More

    ವಿಮಾನಕ್ಕಾಗಿ ಕಾಯ್ತಾ ಇದ್ದೀರಾ? ಬೆಲೆ ನೋಡೋ ಮೊದ್ಲು ಎದೆ ಗಟ್ಟಿ ಮಾಡ್ಕೊಳಿ

    ಮುಂಬೈ: ಲಾಕ್​ಡೌನ್​ ಹಿನ್ನೆಲೆಯಲ್ಲಿ ದೇಶ ಹಾಗೂ ಅಂತಾರಾಷ್ಟ್ರೀಯ ವಿಮಾನಗಳು ಸ್ಥಗಿತಗೊಂಡು ಇದಾಗಲೇ ಒಂದೂವರೆ ತಿಂಗಳಾಗಿದೆ. ವಿಮಾನ ಸ್ಥಗಿತದಿಂದಾಗಿ ಎಲ್ಲಾ ದೇಶಗಳ ಆರ್ಥಿಕ ಸ್ಥಿತಿಗೆ ಭಾರಿ ಪೆಟ್ಟು ಬೀಳುತ್ತಿದ್ದರೂ, ಕರೊನಾ ವೈರಸ್​ ಹರಡಲು ಮೂಲ ಕಾರಣವಾಗಿರುವ ವಿಮಾನಯಾನವನ್ನು ಸ್ಥಗಿತಗೊಳಿಸಲೇಬೇಕಾದ ಅನಿವಾರ್ಯತೆ ಇದೆ.

    ಆದರೆ ಒಮ್ಮೆ ಲಾಕ್​ಡೌನ್​ ಮುಗಿದ ಮೇಲೆ ವಿಮಾನಗಳು ಎಂದಿನಂತೆ ಕಾರ್ಯ ಆರಂಭಿಸಲಿವೆ. ಆದರೆ ಅದು ಹೇಳಿದಷ್ಟು ಸುಲಭವಲ್ಲ. ಏಕೆಂದರೆ ವೈರಸ್​ ಎಲ್ಲಿ, ಯಾವಾಗ, ಹೇಗೆ ಯಾರ ದೇಹವನ್ನು ಆಕ್ರಮಿಸಿಕೊಳ್ಳುತ್ತದೆಯೋ ಹೇಳಲಾಗದು. ವೈರಸ್​ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ ಎಂದುಕೊಂಡರೂ ಅದು ಬೇರೆಯವರ ದೇಹವನ್ನು ಪ್ರವೇಶಿಸುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ವಿಮಾನ ಶುರು ಮಾಡಿದರೂ ಕೆಲವೊಂದು ನಿಯಮಾವಳಿಗಳನ್ನು ರೂಪಿಸಲಾಗುತ್ತದೆ.

    ಇದನ್ನೂ ಓದಿ: ಮದುವೆಯಾಗುವಂತೆ ಅಪ್ಪ-ಅಮ್ಮ ಚಿತ್ರಹಿಂಸೆ ನೀಡುತ್ತಿದ್ದಾರೆ… ದಯವಿಟ್ಟು ನನ್ನನ್ನು ಕಾಪಾಡಿ…


    ಸೇವೆಗಳನ್ನು ಪುನರಾರಂಭಿಸಿದ ನಂತರ ವಿಮಾನ ನಿಲ್ದಾಣಗಳು ಮತ್ತು ವಿಮಾನಗಳಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳುವುದು ಅತ್ಯಗತ್ಯ. ಅದರಂತೆಯೇ ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಸಾಮಾನ್ಯ ಜನರಿಗಿಂತ ಅರ್ಧದಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಬೇಕಬೇಕಾಗುತ್ತದೆ. ಹೀಗಾಗುವುದರಿಂದ ಸಹಜವಾಗಿಯೇ ಭಾರಿ ಆರ್ಥಿಕ ಹೊಡೆತವೂ ವಿಮಾನಯಾನದ ನಂತರವೂ ಮುಂದುವರೆಯುವ ಸಾಧ್ಯತೆ ಇದೆ. ದೇಶೀಯ ವಿಮಾನಗಳಲ್ಲಿನ ಮಧ್ಯಮ ಸಾಲಿನ ಸೀಟುಗಳಿಗೆ ಬುಕಿಂಗ್ ನಿಲ್ಲಿಸಬೇಕಾಗುತ್ತದೆ.

    ಇವೆಲ್ಲವುಗಳ ಪರಿಣಾಮಗಳಿಂದ ಟಿಕೆಟ್​ ದರವನ್ನು ಹೆಚ್ಚು ಮಾಡದೇ ವಿಧಿ ಇಲ್ಲವಾಗಿದೆ.
    ಆದ್ದರಿಂದಲೇ ದೆಹಲಿ- ಬೆಂಗಳೂರು ಮಾರ್ಗಕ್ಕೆ ಕನಿಷ್ಠ 11,200 ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ. ಹಾಲಿ ಇರುವ ಬೆಲೆ ಗರಿಷ್ಠ 5,700. ಅದೇ ರೀತಿ ದೆಹಲಿ-ಮುಂಬೈ ನಡುವಿನ ವಿಮಾನಯಾನಕ್ಕೆ ಕನಿಷ್ಠ 10 ಸಾವಿರ ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ. ಈಗ ಗರಿಷ್ಠ ಐದು ಸಾವಿರ ರೂಪಾಯಿಗಳಿವೆ. ಇದೇ ರೀತಿ, ಪ್ರತಿಯೊಂದು ವಿಮಾನದ ಟಿಕೆಟ್​ ದರವನ್ನು ಡಬಲ್​ಗಿಂತ ಹೆಚ್ಚಿಗೆ ದರ ನಿಗದಿ ಮಾಡಲು ಚಿಂತಿಸಲಾಗುತ್ತಿದೆ. ಆದ್ದರಿಂದ ಏಕಾಏಕಿ ಡೇಟ್​ ಫಿಕ್ಸ್​ ಮಾಡುವ ಮೊದಲು ದರವನ್ನು ಚೆಕ್​ ಮಾಡಿಕೊಳ್ಳಿ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts