರಕ್ಕೆ ಸಿದ್ಧತೆ

ಕುದುರೆ ವ್ಯಾಪಾರದ ಭೀತಿಯಿಂದ ಗೆಲ್ಲುವ ಅಭ್ಯರ್ಥಿಗಳನ್ನು ಇಂದು ಸಂಜೆ ವೇಳೆ ಬೇರೆ ರಾಜ್ಯಗಳ ಹೋಟೆಲ್​ಗೆ ಸ್ಥಳಾಂತರ ಮಾಡಲು ಕಾಂಗ್ರೆಸ್​ ಮುಂದಾಗಿದೆ. ಗೆಲ್ಲುವ ಅಭ್ಯರ್ಥಿಗಳನ್ನು ಕರೆತರುವ ಜವಬ್ದಾರಿಯನ್ನು ಕೆಪಿಸಿಸಿ ಪದಾಧಿಕಾರಿಗಳಿಗೆ ನೀಡಲಾಗಿದೆ. ಇಂದು ಸಂಜೆಯೊಳಗೆ ಎಲ್ಲರನ್ನು ಕರೆತಂದು ರಾಜಸ್ಥಾನ, ಛತ್ತೀಸಗಢ, ತಮಿಳುನಾಡಿನ ಹೋಟೆಲ್​ಗಳಲ್ಲಿ ಇರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂಬ ಸುದ್ದಿ ಕಾಂಗ್ರೆಸ್​ ವಲಯದಿಂದ ಕೇಳಿಬಂದಿದೆ.

ಚುನಾವಣಾ ಫಲಿತಾಂಶದ ಸದ್ಯದ ಟ್ರೆಂಡ್​ ಪ್ರಕಾರ ಕಾಂಗ್ರೆಸ್​ 118 ಸ್ಥಾನಗಳಲ್ಲಿ ಮುಂದಿದ್ದರೆ, ಬಿಜೆಪಿ 72 ಮತ್ತು ಜೆಡಿಎಸ್​ 27 ಹಾಗೂ ಇತರೆ 7 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಕರ್ನಾಟಕವು ಒಟ್ಟು 224 ವಿಧಾನಸಭಾ ಸ್ಥಾನಗಳನ್ನು ಹೊಂದಿದೆ. ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷಗಳಾದ ಕಾಂಗ್ರೆಸ್​ ಮತ್ತು ಜೆಡಿಎಸ್​ ನಡುವೆ ಪೈಪೋಟಿ ನಡೆದಿದೆ. ಯಾವುದೇ ಪಕ್ಷ ರಾಜ್ಯದಲ್ಲಿ ಅಧಿಕಾರ ರಚನೆ ಮಾಡಲು 113 ಸ್ಥಾನಗಳ ಸ್ಪಷ್ಟ ಬಹುಮತವನ್ನು ಪಡೆಯಬೇಕಿದೆ. ಒಂದು ವೇಳೆ ಯಾರಿಗೂ ಬಹುಮತ ಬರದಿದ್ದರೆ ಮತ್ತೆ ಅತಂತ್ರ ಸರ್ಕಾರ ರಚನೆಯಾಗಲಿದೆ.

2018ರ ಫಲಿತಾಂಶ ಏನಿತ್ತು?

2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಬಹುಮತ ದೊರೆಯಲಿಲ್ಲ. ಉಳಿದಂತೆ ಕಾಂಗ್ರೆಸ್​ 80 ಮತ್ತು ಜೆಡಿಎಸ್​ 37 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಬಳಿಕ ಕಾಂಗ್ರೆಸ್​ ಮತ್ತು ಜೆಡಿಎಸ್​ ಸೇರಿ ಮೈತ್ರಿ ಸರ್ಕಾರ ರಚನೆ ಮಾಡಿತ್ತು. ಈ ಸರ್ಕಾರ ಕೇವಲ ಒಂದು ವರ್ಷ ಮಾತ್ರ ಪೂರೈಸಿತು. ಬದಲಾದ ರಾಜಕೀಯ ಚಿತ್ರಣದಲ್ಲಿ ಮೈತ್ರಿ ಸರ್ಕಾರದ 17 ಶಾಸಕರು ಬಿಜೆಪಿ ಜತೆ ಕೈಜೋಡಿಸಿದ್ದರಿಂದ ಬಿಜೆಪಿ ಸರ್ಕಾರ ರಚನೆ ಮಾಡಿತು.

ಕುದುರೆ ವ್ಯಾಪಾರ ಭೀತಿ: ಗೆಲ್ಲುವ ಅಭ್ಯರ್ಥಿಗಳನ್ನು ಹೋಟೆಲ್​ಗೆ ಶಿಫ್ಟ್​ ಮಾಡಲು ಕಾಂಗ್ರೆಸ್​ ತಯಾರಿ

Share This Article

Psychology : ಪ್ಯಾಂಟ್ ಜೇಬಿನಲ್ಲಿ ಕೈ ಹಾಕಿಕೊಂಡು ನಡೆಯುವ ಅಭ್ಯಾಸ ನಿಮಗಿದೆಯೇ? ಇದು ನಿಮ್ಮ ವ್ಯಕ್ತಿತ್ವ

Psychology: ಸಾಮಾನ್ಯವಾಗಿ ನೀವು ಅನೇಕ ಜನರು ತಮ್ಮ ಜೇಬಿನಲ್ಲಿ ಕೈ ಹಾಕಿಕೊಂಡು ತಿರುಗಾಡುವುದನ್ನು ನೋಡುತ್ತೀರಿ. ಇದು…

Health Benefits : ಕೆಮ್ಮು, ನೆಗಡಿ ಕೇವಲ ಎರಡೇ ನಿಮಿಷದಲ್ಲಿ ಗುಣವಾಗುತ್ತದೆ..ಹೀಗೆ ಮಾಡಿ ನೋಡಿ

Health Benefits : ಕೆಲವು ಜನರು ಕೆಮ್ಮು ಮತ್ತು ಶೀತದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಲವರಿಗೆ ವಾರಗಟ್ಟಲೆ…

ಮನೆಯಲ್ಲೇ ಗಟ್ಟಿ ಮೊಸರು ಮಾಡುವ ವಿಧಾನ ನಿಮಗೆ ತಿಳಿದಿದೆಯೇ; ಇಲ್ಲಿದೆ ಸಿಂಪಲ್ ಟ್ರಿ​ಕ್ಸ್​​​​​ | Health Tips

ಚಳಿಗಾಲವಿರಲಿ, ಬೇಸಿಗೆಯಿರಲಿ ಮೊಸರನ್ನು ಇಷ್ಟಪಡುವವರು ಹವಾಮಾನ ಬದಲಾದಾಗಲೂ ಅದನ್ನು ತಿನ್ನುವುದನ್ನು ನಿಲ್ಲಿಸುವುದಿಲ್ಲ. ಚಳಿ ಹೆಚ್ಚಾದಾಗಲೂ ಅನೇಕರು…