More

    ಕಾಂಗ್ರೆಸ್​ನಿಂದ 5ನೇ ಗ್ಯಾರಂಟಿ ಘೋಷಣೆ: ಎಲ್ಲ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ

    ಬೆಂಗಳೂರು: ಈವರೆಗೆ ನಾಲ್ಕು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದ ಕಾಂಗ್ರೆಸ್​ ಇದೀಗ ಐದನೇ ಗ್ಯಾರಂಟಿಯನ್ನು ಘೋಷಣೆ ಮಾಡಿದೆ.

    ಈ ಕುರಿತು ಟ್ವೀಟ್​ ಮಾಡಿರುವ ಕರ್ನಾಟಕ ಕಾಂಗ್ರೆಸ್, ಮಹಿಳಾ ಸಭಲೀಕರಣಕ್ಕೆ ನಮ್ಮ ಪಕ್ಷವೂ ಬದ್ಧವಾಗಿದೆ. ರಾಜ್ಯದ ಎಲ್ಲಾ ಮಹಿಳೆಯರಿಗೆ ಎಲ್ಲ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಭರವಸೆಯನ್ನು ನೀಡುತ್ತದೆ. ಮಹಿಳೆಯರು ಸ್ವಾವಲಂಬಿಯಾಗಿ ಸುಭದ್ರ ಭವಿಷ್ಯ ರೂಪಿಸಿಕೊಳ್ಳಲು ನಮ್ಮ ಈ ಯೋಜನೆ ಮಹತ್ತರ ಪಾತ್ರ ವಹಿಸಲಿದೆ ಎಂದು ಹೇಳಿದೆ. ಇದು ಐದನೇ ಗ್ಯಾರಂಟಿ ಎಂದು ತಿಳಿಸಿದೆ.

    ಇದನ್ನೂ ಓದಿ: ಏಪ್ರಿಲ್​ 30ರಂದು ಬೆಂಗಳೂರು-ಮೈಸೂರು ಹೆದ್ದಾರಿ ಬಂದ್​: ಬದಲಿ ಮಾರ್ಗ ಹೀಗಿದೆ….

    ಉಳಿದ ನಾಲ್ಕು ಗ್ಯಾರಂಟಿಗಳು

    ಮೊದಲನೇ ಗ್ಯಾರಂಟಿಯಾಗಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ತರುತ್ತೇವೆ ಎಂದು ಕಾಂಗ್ರೆಸ್​ ಹೇಳಿದೆ. ಈ ಮೂಲಕ ಪ್ರತಿ ತಿಂಗಳು ಮಹಿಳೆಯರಿಗೆ 2000 ರೂಪಾಯಿ ಅಕೌಂಟ್ ಸೇರಲಿದೆ ಎಂದು ಭರವಸೆ ನೀಡಿದೆ. ಎರಡನೇ ಗ್ಯಾರಂಟಿಯಾಗಿ ಮನೆ ಮನೆಗೂ 200 ಯೂನಿಟ್ ವಿದ್ಯುತ್ ಉಚಿತ ನೀಡುತ್ತಾರಂತೆ. ಮೂರನೇ ಗ್ಯಾರಂಟಿ ಏನೆಂದರೆ, ಅನ್ನ ಭಾಗ್ಯದ ಮೂಲಕ ಪ್ರತಿ ಸದಸ್ಯನಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಘೋಷಿಸಿದೆ. ನಾಲ್ಕನೇ ಗ್ಯಾರಂಟಿ ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳು 3000 ರೂ. ನೀಡಲಾಗುವುದು. ಡಿಪ್ಲೊಮಾ ಪದವೀಧರರಿಗೆ ಒಂದೂವರೆ ಸಾವಿರ ರೂಪಾಯಿ ನೀಡುತ್ತಾರಂತೆ.

    ಮೊದಲ ದಿನವೇ ತೀರ್ಮಾನ

    ಕಾಂಗ್ರೆಸ್​ ಸರ್ಕಾರ ಬಂದ ಮೊದಲ ದಿನವೇ ಈ 5 ಸ್ಕೀಮ್​ ಅನ್ನು ಮೊದಲನೇ ಕ್ಯಾಬಿನೆಟ್​ನಲ್ಲೇ ತೀರ್ಮಾನಿಸುತ್ತಾರಂತೆ. ಈಗಾಗಲೇ ಛತ್ತೀಸ್​ಗಢ ಹಾಗೂ ಹಿಮಾಚಲ ಪ್ರದೇಶದಲ್ಲಿ ನಮ್ಮ ಕಾರ್ಯಕ್ರಮ ಅನುಷ್ಠಾನ ಮಾಡಿದ್ದೇವೆ. ನಾವು ಹೇಳಿದ್ದನ್ನು ಮಾಡುತ್ತೇವೆ. ಸುಳ್ಳು ಭರವಸೆಯನ್ನು ಕೊಡುವುದಿಲ್ಲ ಎಂದು ರಾಹುಲ್​ ಗಾಂಧಿ ವಾಗ್ದಾನ ಮಾಡಿದ್ದಾರೆ.

    ಇದನ್ನೂ ಓದಿ: ಸ್ವಕ್ಷೇತ್ರದಲ್ಲಿ ಸಿಎಂ ಭರ್ಜರಿ ಮತಭೇಟೆ; ಬಾಲ್ಯದ ದಿನಗಳನ್ನು ನೆನೆದು ಬೊಮ್ಮಾಯಿ ಭಾವುಕ

    ಬಿಜೆಪಿ ಟೀಕೆ

    ಈಗಾಗಲೇ ಕಾಂಗ್ರೆಸ್​ನ 4 ಗ್ಯಾರಂಟಿಗಳನ್ನು ಬಿಜೆಪಿ ಗಳಗಂಟಿ ಎಂದು ವ್ಯಂಗ್ಯವಾಡಿದೆ. ಈಗಾಗಲೇ ಅಧಿಕಾರದಲ್ಲಿರುವ ರಾಜಸ್ಥಾನ ಮತ್ತು ಛತ್ತೀಸ್​ಗಢದಲ್ಲಿ ಕಾಂಗ್ರೆಸ್​ ಅನುಷ್ಠಾನಗೊಳಿಸಿಲ್ಲ, ರಾಜ್ಯದಲ್ಲಿ ಅದು ಹೇಗೆ ಜಾರಿಗೆ ತರುತ್ತದೆ ಎಂದು ಟೀಕಿಸಿದೆ. ಈ ಗ್ಯಾರಂಟಿಗಳನ್ನು ಜಾರಿಗೆ ತರಬೇಕಾದರೆ ಸಾಕಷ್ಟು ಅನುದಾನ ಬೇಕಾಗುತ್ತದೆ. ಕಾಂಗ್ರೆಸ್​ನ ಗ್ಯಾರೆಂಟಿಗಳಿಗೆ ವಾರಂಟಿ ಇಲ್ಲ ಎಂದು ಬಿಜೆಪಿ ಟೀಕಿಸಿದೆ.

    ತಾಳಿಕೋಟೆಯಲ್ಲಿ ಅಬ್ಬರಿಸಿದ ರಾಜಾಹುಲಿ; ಭಾವೈಕ್ಯತೆ ಸಂದೇಶ ಸಾರಿದ ಬಿಎಸ್​ವೈ

    ಮಾಜಿ ಸಿಎಂ ಸಿದ್ದು ತವರಲ್ಲಿ ಬಿಜೆಪಿ ಪ್ರಚಾರ ರಥದ ಮೇಲೆ ಕಲ್ಲು ತೂರಾಟ: ಕಾರ್ಯಕರ್ತನ ಮೇಲೆ ಹಲ್ಲೆ

    ಪ್ರಾದೇಶಿಕ ಕಚೇರಿ ಸ್ಥಾಪನೆಗೆ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಜಾಗ ಕೇಳಿದ ಕಾನೂನು ವಿವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts