More

    ರಾಜ್ಯದಲ್ಲಿ ಯುವ ಜನರ ಮೇಲೆ ಕರೊನಾ ಮುನಿಸು- ಅಧಿಕ ಪ್ರಕರಣ ದಾಖಲು!

    ಬೆಂಗಳೂರು: ದಾವಣಗೆರೆಯಲ್ಲಿ ನಿನ್ನೆ ಪತ್ತೆಯಾಗಿರುವ 21 ಹೊಸ ಸೋಂಕು ಪ್ರಕರಣಗಳ ಪೈಕಿ ಹೆಚ್ಚಿನವರು 40 ವರ್ಷಕ್ಕಿಂತ ಕಡಿಮೆ ವಯೋಮಾನದವರಿರುವ ಕಾರಣ, ಯುವ ಸಮೂಹದಲ್ಲಿ ಆತಂಕ ಸೃಷ್ಟಿಯಾಗಿದೆ. ಜತೆಗೆ, ರಾಜ್ಯದಲ್ಲಿ ನಿನ್ನೆ ಸಂಜೆಯಿಂದ ಇಲ್ಲಿಯವರೆಗೆ ಪತ್ತೆಯಾಗಿರುವ ಪ್ರಕರಣಗಳಲ್ಲಿಯೂ ಯುವಕರ ಸಂಖ್ಯೆಯೇ ಹೆಚ್ಚಾಗಿದೆ.

    ದಾವಣಗೆರೆಯ 7 ವರ್ಷದ ಬಾಲಕ ಹಾಗೂ 12 ವರ್ಷದ ಬಾಲಕಿಯೂ ಸೋಂಕುಪೀಡಿತರಾಗಿದ್ದಾರೆ. ಉಳಿದ ಸೋಂಕಿತರ ಪೈಕಿ 11 ಮಂದಿ ಪುರುಷರಾಗಿದ್ದರೆ, 8 ಮಂದಿ ಸ್ತ್ರೀಯರು.

    ದಾವಣಗೆರೆ ಹೊರತುಪಡಿಸಿದರೆ ಚಿಕ್ಕಬಳ್ಳಾಪುರದ 30 ವರ್ಷದ ಯುವಕ, ಮಂಡ್ಯದ 19 ಮತ್ತು 20 ವರ್ಷದ ಯುವತಿಯರು, ಹಾವೇರಿ ಜಿಲ್ಲೆಯ ಸವಣೂರಿನ 32 ವರ್ಷದ ಯುವಕ, ಕಲಬುರಗಿ ಜಿಲ್ಲೆಯ ಚಿಂಚೋಳಿಯ 37, ಕಲಬುರಗಿಯ 36 ಹಾಗೂ ವಿಜಯಪುರದ 62 ವರ್ಷದ ವ್ಯಕ್ತಿಗಳಲ್ಲಿ ಸೋಂಕು ಪತ್ತೆಯಾಗಿದೆ.

    ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 642ಕ್ಕೆ ಏರಿದೆ. ಈಗಾಗಲೇ 304 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 26 ಮಂದಿ ಮೃತಪಟ್ಟಿದ್ದಾರೆ.

    ಇದನ್ನೂ ಓದಿ: ವಿಮಾನಕ್ಕಾಗಿ ಕಾಯ್ತಾ ಇದ್ದೀರಾ? ಬೆಲೆ ನೋಡೋ ಮೊದ್ಲು ಎದೆ ಗಟ್ಟಿ ಮಾಡ್ಕೊಳಿ

    ನಿಜಾಮುದ್ದೀನ್‌ ಮರ್ಕಜ್‌ ಮಸೀದಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿರುವ ಪ್ರತಿಯೊಬ್ಬರೂ ಉಚಿತ ಆರೋಗ್ಯ ಸಹಾಯವಾಣಿ 080-29711171 ಸಂಪರ್ಕಿಸುವಂತೆ ಸರ್ಕಾರ ಸೂಚಿಸಿದೆ.

    ಸೋಂಕಿತರ ಪ್ರಯಾಣದ ಮಾಹಿತಿ ಬೇಕಿದ್ದರೆ www.karnataka.gov.in. ಮೊಬೈಲ್‌ ಅಪ್ಲಿಕೇಷ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಸರ್ಕಾರದ ಪ್ರಕಟಣೆ ತಿಳಿಸಿದೆ. ಕರೊನಾ ವೈರಸ್‌ ಉಚಿತ ಆರೋಗ್ಯ ಸಹಾಯವಾಣಿ ಸಂಖ್ಯೆ: 104/ 9745697456.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts