More

    ಸಿಡಿ ಟೆನ್ಶನ್​: 26 ಜನಪ್ರತಿನಿಧಿಗಳು ಕೋರ್ಟ್​ಗೆ ಮೊರೆ!

    ಬೆಂಗಳೂರು: ರಮೇಶ್​ ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್​ ವಿಡಿಯೋ ರಿಲೀಸ್​ ಆಗುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿದೆ. ನೈತಿಕ ಹೊಣೆ ಹೊತ್ತು ಜಲಸಂಪನ್ಮೂಲ ಸಚಿವ ಸ್ಥಾನಕ್ಕೆ ರಮೇಶ್​ ಜಾರಕಿಹೊಳಿ ರಾಜೀನಾಮೆಯನ್ನೂ ಕೊಟ್ಟಿದ್ದಾರೆ. ಆದರೂ ರಾಜ್ಯದಲ್ಲಿ ‘ಸಿಡಿ’ಯದ್ದೇ ಸದ್ದು. ಮೂವರ, 16 ಜನರ ಸೆಕ್ಸ್​ ಸಿಡಿ ಇದೆ, ಶೀಘ್ರವೇ ಸ್ಫೋಟಗೊಳ್ಳುತ್ತೆ ಎಂಬ ಹೇಳಿಕೆ ಮೂರು ಪಕ್ಷಕ್ಕೂ ದೊಡ್ಡ ತಲೆನೋವಾಗಿದೆ.

    ಈ ನಡುವೆ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಕೃಷಿ ಸಚಿವ ಬಿ‌.ಸಿ. ಪಾಟೀಲ್, ಕ್ರೀಡಾ ಸಚಿವ ನಾರಾಯಣ ಗೌಡ, ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಅವರು ಮಾಧ್ಯಮಗಳು ತಮ್ಮ ವಿರುದ್ಧ ವರದಿ ಪ್ರಸಾರ ಮಾಡದಂತೆ ತಡೆ ಕೋರಿ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಸಚಿವರ ಈ ನಡೆ ಮತ್ತಷ್ಟು ಚರ್ಚೆ, ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇದನ್ನೂ ಓದಿರಿ ಸೆಕ್ಸ್​ ವಿಡಿಯೋದಲ್ಲಿ ರಮೇಶ್​ ಜಾರಕಿಹೊಳಿಯ ಮಚ್ಚೆ ಹುಡುಕಿದ ಮಹೇಶ್​ ಕುಮಟಳ್ಳಿ!

    ಅರ್ಜಿ ಸಲ್ಲಿಸಿದ 6 ನಾಯಕರು ಅಡಕತ್ತರಿಯಲ್ಲಿ ಸಿಲುಕಿದ್ದು, ಒಂದೇ ಬಾರಿ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು ಏಕೆ? ಯಾವ ಉದ್ದೇಶಕ್ಕೆ ಅರ್ಜಿ ಸಲ್ಲಿಸಿರೋದು? ರಾಜ್ಯದಲ್ಲಿ ಏನು ನಡೆಯುತ್ತಿದೆ? ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಎಂದು ರಾಜ್ಯ ಬಿಜಿಪಿ ನಾಯಕರಿಗೆ ಹೈಕಮಾಂಡ್​ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

    ಜಾರಕಿಹೊಳಿ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ರಾಜ್ಯದ ಕೆಲ ಸಚಿವರು-ಶಾಸಕರಿಗೆ ಸಿಡಿ ಟೆನ್ಶನ್ ಶುರುವಾಗಿದೆ. ರಾಜ್ಯದಲ್ಲಿ ಐವತ್ತಕ್ಕೂ ಹೆಚ್ಚು ಸಿಡಿಗಳು ಇವೆಯಂತೆ. ಜಾರಕಿಹೊಳಿ ಸಿಡಿ ಟ್ರೈಯಲ್ ಮಾತ್ರ, ರಿಯಲ್ ಬೇರೆ ಇದೆ ಅಂತಿದ್ದಾರಂತೆ ಕೆಲವರು. ಹಾಗಾಗಿ ಮೂರು ಪಕ್ಷಗಳ ಕೆಲ ಶಾಸಕರಲ್ಲಿ ಆತಂಕ ಎದುರಾಗಿದ್ದು, ತಮ್ಮ ವಿರುದ್ಧ ಸುದ್ದಿ ಪ್ರಸಾರ ಆಗದಂತೆ ಈಗ 26 ಜನಪ್ರತಿನಿಧಿಗಳು ಕೋರ್ಟ್​ ಮೋರೆ ಹೋಗುತ್ತಾರಂತೆ. ಮತ್ತಷ್ಟು ಶಾಸಕು ಸೋಮವಾರ ಹೋಗಲಿದ್ದಾರಂತೆ.

    ಬಿಜೆಪಿ ಶಾಸಕನ ತಾಯಿ ಕ್ರೈಸ್ತ ಧರ್ಮಕ್ಕೆ ಮತಾಂತರ! ಹಿಂದು ದೇವರ ಪೋಟೋ ನೋಡಿ ಮನೆ ತೊರೆದರು

    ನಮ್ಮ ವಿರುದ್ಧ ತೇಜೋವಧೆ ನಡೆಯುತ್ತಿದೆ.. 6 ಜನ ಮಾತ್ರವಲ್ಲ, ಎಲ್ಲ ಸಚಿವರೂ ಕೋರ್ಟ್​ ಹೋಗ್ತಾರೆ…

    ಅಕ್ಕನ ಕಣ್ಣೆದುರಲ್ಲೇ ಭಾವನ ಕಿವಿ ಕಚ್ಚಿ ತುಂಡರಿಸಿದ ಬಾಮೈದುನ!

    ಸೆಕ್ಸ್​ ವಿಡಿಯೋದಲ್ಲಿ ರಮೇಶ್​ ಜಾರಕಿಹೊಳಿಯ ಮಚ್ಚೆ ಹುಡುಕಿದ ಮಹೇಶ್​ ಕುಮಟಳ್ಳಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts