More

    ಪತಿ ಸಾವಿನ ಸುದ್ದಿ ತಿಳಿದ ಬಳಿಕವೂ ಮತದಾನ ಮಾಡಿ, ಇತರರಿಗೆ ಮಾದರಿಯಾದ ಮಹಿಳೆ!

    ಶಿವಮೊಗ್ಗ: ಅನಾರೋಗ್ಯದಿಂದ ಬಳಲುತ್ತಿದ್ದ ಪತಿ ಸಾವಿನ ಸುದ್ದಿ ತಿಳಿದ ಬಳಿಕವೂ ಮಹಿಳೆಯೊಬ್ಬರು ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸದೆ, ನೆಪ ಹೇಳುವ ಅನೇಕರಿಗೆ ಮಾದರಿಯಾಗಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಗುಡ್ಡೇಕೊಪ್ಪ ಗ್ರಾ.ಪಂಚಾಯಿತಿ ವ್ಯಾಪ್ತಿಯ ಆಡುಗೋಡಿನ ನಿವಾಸಿ ಕಲಾವತಿ ಮತದಾನ ಮಾಡಿದ ಮಹಿಳೆ.

    ಇದನ್ನೂ ಓದಿ: ಸರದಿಯಲ್ಲಿ ನಿಂತು ಮತ ಹಕ್ಕು ಚಲಾಯಿಸಿದ ಚುನಾವಣಾಧಿಕಾರಿ ಫೌಜಿಯಾ ತರನ್ನುಮ್

    ಅನಾರೋಗ್ಯ ಕಾರಣದಿಂದ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪತಿ ವೆಂಕಟೇಶ್ ತಡರಾತ್ರಿ ನಿಧನರಾಗಿದ್ದಾರೆ. ಪತಿಯ ಸಾವಿನ ಸುದ್ದಿ ತಿಳಿದು ತಕ್ಷಣವೇ ಮಂಗಳೂರಿಗೆ ಹೊರಡಬೇಕಿದ್ದ ಕಲಾವತಿ, ಅಲ್ಲಿಗೆ ಹೋಗದೆ ನೇರವಾಗಿ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ. ಪತಿಯ ಆಸೆಯಂತೆ ಮತದಾನ ಮಾಡಿದ್ದಾಗಿ ಮಹಿಳೆ ತಿಳಿಸಿದ್ದಾರೆ.

    ತಮ್ಮ ಪತಿ ಮತದಾನ ಮಾಡಬೇಕೆಂದು ಸದಾ ಹೇಳುತ್ತಿದ್ದರು. ಅವರ ಇಷ್ಟದ ವ್ಯಕ್ತಿಗೆ ವೋಟು ಹಾಕಬೇಕೆಂದು ಸಹ ಹೇಳುತ್ತಿದ್ದರು. ಹೀಗಾಗಿ ಅವರ ಇಚ್ಛೆಯಂತೆ ಮತ ಚಲಾಯಿಸಿದ್ದಾಗಿ ತಿಳಿಸಿದ ಕಲಾವತಿ, ವೋಟ್ ಹಾಕಿದ ಬಳಿಕವೇ ಮಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.

    ಇತನ ಮುಂದೆ ವಿರಾಟ್, ರೋಹಿತ್​ ಏನೇನೂ ಅಲ್ಲ; ನಿಮ್ಮ ಅನಿಸಿಕೆ ನಿಮಗೆ ಇರಲಿ, ಮಾಜಿ ಸ್ಟಾರ್​ ಹೇಳಿಕೆಗೆ ಫ್ಯಾನ್ಸ್​ ಕಿಡಿ

    5 ರೂ. ಪಾರ್ಲೆ-ಜಿ ಬಿಸ್ಕತ್​ ಬೆಲೆ ದುಬೈ, ಪಾಕಿಸ್ತಾನ ರಾಷ್ಟ್ರಗಳಲ್ಲಿ ಎಷ್ಟಿದೆ ಗೊತ್ತಾ? ಕೇಳಿದ್ರೆ ದಂಗಾಗ್ತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts